ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಶಟ್ಲರ್‌ಗಳ ಹೋರಾಟ ