Neeraj Chopra : ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾಗೆ PVSM ಗೌರವ!

By Suvarna News  |  First Published Jan 25, 2022, 8:12 PM IST

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಸ್ವರ್ಣ ಪದಕ ವಿಜೇತ ಅಥ್ಲೀಟ್
ಪರಮ ವಿಶಿಷ್ಠ ಸೇವಾ ಮೆಡಲ್ ಪಡೆಯಲಿರುವ ನೀರಜ್ ಚೋಪ್ರಾ
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪ್ರದಾನ


ನವದೆಹಲಿ (ಜ.25): ಟೋಕಿಯೋ ಒಲಿಂಪಿಕ್ಸ್ ನಲ್ಲಿ (Tokyo Olympics) ಸ್ವರ್ಣ ಪದಕ (Gold Medal) ಗೆದ್ದ ಜಾವಲಿನ್ ಥ್ರೋ (javelin throw) ಅಥ್ಲೀಟ್ ಹಾಗೂ ರಜಪುತಾನಾ ರೈಫಲ್ಸ್ ನಲ್ಲಿ (Rajputana Rifles) ಸುಬೇದಾರ್ ಆಗಿ ಸೇವೆ ಸಲ್ಲಿಸುತ್ತಿರುವ ನೀರಜ್ ಚೋಪ್ರಾಗೆ (Neeraj Chopra) ಕೇಂದ್ರ ಸರ್ಕಾರ ಶಾಂತಿ ಸಮಯದಲ್ಲಿ ತೋರಿದ ಸೇವೆಗಾಗಿ ಅತ್ಯುನ್ನತ ಸೇನಾ ಗೌರವವಾದ ಪರಮ ವಿಶಿಷ್ಠ ಸೇವಾ ಮೆಡಲ್ (ಪಿವಿಎಸ್ಎಂ) ( Param Vishisht Seva Medal ) ಘೋಷಣೆ ಮಾಡಿದೆ. ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊಟ್ಟಮೊದಲ ಟ್ರ್ಯಾಕ್ & ಫೀಲ್ಡ್ ಅಥ್ಲೀಟ್ ಎನಿಸಿಕೊಂಡ ಗೌರವ ಇವರಾಗಿದೆ.

ಶಾಂತಿ ಸಮಯದಲ್ಲಿ ದೇಶದ ಪರವಾಗಿ ಅತ್ಯುನ್ನತ ಸೇವೆ ನೀಡಿದ ಸೇನಾ ಸಿಬ್ಬಂದಿಗೆ ಈ ಸೇನಾ ಮೆಡಲ್ ಅನ್ನು ಘೋಷಣೆ ಮಾಡಲಾಗುತ್ತದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗಣರಾಜ್ಯೋತ್ಸವದ ಮುನ್ನಾದಿನವಾದ ಮಂಗಳವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ 384 ರಕ್ಷಣಾ ಸಿಬ್ಬಂದಿಗೆ ಶೌರ್ಯ ಪ್ರಶಸ್ತಿ ಸೇರಿದಂತೆ ಇತರ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. 12 ಶೌರ್ಯ ಚಕ್ರ, 29 ಪರಮ ವಿಶಿಷ್ಠ ಸೇವಾ ಮೆಡಲ್, ನಾಲ್ಕು ಉತ್ತಮ ಯುದ್ಧ ಸೇವಾ ಮೆಡಲ್, 53 ಅತಿ ವಿಶಿಷ್ಠ ಸೇವಾ ಮೆಡಲ್, 13 ಯುದ್ಧ ಸೇವಾ ಮೆಡಲ್ ಹಾಗೂ ಥ್ರೀ ಬಾರ್ ವಿಶಿಷ್ಠ ಸೇವಾ ಮೆಡಲ್ ಗಳು ಸೇರಿವೆ.
 

