Commonwealth Games: ಜುಡೋದಲ್ಲಿ ಬೆಳ್ಳಿ ಗೆದ್ದ ಸುಶೀಲಾ, 48 ಸೆಕೆಂಡ್‌ನಲ್ಲೇ ಪಂದ್ಯ ಗೆದ್ದ ವಿಜಯ್‌ಗೆ ಕಂಚು!

By Santosh Naik  |  First Published Aug 1, 2022, 11:09 PM IST

2022 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಮತ್ತೊಂದು ಬೆಳ್ಳಿ ಪದಕ ಜಯಿಸಿದೆ. ಎಲ್ ಸುಶೀಲಾ ದೇವಿ 48 ಕೆಜಿ ಜೂಡೋ ಫೈನಲ್‌ನಲ್ಲಿ ನಿರಾಸೆ ಕಾಣುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟರೆ,  ವಿಜಯ್ ಕುಮಾರ್ ಯಾದವ್ 60 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದರು.
 


ಬರ್ಮಿಂಗ್‌ಹ್ಯಾಂ (ಆ.1): ಜುಡೋಕಾ ಸುಶೀಲಾ ದೇವಿ ಲಿಕ್ಮಾಬಾಮ್ ಅವರು ಬರ್ಮಿಂಗ್‌ಹ್ಯಾಂನಲ್ಲಿ ನಡೆಯುತ್ತಿರುವ 2022 ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದಾರೆ. ಇದು ವೇಟ್‌ಲಿಫ್ಟಿಂಗ್‌ ಸ್ಪರ್ಧೆಯ ಹೊರತಾಗಿ ಭಾರತ ಗೇಮ್ಸ್‌ನಲ್ಲಿ ಗೆದ್ದ ಮೊದಲ ಪದಕಗಳು ಎನಿಸಿದೆ. ಫೈನಲ್‌ನಲ್ಲಿ ಅವರು ದಕ್ಷಿಣ ಆಫ್ರಿಕಾದ ಮೈಕೆಲಾ ವೈಟ್‌ಬೂಯಿ ಅವರ ಎದುರು ಸೋಲು ಕಂಡರು. ಸುಶೀಲಾ ದೇವಿ ಮದಕ ಸಾಧನೆ ಮಾಡಿದ ಕೆಲ ಹೊತ್ತಿನಲ್ಲಿಯೇ ಪುರುಷರ 60 ಕೆಜಿ ವಿಭಾಗದ ಜುಡೋ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚಿನ ಪದಕ ಗೆಲ್ಲಿಸಿಕೊಟ್ಟರು.  ಕಂಚಿನ ಪದಕದ ಹೋರಾಟದಲ್ಲಿ ಸೈಪ್ರಸ್‌ನ ಪೆಟ್ರೋಸ್ ಕ್ರಿಸ್ಟೋಡೌಲಿಡೆಸ್ ಅವರನ್ನು ಸೋಲಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಸುಶೀಲಾ ದೇವಿ ಹಾಗೂ ವೈಟ್‌ಬೂಯಿ ನಡುವಿನ ಮುಖಾಮುಖಿ ರೋಚಕರವಾಗಿ ಸಾಗಿತ್ತು. ಅಂತಿಮ ಸೀಟಿ ಮೊಳಗುವವರೆಗೂ ಇಬ್ಬರೂ ಸ್ಪರ್ಧಿಗಳು ಒಂದೇ ಒಂದು ಅಂಕವನ್ನು ಗೆಲ್ಲುವಲ್ಲಿ ಯಶ ಕಂಡಿರಲಿಲ್ಲ. ಕೊನೆಗೆ ಫಲಿತಾಂಶ ನಿರ್ಣಯಕ್ಕಾಗಿ ಗೋಲ್ಡರ್‌ ಸ್ಕೋರ್‌ ಅವಧಿಯನ್ನು ನೀಡಲಾಗಿತ್ತು. ಈ ಅವಧಿಯಲ್ಲಿ ಸುಶೀಲಾ ದೇವಿ ಅವರ ಭುಜಗಳನ್ನು ಮ್ಯಾಟ್‌ಗೆ ತಾಕಿಸುವಲ್ಲಿ ಯಶ ಕಂಡ ದಕ್ಷಿಣ ಆಫ್ರಿಕಾದ  ಜುಡೋಕಾ ಚಿನ್ನದ ಪದಕಕ್ಕೆ ಕೊರಳೊಡ್ಡಿದರೆ, ಸುಶೀಲಾ ದೇವಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.

ದಕ್ಷಿಣ ಆಫ್ರಿಕಾದ ಎದುರಾಳಿಯ ವಿರುದ್ಧದ ಅಂತಿಮ ಹಣಾಹಣಿಗೂ ಮುನ್ನ ಸುಶೀಲಾ ದೇವಿ (Sushila Devi) ಭರ್ಜರಿ ನಿರ್ವಹಣೆ ನೀಡುವ ಮೂಲಕ ಅಂತಿಮ ಹೋರಾಟಕ್ಕೆ ಇಳಿದಿದ್ದರು. ಕ್ವಾರ್ಟರ್ ಫೈನಲ್‌ನಲ್ಲಿ ಅವರು ಮಲವಿಯನ್ ಜೂಡೋಕಾ ಹ್ಯಾರಿಯೆಟ್ ಬೋನಿಫೇಸ್ ವಿರುದ್ಧ 10-0 ಗೆಲುವು ದಾಖಲಿಸಿದರು. ಸೆಮಿ ಫೈನಲ್‌ನಲ್ಲಿ ಆಕೆ ಮತ್ತೊಮ್ಮೆ ತನ್ನ ಎದುರಾಳಿಯನ್ನು 10-0 ಅಂತರದಿಂದ ಸೋಲಿಸಿದರು. ಈ ಹಂತದಲ್ಲಿ ಮಾರಿಷಷ್‌ನ ಜೂಡೋಕಾ ಪ್ರಿಸ್ಸಿಲ್ಲಾ ಮೊರಾಂಡ್‌ರನ್ನು ಸೋಲಿಸಿದರು.

