ಇಸ್ರೇಲಿ ಅಥ್ಲೀಟ್‌ಗೆ ಕೈಕುಲುಕದೇ 'ಅಲ್ಲಾಹು ಅಕ್ಬರ್‌..' ಎಂದ ಜುಡೂಕಾ, ಮರುಪಂದ್ಯದಲ್ಲಿ ಭುಜ ಮುರಿದುಕೊಂಡು ಬಿದ್ದ!

By Santosh Naik  |  First Published Jul 29, 2024, 1:57 PM IST


ತಜಕಿಸ್ತಾನದ ಜುಡೋ ಅಥ್ಲೀಟ್‌ ಒಲಿಂಪಿಕ್ಸ್‌ನಲ್ಲಿ ಇಸ್ರೇಲಿ ಅಥ್ಲೀಟ್‌ನ ಕೈಕುಲುಕಲು ನಿರಾಕರಿಸಿದರು. ಅದರ ಬದಲು ಅಲ್ಲಾಹು ಅಕ್ಬರ್‌ ಎಂದು ಘೋಷಣೆ ಕೂಗಿದ್ದರು. 
 


ಪ್ಯಾರಿಸ್‌ (ಜು.29): ಒಲಿಂಪಿಕ್ಸ್‌ನ ಜುಡೋ ಸ್ಪರ್ಧಿ ಪಂದ್ಯದ ಬಳಿಕ ತನ್ನ ಎದುರಾಳಿಯಾಗಿದ್ದ ಇಸ್ರೇಲಿ ಜುಡೋ ಸ್ಪರ್ಧಿಗೆ ಕೈಕುಲುಕಲು ನಿರಾಕರಿಸಿದ್ದ. ಸಾಮಾನ್ಯವಾಗಿ ಒಲಿಂಪಿಕ್ಸ್‌ನಲ್ಲಿ ಪಂದ್ಯ ಮುಗಿದ ಬಳಿಕ ಇಬ್ಬರೂ ಸ್ಪರ್ಧಿಗಳು ಹಸ್ತಲಾಘವ ಮಾಡೋದು ಸಾಮಾನ್ಯ ಪ್ರಕ್ರಿಯೆ. ಆದರೆ, ತಜಕಿಸ್ತಾನದ ಸ್ಪರ್ಧಿ ಹಸ್ತಲಾಘವ ಮಾಡದೇ ಅಲ್ಲಾಹು ಅಕ್ಬರ್‌ ಎಂದು ಕೂಗಿದ್ದರು. ಮರು ಪಂದ್ಯದಲ್ಲಿಯೇ ಆತ ಭುಜ ಮುರಿದುಕೊಂಡು ಬಿದ್ದಿದ್ದ. ಇದರ ಬೆನ್ನಲ್ಲಿಯೇ ಸೋಶಿಯಲ್‌ ಮೀಡಿಯಾದಲ್ಲಿ ಇದು ಇನ್ಸ್ಟಂಟ್‌ ಕರ್ಮ ಎಂದು ಆತನ ಕಾಲೆಳೆದಿದ್ದಾರೆ. ಭಾನುವಾರದ 16 ರ ಸುತ್ತಿನಲ್ಲಿ ಅವರ ಪಂದ್ಯದ ನಂತರ ತಜಕಿಸ್ತಾನದ ಜುಡೋಕಾ ನುರಾಲಿ ಎಮೋಮಾಲಿ ಅವರು ತಮ್ಮ ಇಸ್ರೇಲಿ ಎದುರಾಳಿ ತೋಹರ್ ಬುಟ್ಬುಲ್ ಅವರೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಿದರು. ಪಂದ್ಯ ಗೆದ್ದಿದ್ದ ಎಮೋಮಾಲಿ, ಎದುರಾಳೀ ಆಟಗಾರನಿಗೆ ಕನಿಷ್ಠ ಹಸ್ತಲಾಘವ ಮಾಡುವ ಬದ್ಧತೆ ತೋರದೇ ಮ್ಯಾಟ್‌ನಿಂದ ಹೊರನಡೆಯುವ ನಿರ್ಧಾರ ಮಾಡಿದರು.
ಮ್ಯಾಚ್‌ ಮುಕ್ತಾಯವಾಗಿ ಮ್ಯಾಟ್‌ನಿಂದ ಹೊರಹೋಗುವ ಮುನ್ನ ನುರಾಲಿ ಎಮೋಮಾಲಿ ಮುಸ್ಲಿಂ ಪ್ರಾರ್ಥನೆ ಮಾಡುವ ಸಿಂಬಲ್‌ನೊಂದಿಗೆ ಅಲ್ಲಾಹು ಅಕ್ಬರ್‌ ಎಂದು ಹೇಳಿದ್ದ ಎಂದು ಎಕ್ಸ್‌ ಯೂಸರ್‌ಗಳು ತಿಳಿಸಿದ್ದಾರೆ. ಇದನ್ನು ಫಿಂಟ್‌ ಆಪ್‌ ತಾವ್‌ಹೀದ್‌ ಎಂದೂ ಕರೆಯುತ್ತಾರೆ. ಇದು ಇಸ್ಲಾಮಿಕ್ ನಂಬಿಕೆಯ ಉಲ್ಲೇಖವಾಗಿದ್ದು, "ಅಲ್ಲಾ ಹೊರತುಪಡಿಸಿ ಯಾವುದೇ ದೇವರು ಇಲ್ಲ ಮತ್ತು ಮುಹಮ್ಮದ್ ಅವನ ಪ್ರವಾದಿ." ಎನ್ನುವುದಾಗಿದೆ.

ಅದಾದ ಬಳಿಕ ಮರು ಪಂದ್ಯದಲ್ಲಿ ಎಮೋಮಾಲಿ, ಜಪಾನ್‌ನ ಒಲಿಂಪಿಯನ್‌ ಅಥ್ಲೀಟ್‌ ಹಿಫುಮಿ ಅಬೆ ವಿರುದ್ಧ ಸ್ಪರ್ಧೆ ಮಾಡಿದ್ದರು. ಆದರೆ, ಈ ಪಂದ್ಯ ಎಮೋಮಾಲಿ ಪಾಲಿಗೆ ದುಸ್ವಪ್ನವಾಗಿತ್ತು. ಪಂದ್ಯದ ಕೊನೆಯಲ್ಲಿ ಅಬೆ, ಎಮೋಮಾಲಿಯನ್ನು ನೆಲಕ್ಕೆ ಉರುಳಿಸುವಲ್ಲಿ ಯಶಸ್ವಿಯಾಗಿದ್ದರು. ಎಮೋಮಾಲಿಯ ಎಡ ಭುಜ ನೆಲ ತಾಕಿತ್ತು. ಇದನ್ನು ಅವರು ಬಿದ್ದ ರೀತಿ ಹಾಗೂ ಅಬೆಯ ತೂಕದ ಕಾರಣದಿಂದಾಗಿ ಎಮೋಮಾಲಿಯ ಎಡ ಭುಜ ಬೆಂಡ್‌ ಆಗಿ ಡಿಸ್‌ಲೊಕೇಟ್‌ ಆಯಿತು. ಗಂಭೀರವಾಗಿ ಗಾಯಗೊಂಡಿದ್ದ ಎಮೋಮಾಲಿಯನ್ನು ಒಲಿಂಪಿಕ್‌ ಸ್ಟಾಫ್‌ ಸದಸ್ಯರು ಎತ್ತಿಕೊಂಡು ಬಂದು ಮ್ಯಾಟ್‌ನ ಹೊರಗೆ ಇರಿಸಿದರು.

