ಆರ್ಮ ರಸ್ಲಿಂಗ್: ವಿಶ್ವದ ಬಲಾಢ್ಯ ಬಾಡಿ ಬಿಲ್ಡರ್ ಸೋಲಿಸಿದ ಭಾರತದ ರಾಹುಲ್ ಪಣಿಕ್ಕರ್!

By Suvarna News  |  First Published Jan 9, 2021, 3:53 PM IST

ಲ್ಯಾರಿ ವೀಲ್ಸ್, ಈ ಹೆಸರು ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ಚಿರಪರಿಚಿತ. ಕಾರಣ ವಿಶ್ವದ ಅತ್ಯಂತ ಬಲಿಷ್ಠ ಬಾಲಿಬಿಲ್ಡರ್ ಅನ್ನೋ ಖ್ಯಾತಿಗೆ ಲ್ಯಾರಿ ವೀಲ್ಸ್ ಪಾತ್ರರಾಗಿದ್ದಾರೆ. ಆದರೆ ಇದೇ ಲ್ಯಾರಿ ವೀಲ್ಸ್‌ಗೆ ಭಾರತದ ಆರ್ಮ್ ರಸ್ಲಿಂಗ್ ಚಾಂಪಿಯನ್ ಶಾಕ್ ನೀಡಿದ್ದಾರೆ.
 


ದುಬೈ(ಜ.09): ಆರ್ಮ್ ರಸ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ರಾಹುಲ್ ಪಣಿಕ್ಕರ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ವಿಶ್ವದ ಸ್ಟ್ರಾಂಗೆಸ್ಟ್ ಬಾಡಿ ಬಿಲ್ಡರ್  ಲ್ಯಾರಿ ವೀಲ್ಸ್‌ಗೆ ಶಾಕ್ ಮೇಲೆ ಶಾಕ್ ನೀಡಿದ್ದಾರೆ. ದುಬೈನಲ್ಲಿ ನಡೆದ ತೋಳು ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ರಾಹುಲ್ ಪಣಿಕ್ಕರ್, ಬಲಿಷ್ಠ ಲ್ಯಾರಿ ವೀಲ್ಸ್‌ಗೆ ಸೋಲುಣಿಸಿದ್ದಾರೆ. ಈ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಭಾರತದ ತಾರಾ ಕುಸ್ತಿಪಟು ವಿನೇಶ್‌ಗೆ ವಿದೇಶದಲ್ಲಿ ತರಬೇತಿ..!.

Tap to resize

Latest Videos

ಅತ್ಯಂತ ಕಠಿಣ ಹೋರಾಟದಲ್ಲಿ ಆರಂಭಿ 2 ಸುತ್ತುಗಳನ್ನು ಸೋತ ರಾಹುಲ್ ಪಣಿಕ್ಕರ್, ದೃತಿಗೆಡಲಿಲ್ಲ. ಬಳಿಕ 3 ಸುತ್ತುಗಳನ್ನು ಗೆಲ್ಲೋ ಮೂಲಕ ಲ್ಯಾರೀ ವೀಲ್ಸ್‌ಗೆ ಆಘಾತ ನೀಡಿದ್ದರು. ಕಾರಣ ಆರಂಭಿಕ 2 ಸುತ್ತು ರಾಹುಲ್ ಪಣಿಕ್ಕರ್ ಸೋತಾಗ ಅಲ್ಲಿ ನೆರೆದಿದ್ದವರಿಗೆ ಅಚ್ಚರಿಯಾಗಿಲ್ಲ. ಕಾರಣ ಇವರಿಬ್ಬರನ್ನು ನೋಡಿದರೆ ಲ್ಯಾರಿ ವೀಲ್ಸ್‌ಗೆ ಸುಲುಭ ಗೆಲುವು ನಿಶ್ಚಿತ ಎಂದು ಎಲ್ಲರು ಭಾವಿಸಿದ್ದರು.

ಆದರೆ ರಾಹುಲ್ ಪಣಿಕ್ಕರ್ ನಂತರದ 3 ಸುತ್ತುಗಳನ್ನು ಗೆದ್ದ ಪರಿ ಅದ್ಬುತ. ಕಠಿಣ ಹೋರಾಟ ನಡೆಸಿ ಗೆದ್ದ ರಾಹುಲ್ ಪಣಿಕ್ಕರ್ ಹೊಸ ದಾಖಲೆ ಬರೆದಿದ್ದಾರೆ. ರಾಹುಲ್ ಪಣಿಕ್ಕರ್ ಭಾರತದ ಆರ್ಮ್ ರಸ್ಲಿಂಗ್ ಚಾಂಪಿಯನ್ ಆಗಿದ್ದಾರೆ. ಇದೀಗ ವಿಶ್ವದ ಬಲಿಷ್ಠ ಬಾಡಿ ಬಿಲ್ಡರ್ ಲ್ಯಾರಿ ವೀಲ್ಸ್ ಸೋಲಿಸೋ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ. ಸ್ವತಃ ರಾಹುಲ್ ಪಣಿಕ್ಕರ್ ರೋಚಕ ವಿಡಿಯೋ ಶೇರ್ ಮಾಡಿದ್ದಾರೆ.

 

click me!