पद्म श्री अवार्ड और परम विशिष्ट सेवा मेडल से सम्मानित किए जाने की खबर सुन के मुझे बेहद खुशी हुई। आप सभी के सपोर्ट और आशिर्वाद के लिए बहुत धन्यवाद। मेरी मेहनत और प्रयास हमेशा ही अपने देश के लिए सर्वश्रेष्ठ परफॉर्मेंस देना ही रहेगा 🙏🏽 🇮🇳 pic.twitter.com/2KOSd70BL5

— Neeraj Chopra (@Neeraj_chopra1)


2016ರಲ್ಲಿ ನೈಬ್ ಸುಬೇದಾರ್ ಆಗಿ 4 ರಜಪೂತಾನಾ ರೈಫಲ್ಸ್ ಗೆ ನೇರವಾಗಿ ಆಯ್ಕೆಯಾಗಿದ್ದ ನೀರಜ್ ಚೋಪ್ರಾ, ಪ್ರಸ್ತುತ ಭಾರತೀಯ ಸೇನೆಯಲ್ಲಿ ಸುಬೇದಾರ್ ದರ್ಜೆಯಲ್ಲಿದ್ದಾರೆ. ಇತ್ತೀಚೆಗಷ್ಟೇ ಪುಣೆಯಲ್ಲಿರುವ ಸೇನಾ ಕ್ರೀಡಾ ಸಂಸ್ಥೆಯ ಮಿಷನ್ ಒಲಿಂಪಿಕ್ಸ್ ವಿಂಗ್ ಗೆ ತರಬೇತಿ ನೀಡಲು ನೇಮಕವಾಗಿದ್ದಾರೆ. 2022ರ ಗಣರಾಜ್ಯೋತ್ಸವ ಪರೇಡ್ ನಲ್ಲಿ ( Republic Day) ಟೋಕಿಯೋ ಒಲಿಂಪಿಕ್ಸ್ ಸ್ವರ್ಣ ಪದಕ ವಿಜೇತ ನೀರಜ್ ಚೋಪ್ರಾ ಅವರ ಸ್ತಬ್ದಚಿತ್ರವನ್ನು ಪ್ರದರ್ಶನ ಮಾಡುವ ಮೂಲಕ ಹರಿಯಾಣ ಸರ್ಕಾರ ಅವರಿಗೆ ಗೌರವ ನೀಡಲಿದೆ. ಕೇಂದ್ರ ಇಲಾಖೆಯ ಮಾಹಿತಿಯ ಪ್ರಕಾರ ಈ ಸ್ತಬ್ದಚಿತ್ರದಲ್ಲಿ ನೀರಜ್ ಚೋಪ್ರಾ ಅವರೊಂದಿಗೆ ಇತರ 10 ಒಲಿಂಪಿಯನ್ ಗಳೂ ಇರಲಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ನಲ್ಲಿ ವೈಯಕ್ತಿಕ ಸ್ವರ್ಣ ಪದಕ ಗೆದ್ದ 2ನೇ ಭಾರತೀಯ ಹಾಗೂ ಅಥ್ಲೆಟಿಕ್ಸ್ ವಿಭಾಗದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎನಿಸಿಕೊಂಡಿದ್ದರು. ಚಿನ್ನದ ಪದಕ ಗೆಲ್ಲುವುದರೊಂದಿಗೆ ಐತಿಹಾಸಿಕ ಸಾಧನೆ ಮಾಡಿದ್ದು ಮಾತ್ರವಲ್ಲದೆ,  ದಿಗ್ಗಜ ಮಿಲ್ಖಾ ಸಿಂಗ್ ಅವರ ಕೊನೆಯ ಆಸೆಯನ್ನೂ ಆ ಮೂಲಕ ಪೂರ್ತಿ ಮಾಡಿದ್ದರು. ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತ ಚಿನ್ನದ ಪದಕ ಗೆಲ್ಲುವುದು ತಮ್ಮ ಅಸೆ ಎಂದು ಮಿಲ್ಖಾ ಸಿಂಗ್ ಹೇಳಿದ್ದರು.

ಸ್ಥಿರತೆ ತೋರದ ಆಟಗಾರರಿಗೆ ಕೋಚ್ ರಾಹುಲ್ ದ್ರಾವಿಡ್ ಖಡಕ್ ವಾರ್ನಿಂಗ್..!
ಪ್ರಸ್ತುತ ನೀರಜ್ ಚೋಪ್ರಾ ಮುಂಬರುವ ವಿಶ್ವ ಚಾಂಪಿಯನ್ ಷಿಪ್,ಡೈಮಂಡ್ ಲೀಗ್, ಏಷ್ಯನ್ ಹಾಗೂ ಕಾಮನ್ವೆಲ್ತ್ ಗೇಮ್ಸ್ ನ ಸಿದ್ಧತೆಗಾಗಿ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಸಿದ್ಧತೆಯಲ್ಲಿ ತೊಡಗಿದ್ದಾರೆ. ನೀರಜ್ ಚೋಪ್ರಾ ಇದಕ್ಕೂ ಮುನ್ನ 2018ರಲ್ಲಿ ಅರ್ಜುನ ಪ್ರಶಸ್ತಿ ಹಾಗೂ 2020ರಲ್ಲಿ ವಿಶಿಷ್ಠ ಸೇವಾ ಮೆಡಲ್ ಗೌರವಕ್ಕೂ ಪಾತ್ರರಾಗಿದ್ದರು.