Tap to resize

Latest Videos

Commonwealth Games: ಲಾನ್ ಬಾಲ್ಸ್‌ ಫೈನಲ್ ಪ್ರವೇಶಿಸಿ ಚರಿತ್ರೆ ಸೃಷ್ಟಿಸಿದ ಭಾರತ ಮಹಿಳಾ ತಂಡ..!

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸುಶೀಲಾ ದೇವಿ ಅವರ ಎರಡನೇ ಬೆಳ್ಳಿ ಪದಕವಾಗಿದೆ. 2014ರಲ್ಲಿ ಗ್ಲಾಸ್ಗೋದಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 19ರ ಹರೆಯದ ಸುಶೀಲಾ ದೇವಿ ಇದೇ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಆ  ಮೂಲಕ ಜುಡೋದ ಈ ವಿಭಾಗದಲ್ಲಿ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಭಾರತೀಯ ಜುಡೋಕಾ ಇವರಾಗಿದ್ದಾರೆ. ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಗೇಮ್ಸ್‌ನಲ್ಲಿ ಎರಡು ಪದಕ ಗೆದ್ದ ಮೊದಲ ಭಾರತೀಯ ಜುಡೋ ಸ್ಪರ್ಧಿ ಇವರಾಗಿದ್ದಾರೆ. ವೇಟ್‌ಲಿಫ್ಟರ್‌ಗಳಾದ ಸಂಕೇತ್ ಸರ್ಗರ್ ಮತ್ತು ಬಿಂದ್ಯಾರಾಣಿ ದೇವಿ ನಂತರ ಅವರು ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಭಾರತಕ್ಕೆ ಮೂರನೇ ಬೆಳ್ಳಿ ಪದಕ ಗೆಲ್ಲಿಸಿಕೊಟ್ಟ ಸ್ಪರ್ಧಿ ಎನಿಸಿದರು. ಸುಶೀಲಾ ದೇವಿ ಅವರು 2020 ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಜೂಡೋದಲ್ಲಿ ಅರ್ಹತೆ ಪಡೆದ ಮೊದಲ ಭಾರತೀಯ ಸ್ಪರ್ಧಿ ಕೂಡ ಆಗಿದ್ದರು.

Commonwealth Games 2022: ಚಿನ್ನ ಗೆದ್ದ ಅಚಿಂತಾ ಶೆಯುಲಿಗೆ ಜೈ ಹೋ ಎಂದು ಭಾರತೀಯ ಸೇನೆ..!

48 ಸೆಕೆಂಡ್‌ನಲ್ಲೇ ಪಂದ್ಯ ಗೆದ್ದ ವಿಜಯ್‌: ಇನ್ನು ವಿಜಯ್‌ ಕುಮಾರ್‌ (Vijay Kumar Yadav), ಸೈಪ್ರಸ್‌ನ ಪೆಟ್ರೋಸ್ ಕ್ರಿಸ್ಟೋಡೌಲಿಡೆಸ್ ವಿರುದ್ಧ ಸುಲಭವಾಗಿ ಗೆಲುವು ಕಂಡರು. ಎದುರಾಳಿಯನ್ನು ಅನೇಕಬಾರಿ ಉರುಳಿಸುವಲ್ಲಿ ಯಶಸ್ವಿಯಾದ ವಿಜಯ್‌ ಕುಮಾರ್‌ ಯಾದವ್‌ 10 ಅಂಕ ಸಂಪಾದಿಸಿದರು. ಇದು ಇಪ್ಪೋನ್‌ ಎನಿಸಿಕೊಂಡಿತು. ಇಪ್ಪೋನ್‌ ಎಂದರೆ ಜುಡೋ ಸ್ಪರ್ಧೆಯಲ್ಲಿ ನಾಕೌಟ್‌ ಎಂದು ಅರ್ಥೈಸಿಕೊಳ್ಳಬಹುದು. ಕೇವಲ 48 ಸೆಕೆಂಡ್‌ಗಳಲ್ಲೇ ವಿಜಯ್‌ ಕುಮಾರ್‌ ಯಾದವ್‌ ಕಂಚಿನ ಪದಕ ಜಯಿಸಿದರು. ಭಾರತ ಈವರೆಗೂ ಗೇಮ್ಸ್‌ನಲ್ಲಿ 8 ಪದಕಗಳನ್ನು ಗೆದ್ದಂತಾಗಿದೆ. ಅದಲ್ಲದೆ, ಸೋಮವಾರ ಮಹಿಳೆಯ ಲಾನ್ಸ್‌ ಬಾಲ್‌ ಫೋರ್ಸ್‌ ವಿಭಾಗದಲ್ಲಿ ಐತಿಹಾಸಿಕ ಪದಕವನ್ನು ಖಚಿತಪಡಿಸಿಕೊಂಡಿದೆ.

click me!