ಆಸ್ಟ್ರೇಲಿಯನ್ ಓಪನ್‌ ಟೆನಿಸ್ ಟೂರ್ನಿಯಿಂದ ಹಿಂದೆ ಸರಿದ ಫೆಡರರ್

Published : Dec 29, 2020, 01:32 PM IST
ಆಸ್ಟ್ರೇಲಿಯನ್ ಓಪನ್‌ ಟೆನಿಸ್ ಟೂರ್ನಿಯಿಂದ ಹಿಂದೆ ಸರಿದ ಫೆಡರರ್

ಸಾರಾಂಶ

ಬಲಗಾಲಿನ ಮಂಡಿಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಸ್ವಿಸ್‌ ಟೆನಿಸ್ ದಿಗ್ಗಜ ರೋಜರ್‌ ಫೆಡರರ್ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಮೆಲ್ಬರ್ನ್(ಡಿ.29)‌: ದಾಖಲೆಯ 20 ಗ್ರ್ಯಾನ್‌ಸ್ಲಾಮ್‌ ವಿಜೇತ, ಸ್ವಿಜರ್‌ಲೆಂಡ್‌ ಟೆನಿಸಿಗ ರೋಜರ್‌ ಫೆಡರರ್‌, 2021ರ ಫೆ.8 ರಿಂದ ಆರಂಭವಾಗಲಿರುವ ಆಸ್ಪ್ರೇಲಿಯನ್‌ ಓಪನ್‌ನಿಂದ ಹಿಂದೆ ಸರಿದಿದ್ದಾರೆ. 

ಫೆಡರರ್‌ 2 ಬಾರಿ ಬಲಗಾಲಿನ ಮಂಡಿಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಚೇತರಿಸಿಕೊಳ್ಳುತ್ತಿರುವ ಕಾರಣದಿಂದ ವರ್ಷದ ಮೊದಲ ಗ್ರ್ಯಾನ್‌ಸ್ಲಾಮ್‌ನಲ್ಲಿ ಆಡುತ್ತಿಲ್ಲ ಎಂದು ವಕ್ತಾರರೊಬ್ಬರು ಹೇಳಿದ್ದಾರೆ. 2021ರಲ್ಲಿ ಫೆಡರರ್‌ ಕಮ್‌ಬ್ಯಾಕ್‌ ಮಾಡಲಿದ್ದಾರೆ ಎನ್ನಲಾಗಿದೆ.

ಧೋನಿ - ಫೆಡರರ್: ದೀಪಿಕಾ ಪಡುಕೋಣೆ ಡೇಟ್ ಮಾಡಿದ ಕ್ರೀಡಾಪಟುಗಳು!

ಮರ್ರೆಗೆ ವೈಲ್ಡ್‌ ಕಾರ್ಡ್‌:

ಬ್ರಿಟನ್‌ನ ಟೆನಿಸಿಗ ಆ್ಯಂಡಿ ಮರ್ರೆಗೆ ಆಸ್ಪ್ರೇಲಿಯಾ ಓಪನ್‌ಗೆ ವೈಲ್ಡ್‌ ಕಾರ್ಡ್‌ ಪ್ರವೇಶ ದೊರೆತಿದೆ. ಮರ್ರೆ 5 ಬಾರಿ ಆಸ್ಪ್ರೇಲಿಯನ್‌ ಓಪನ್‌ನಲ್ಲಿ ಫೈನಲ್‌ ಪ್ರವೇಶಿಸಿದ್ದರು. ಕೆಲ ವರ್ಷಗಳಿಂದ ಗಾಯ ಹಾಗೂ ಶಸ್ತ್ರಚಿಕಿತ್ಸೆಗಳಿಂದ ಮರ್ರೆ ಬಳಲಿದ್ದಾರೆ. ಮಾಜಿ ನಂ.1 ಟೆನಿಸಿಗ, ಸದ್ಯ 122ನೇ ರಾರ‍ಯಂಕಿಂಗ್‌ ಹೊಂದಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹಾಲಿ ಚಾಂಪಿಯನ್‌ ಕಾರ್ಲೋಸ್‌ ಆಲ್ಕರಜ್‌, ಅರೈನಾ ಸಬಲೆಂಕಾ ಅಬ್ಬರ; US Open 3ನೇ ಸುತ್ತಿಗೆ ಲಗ್ಗೆ
ದೇಶಕ್ಕಾಗಿ 4 ಚಿನ್ನದ ಪದಕ ಗೆದ್ದ ಕ್ರೀಡಾಪಟುವಿನ ಕಣ್ಣೀರ ಕಥೆ: ಕುಟುಂಬ ಸಾಕಲು ಹಗಲಲ್ಲಿ ಕ್ಯಾಬ್ ಚಾಲನೆ, ಸಂಜೆ ತರಕಾರಿ ವ್ಯಾಪಾರ!