ಎಟಿಪಿ ವಿಶ್ವ ಟೂರ್‌ ಫೈನಲ್ಸ್‌: ಡೇನಿಲ್‌ ಮೆಡ್ವೆಡೆವ್‌ ಚಾಂಪಿಯನ್

Suvarna News   | Asianet News
Published : Nov 23, 2020, 11:20 AM IST
ಎಟಿಪಿ ವಿಶ್ವ ಟೂರ್‌ ಫೈನಲ್ಸ್‌: ಡೇನಿಲ್‌ ಮೆಡ್ವೆಡೆವ್‌ ಚಾಂಪಿಯನ್

ಸಾರಾಂಶ

ಎಟಿಪಿ ವಿಶ್ವ ಟೂರ್‌ ಫೈನಲ್ಸ್‌ ಟೆನಿಸ್‌ ಟೂರ್ನಿಯಲ್ಲಿ ಆಸ್ಟ್ರೀಯಾದ ಡೊಮಿನಿಕ್ ಥೀಮ್‌ ಮಣಿಸಿ ರಷ್ಯಾದ ಡೇನಿಲ್‌ ಮೆಡ್ವೆಡೆವ್‌ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಲಂಡನ್‌(ನ.23): ಎಟಿಪಿ ವಿಶ್ವ ಟೂರ್‌ ಫೈನಲ್ಸ್‌ ಟೆನಿಸ್‌ ಟೂರ್ನಿಯಲ್ಲಿ ರಷ್ಯಾದ ಡೇನಿಲ್‌ ಮೆಡ್ವೆಡೆವ್‌ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಯುಎಸ್ ಓಪನ್ ಚಾಂಪಿಯನ್ ಡೊಮಿನಿಕ್‌ ಥೀಮ್‌ ಎದುರು ಪ್ರಾಬಲ್ಯ ಮೆರೆದ ಮೆಡ್ವೆಡೆವ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.

ಹೌದು, ಎಟಿಪಿ ವಿಶ್ವ ಟೂರ್‌ ಫೈನಲ್ಸ್‌ ಟೆನಿಸ್‌ ಟೂರ್ನಿಯ ಫೈನಲ್‌ನಲ್ಲಿ ನಂ.3 ಆಸ್ಟ್ರಿಯಾದ ಡೊಮಿನಿಕ್‌ ಥೀಮ್‌ ಹಾಗೂ ನಂ.4 ರಷ್ಯಾದ ಡೇನಿಲ್‌ ಮೆಡ್ವೆಡೆವ್‌ ಮುಖಾಮುಖಿಯಾಗಿದ್ದರು. ಖಾಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಡೊಮಿನಿಕ್ ಥಿಮ್ ವಿರುದ್ಧ 4-6, 7-6(7/2) ಗಹಾಗೂ 6-4 ಸೆಟ್‌ಗಳಿಂದ ಜಯಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಇದಕ್ಕೂ ಮೊದಲು ವಿಶ್ವ ನಂ.1 ಸರ್ಬಿಯಾದ ನೊವಾಕ್‌ ಜೋಕೋವಿಚ್‌ ಹಾಗೂ ನಂ.2 ಸ್ಪೇನ್‌ನ ರಾಫೆಲ್‌ ನಡಾಲ್‌ ಫೈನಲ್‌ ಪ್ರವೇಶಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಜೋಕೋವಿಚ್‌, ಥೀಮ್‌ ಎದುರು ಮತ್ತು ನಡಾಲ್‌, ಮಡ್ವೆಡೆವ್‌ ವಿರುದ್ಧ ಸೋತು ಹೊರಬಿದ್ದಿದ್ದಾರೆ. 

ಲಾಕ್‌ಡೌನ್‌ ಬಳಿಕ ಬೆಂಗಳೂರಲ್ಲಿ ಮೊದಲ ಟೆನಿಸ್‌ ಟೂರ್ನಿ

ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ಸೆಮೀಸ್‌ನಲ್ಲಿ ನಡಾಲ್‌, ಮೆಡ್ವೆಡೆವ್‌ ಎದುರು 6-3, 6-7(4-7), 3-6 ಸೆಟ್‌ಗಳಲ್ಲಿ ಪರಾಭವ ಹೊಂದಿದರು. ಶನಿವಾರ ನಡೆದಿದ್ದ ಸೆಮೀಸ್‌ನಲ್ಲಿ ಜೋಕೋವಿಚ್‌, ಥೀಮ್‌ ವಿರುದ್ಧ 5-7, 7-6(12-10), 6-7(5-7) ಸೆಟ್‌ಗಳಲ್ಲಿ ಸೋತಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇಂದಿನಿಂದ ಆಸ್ಟ್ರೇಲಿಯನ್ ಓಪನ್ ಟೆನಿಸ್‌; 25ನೇ ಗ್ರ್ಯಾನ್‌ಸ್ಲಾಂ ಮೇಲೆ ಕಣ್ಣಿಟ್ಟ ಜೋಕೋವಿಚ್
ಅಕ್ರಮ ಸಂಬಂಧದ ಆರೋಪ ಎದುರಿಸುತ್ತಿರೋ ಮೇರಿ ಕೋಮ್ ಟಾಪ್ 8 ಕ್ಯೂಟ್ ಫೋಟೋಗಳಿವು!