Australian Open : ನಡಾಲ್‌ 21ನೇ ಗ್ರ್ಯಾನ್‌ಸ್ಲಾಂ ದಾಖಲೆಗೆ ಎರಡೇ ಹೆಜ್ಜೆ ಬಾಕಿ!

By Kannadaprabha News  |  First Published Jan 26, 2022, 4:45 AM IST

ಸ್ಪೇನ್ ನ ದಿಗ್ಗಜ ಆಟಗಾರ ರಾಫೆಲ್ ನಡಾಲ್
ಆಸ್ಪ್ರೇಲಿಯನ್‌ ಓಪನ್‌ ಸೆಮಿಫೈನಲ್‌ಗೆ ಪ್ರವೇಶ
ಕ್ವಾರ್ಟರ್‌ನಲ್ಲಿ ಶಾಪೊವಲೊವ್‌ ವಿರುದ್ಧ ಗೆಲುವು


ಮೆಲ್ಬರ್ನ್‌ (ಜ.26): ರೋಜರ್‌ ಫೆಡರರ್‌ (Roger federer) ಹಾಗೂ ನೋವಾಕ್‌ ಜೋಕೋವಿಚ್‌ (novak djokovic) ಜೊತೆ ಅತಿಹೆಚ್ಚು ಗ್ರ್ಯಾನ್‌ ಸ್ಲಾಂ (Grand Slam) ಗೆಲುವಿನ ದಾಖಲೆಗೆ ಪೈಪೋಟಿ ನಡೆಸುತ್ತಿರುವ ಸ್ಪೇನ್‌ನ ದಿಗ್ಗಜ ಟೆನಿಸಿಗ ರಾಫೆಲ್‌ ನಡಾಲ್‌ (Rafael Nadal ), ಆಸ್ಪ್ರೇಲಿಯನ್‌ ಓಪನ್‌ (Australian Open)ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ ಪ್ರವೇಶಿಸಿದ್ದು, ದಾಖಲೆಯ 21ನೇ ಪ್ರಶಸ್ತಿ ಗೆಲ್ಲಲು ಇನ್ನು ಕೇವಲ ಎರಡು ಗೆಲುವುಗಳಷ್ಟೇ ಬೇಕಿದೆ. ಫೆಡರರ್‌, ನಡಾಲ್‌ ಹಾಗೂ ಜೋಕೋವಿಚ್‌ ತಲಾ 20 ಗ್ರ್ಯಾನ್‌ ಸ್ಲಾಂಗಳನ್ನು ಜಯಿಸಿದ್ದು, ತಮ್ಮ ಪ್ರತಿಸ್ಪರ್ಧಿಗಳಿಬ್ಬರೂ ಈ ಟೂರ್ನಿಯಲ್ಲಿ ಆಡದ ಕಾರಣ ನಡಾಲ್‌ಗೆ ದಾಖಲೆ ಬರೆಯಲು ಉತ್ತಮ ಅವಕಾಶ ಸಿಕ್ಕಂತಾಗಿದೆ.

ಮಂಗಳವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಕೆನಡಾದ ಡೆನಿಸ್‌ ಶಾಪೊವಲೊವ್‌ (Denis Shapovalov) ವಿರುದ್ಧ ಬರೋಬ್ಬರಿ 4 ಗಂಟೆಗಳ ಸೆಣಸಾಡಿ 6-3, 6-4, 4-6, 3-6, 6-3 ಸೆಟ್‌ಗಳಲ್ಲಿ ಜಯ ಸಾಧಿಸಿದರು. ತಮ್ಮ ವೃತ್ತಿಬದುಕಿನಲ್ಲಿ ಕೇವಲ ಒಮ್ಮೆ (2009) ಆಸ್ಪ್ರೇಲಿಯನ್‌ ಓಪನ್‌ ಜಯಿಸಿರುವ ನಡಾಲ್‌, ಕಳೆದ 13 ಪ್ರಯತ್ನಗಳಲ್ಲಿ 7 ಬಾರಿ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತಿದ್ದರು. 7ನೇ ಬಾರಿ ಸೆಮೀಸ್‌ಗೇರಿರುವ ನಡಾಲ್‌, 2ನೇ ಆಸ್ಪ್ರೇಲಿಯನ್‌ ಓಪನ್‌ ಜಯಿಸಲು ಕಾತರಿಸುತ್ತಿದ್ದಾರೆ. ಸೆಮೀಸ್‌ನಲ್ಲಿ ನಡಾಲ್‌ಗೆ ಕಳೆದ ವರ್ಷದ ವಿಂಬಲ್ಡನ್‌ ರನ್ನರ್‌ ಅಪ್‌ ಇಟಲಿಯ ಮ್ಯಾಟಿಯೊ ಬೆರೆಟ್ಟಿನಿ ಎದುರಾಗಲಿದ್ದಾರೆ. ಕ್ವಾರ್ಟರ್‌ ಫೈನಲ್‌ನಲ್ಲಿ ಬೆರೆಟ್ಟಿನಿ ಫ್ರಾನ್ಸ್‌ನ ಗೈಲ್‌ ಮಾನ್ಫಿಲ್ಸ್‌ ವಿರುದ್ಧ 6-4, 6-4, 3-6, 3-6, 6-2 ಸೆಟ್‌ಗಳಲ್ಲಿ ಜಯಿಸಿದರು.

Tap to resize

Latest Videos

ಸೆಮೀಸ್‌ಗೆ ಆಶ್ಲೆ ಬಾರ್ಟಿ, ಮ್ಯಾಡಿಸನ್‌ ಕೀಸ್‌ ಲಗ್ಗೆ: ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವ ನಂ.1, ಆಸ್ಪ್ರೇಲಿಯಾದ ಆಶ್ಲೆ ಬಾರ್ಟಿ ಅಮೆರಿಕದ ಜೆಸಿಕಾ ಪೆಗುಲಾ ವಿರುದ್ಧ 6-2, 6-0ಯಲ್ಲಿ ಜಯಿಸಿ ಸೆಮೀಸ್‌ಗೇರಿದರೆ, ಫ್ರೆಂಚ್‌ ಓಪನ್‌ ವಿಜೇತೆ ಚೆಕ್‌ ಗಣರಾಜ್ಯದ ಬಾರ್ಬೊರಾ ಕ್ರೇಜಿಕೋವಾ ವಿರುದ್ಧ 6-3, 6-2ರಲ್ಲಿ ಗೆದ್ದ ಅಮೆರಿಕದ ಮ್ಯಾಡಿಸನ್‌ ಕೀಸ್‌ ಅಂತಿಮ 4ರ ಸುತ್ತಿಗೇರಿದರು.

ಆಸ್ಪ್ರೇಲಿಯನ್‌ ಓಪನ್‌ಗೆ ಸಾನಿಯಾ ಗುಡ್‌ಬೈ : ಮಿಶ್ರ ಡಬಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತದ ಸಾನಿಯಾ ಮಿರ್ಜಾ ಹಾಗೂ ಅಮೆರಿಕದ ರಾಜೀವ್‌ ರಾಮ್‌ ಜೋಡಿ ಆಸ್ಪ್ರೇಲಿಯಾದ ಕುಬ್ಲೆರ್‌ ಹಾಗೂ ಫೋರ್ಲಿಸ್‌ ಜೋಡಿ ವಿರುದ್ಧ 4-6, 6-7 ಸೆಟ್‌ಗಳಲ್ಲಿ ಸೋತು ಹೊರಬಿತ್ತು. ಈ ವರ್ಷಾಂತ್ಯಕ್ಕೆ ನಿವೃತ್ತಿ ಪಡೆಯುವುದಾಗಿ ಘೋಷಿಸಿರುವ ಸಾನಿಯಾ, ಆಸ್ಪ್ರೇಲಿಯನ್‌ ಓಪನ್‌ಗೆ ಗುಡ್‌ಬೈ ಹೇಳಿದರು.