Pro Kabaddi League: ಪ್ರೊ ಕಬಡ್ಡಿಗೂ ಶುರುವಾಯ್ತು ಕೋವಿಡ್ ಕಾಟ, ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ..!
ಹೇಗಿರುತ್ತದೆ ಪರಮ ವಿಶಿಷ್ಠ ಸೇವಾ ಮೆಡಲ್?: ಪರಮ ವಿಶಿಷ್ಟ ಸೇವಾ ಪದಕವನ್ನು ಮೂಲತಃ 26 ಜನವರಿ 1960 ರಂದು "ವಿಶಿಷ್ಟ ಸೇವಾ ಪದಕ, ವರ್ಗ I" ಎಂದು ಸ್ಥಾಪಿಸಲಾಯಿತು. ಅದೇ ದಿನ ಐದು ಇತರ ಪದಕಗಳನ್ನು ಸ್ಥಾಪಿಸಲಾಯಿತು - ಸೈನ್ಯ ಸೇವಾ ಪದಕ, ಸೇನಾ ಪದಕ, ನವಸೇನಾ ಪದಕ ಮತ್ತು ವಾಯು ಸೇನಾ ಪದಕ.  ಇದನ್ನು ಜನವರಿ 27, 1961 ರಂದು ಈಗ ಇರುವ ಹೆಸರಿನೊಂದಿಗೆ ಮರು ನಾಮಕರಣ ಮಾಡಲಾಗಿದೆ. ಪದಕವು ನಾಣ್ಯದ ಆಕಾರದಲ್ಲಿದೆ, 35 ಮಿಮೀ ವ್ಯಾಸವನ್ನು ಹೊಂದಿದೆ. ಇದು ಚಿನ್ನದ ಗಿಲ್ಟ್‌ನಿಂದ ಮಾಡಲ್ಪಟ್ಟಿದೆ. ಅದರ ಮುಂಭಾಗದಲ್ಲಿ ಐದು-ಬಿಂದುಗಳ ನಕ್ಷತ್ರವನ್ನು ಕೆತ್ತಲಾಗಿದ್ದರೆ, ಹಿಂಬದಿಯಲ್ಲಿ ಭಾರತೀಯ ರಾಜ್ಯ ಲಾಂಛನವಿದೆ. ಇದನ್ನು ತೂಗು ಹಾಕಿದ ರಿಬ್ಬನ್ ಚಿನ್ನದ ಬಣ್ಣ ಹೊಂದಿದೆ. ಇದರ ಮಧ್ಯದಲ್ಲಿ ಕಡುನೀಲಿ ಬಣ್ಣದ ಬಾರ್ ಇದ್ದು, ಎರಡು ಸಮಾನ ಭಾಗಗಳಾಗಿ ವಿಭಜಿಸುತ್ತದೆ. ಪರಮ ವಿಶಿಷ್ಠ ಸೇವಾ ಮೆಡಲ್ ಅನ್ನು ಎಷ್ಟು ಬಾರಿ ಬೇಕಾದರೂ ಪಡೆಯಬಹುದು. ಆದರೆ, ಮತ್ತೊಮ್ಮೆ ಪಡೆಯುವ ವ್ಯಕ್ತಿಗೆ ರಿಬ್ಬನ್ ಮೇಲೆ ಬಾರ್ ಗಳನ್ನು ಹಾಕುವ ಮೂಲಕ ಎಷ್ಟು ಬಾರಿ ಇದನ್ನು ಪಡೆದಿದ್ದಾರೆ ಎನ್ನುವುದನ್ನು ಸೂಚಿಸಲಾಗುತ್ತದೆ.

Tap to resize

Latest Videos

 

 

click me!