ಹಿಂದಿನ ಪಂದ್ಯದಲ್ಲಿ ಈತ ಎದುರಾಳಿ ಸ್ಪರ್ಧಿಗೆ ಹಸ್ತಲಾಘವ ಮಾಡಲು ನಿರಾಕರಿಸಿದ್ದ. ಕೆಟ್ಟ ಕ್ರೀಡಾಸ್ಫೂರ್ತಿಗೆ instant karma ಪಡೆದುಕೊಂಡಿದ್ದಾರೆ ಎಂದು ಸೋಶಿಯಲ್‌ ಮೀಡಿಯಾ ಮಂದಿ ಟೀಕಿಸಿದ್ದಾರೆ. 'ತಜಕಿಸ್ತಾನದ ನುರಾಲಿ ಎಮೋಮಾಲಿ ಕಳೆದ ಪಂದ್ಯದಲ್ಲಿ ಇಸ್ರೇಲಿ ಜುಡೋ ಸ್ಪರ್ಧೆ ಬರುಚ್ ಶ್ಮೈಲೋವ್ ಅವರೊಂದಿಗೆ ಕೈಕುಲುಕಲು ನಿರಾಕರಿಸಿದ್ದರು. ಅಲ್ಲದೆ, ಅಲ್ಲಾಹು ಅಕ್ಬರ್‌ ಎಂದೂ ಹೇಳಿದ್ದರು. ಈಗ ನೋಡಿ ಅವರು ಮ್ಯಾಟ್‌ನ ಮೇಲೆಯೇ ಭುಜ ಮುರಿದುಕೊಂಡು ಬಿದ್ದಿದ್ದಾರೆ. ಇದು ಒಲಿಂಪಿಕ್‌ ಲೆವಲ್‌ನ ಕರ್ಮ ಎಂದು ಇಸ್ರೇಲ್‌ ಪರ ಗುಂಪು  StandWithUsನ ವ್ಯವಸ್ಥಾಪಕ ನಿರ್ದೇಶಕ ಮೈಕೆಲ್‌ ಡಿಕನ್‌ಸನ್‌ ಹೇಳಿದ್ದಾರೆ.

Tap to resize

Latest Videos

undefined

ಕೋಚ್‌ ಜೊತೆ ಕಿತ್ತಾಡಿಕೊಂಡಿದ್ದ ಮನು ಭಾಕರ್‌ ಜೀವನ ಬದಲಾಯಿಸಿದ್ದು ಅದೇ ಕೋಚ್‌ನ 'ಆ ಒಂದು ಕಾಲ್‌..'!

'ಕರ್ಮ ಈಸ್‌ ಬಿಚ್‌..' ಎಂದು ಇಸ್ರೇಲ್‌ ಪರ ಇನ್‌ಫ್ಲುಯೆನ್ಸರ್‌ ಎಮಿಲಿ ಶಾರ್ಡೆರ್‌ ಹೇಳಿದ್ದಾರೆ. ಅಲ್ಜೀರಿಯಾದ ಎದುರಾಳಿ ಮೆಸ್ಸೌದ್ ರೆಡೌನ್ ಡ್ರಿಸ್ ಅವರು ಸ್ಪರ್ಧೆಯಿಂದ ಹೊರಬಿದ್ದ ನಂತರ ಇಸ್ರೇಲಿ ಜೂಡೋಕಾ ಬುಟ್ಬುಲ್ ಸೋಮವಾರ ಮತ್ತೊಂದು ಸುತ್ತಿಗೆ ಮುನ್ನಡೆಯುತ್ತಿದ್ದಾರೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

ಕಳೆದ ವರ್ಷ ಶೂಟಿಂಗ್‌ನಿಂದ ದೂರವಾಗಲು ನಿರ್ಧರಿಸಿದ್ದ ಮನು ಭಾಕರ್‌ಗೆ ಈಗ ಒಲಿಂಪಿಕ್ಸ್‌ ಪದಕ! ಇಂಟ್ರೆಸ್ಟಿಂಗ್ ಡೀಟೈಲ್ಸ್

click me!