
ಬ್ಯಾಂಕಾಕ್(ಜ.20): ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ. ಸಿಂಧು ಹಾಗೂ ಕೆ.ಶ್ರೀಕಾಂತ್, ಇಲ್ಲಿ ಮಂಗಳವಾರದಿಂದ ಆರಂಭವಾದ ಥಾಯ್ಲೆಂಡ್ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಸೈನಾ ನೆಹ್ವಾಲ್, ಮೊದಲ ಸುತ್ತಲ್ಲಿ ಸೋತು ಹೊರಬಿದ್ದಿದ್ದಾರೆ.
ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಲ್ಲಿ ಸಿಂಧು, ವಿಶ್ವ ನಂ.12 ಥಾಯ್ಲೆಂಡ್‌ನ ಬುಸ್ನಾನ್ ವಿರುದ್ಧ 21-17, 21-13 ರಿಂದ ಗೆಲುವು ಪಡೆದರು. ಮತ್ತೊಂದು ಸಿಂಗಲ್ಸ್‌ನಲ್ಲಿ ಸೈನಾ, ಮಾಜಿ ವಿಶ್ವ ಚಾಂಪಿಯನ್ ಇಂಟಾನಾನ್ ವಿರುದ್ಧ 17-21, 8-21 ರಿಂದ ಸೋಲುಂಡರು. ಪುರುಷರ ಸಿಂಗಲ್ಸ್‌ನಲ್ಲಿ ಶ್ರೀಕಾಂತ್, ಸಿಥಿಕೋಮ್ ತಮ್ಮಾಸಿನ್ ಎದುರು 21-11, 21-11 ರಿಂದ ಜಯ ಪಡೆದರು.
ಆಸ್ಪ್ರೇಲಿಯನ್ ಓಪನ್: 72 ಟೆನಿಸಿಗರು ಕ್ವಾರಂಟೈನ್!
ಮತ್ತೊಂದು ಪಂದ್ಯದಲ್ಲಿ ಸಮೀರ್ ವರ್ಮಾ, ವಿಶ್ವ ನಂ.10 ಲೀ ಜೀ ಜಿಯಾ ವಿರುದ್ಧ 18-21, 27-25, 21-19 ರಿಂದ ಅಚ್ಚರಿಯ ಗೆಲುವಿನೊಂದಿಗೆ 2ನೇ ಸುತ್ತಿಗೇರಿದರು. ಉಳಿದಂತೆ ಪಿ.ಕಶ್ಯಪ್ ಮೊದಲ ಸುತ್ತಲ್ಲಿ ನಿವೃತ್ತಿ ಪಡೆದರೆ, ಸೌರಭ್ ಸೋತರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.