Ind vs WI : ವೆಸ್ಟ್ ಇಂಡೀಸ್ ವಿರುದ್ಧ ಸರಣಿಗೆ ರೋಹಿತ್ ಶರ್ಮ ಫಿಟ್, ಈ ಇಬ್ಬರು ಪ್ಲೇಯರ್ ತಂಡದಲ್ಲಿರೋದು ಡೌಟ್!
ಟಿ20 ಶ್ರೇಯಾಂಕ: ಶಫಾಲಿ ಮತ್ತೆ ನಂ.1

ದುಬೈ:ಭಾರತದ ಯುವ ಕ್ರಿಕೆಟರ್‌ ಶಫಾಲಿ ವರ್ಮಾ ಐಸಿಸಿ ಮಹಿಳಾ ಟಿ20 ಬ್ಯಾಟರ್‌ಗಳ ರಾರ‍ಯಂಕಿಂಗ್‌ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ. ಮಂಗಳವಾರ ಪ್ರಕಟಗೊಂಡ ನೂತನ ಪಟ್ಟಿಯಲ್ಲಿ 726 ರೇಟಿಂಗ್‌ ಅಂಕ ಪಡೆದ ಅವರು, 1 ಸ್ಥಾನ ಏರಿಕೆ ಕಂಡು ಅಗ್ರಸ್ಥಾನ ಪಡೆದಿದ್ದಾರೆ. ಆದರೆ ಸ್ಮೃತಿ ಮಂಧಾನ 4ನೇ ಸ್ಥಾನಕ್ಕೆ ಕುಸಿದಿದ್ದಾರೆ. ದೀಪ್ತಿ ಶರ್ಮಾ ಬೌಲರ್‌ಗಳ ಪಟ್ಟಿಯಲ್ಲಿ 1 ಸ್ಥಾನ ಮೇಲಕ್ಕೇರಿ 4ನೇ ಹಾಗೂ ಆಲ್ರೌಂಡರ್‌ಗಳ ಪಟ್ಟಿಯಲ್ಲಿ 1 ಸ್ಥಾನ ಜಿಗಿತ ಕಂಡು 3ನೇ ಸ್ಥಾನ ಪಡೆದಿದ್ದಾರೆ.

Neeraj Chopra : ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾಗೆ PVSM ಗೌರವ!
ಭಾರತ ಹಾಕಿ ಸಂಭವನೀಯ ಟೀಂನಲ್ಲಿ ರಾಜ್ಯದ ರಾಹೀಲ್‌
ಬೆಂಗಳೂರು: ಮುಂಬರುವ ಎಫ್‌ಐಎಚ್‌ ಪ್ರೊ ಲೀಗ್‌ ಸೇರಿದಂತೆ ಮಹತ್ವದ ಟೂರ್ನಿಗಳಿಗೆ ಸಿದ್ಧತೆ ನಡೆಸುವ ಸಲುವಾಗಿ ಹಾಕಿ ಇಂಡಿಯಾ ಮಂಗಳವಾರ 33 ಆಟಗಾರರ ಸಂಭವನೀಯ ಪಟ್ಟಿಯನ್ನು ಪ್ರಕಟಿಸಿದ್ದು ಕರ್ನಾಟಕದ ಮೊಹಮದ್‌ ರಾಹೀಲ್‌ ಸ್ಥಾನ ಪಡೆದಿದ್ದಾರೆ. ವಿವಿಧ ದೇಸಿ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ತೋರಿದ 60 ಆಟಗಾರರನ್ನು 3 ವಾರಗಳ ಶಿಬಿರಕ್ಕೆ ಒಳಪಡಿಸಲಾಗಿತ್ತು. ಆ ಶಿಬಿರದಿಂದ 33 ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮುಂಬರುವ ಟೂರ್ನಿಗಳಿಗೆ ಈಗ ಪ್ರಕಟಿಸಿರುವ ಸಂಭವನೀಯರ ಪಟ್ಟಿಯಿಂದ ಅಂತಿಮ ತಂಡವನ್ನು ಆಯ್ಕೆ ಮಾಡಲಾಗುತ್ತದೆ.

click me!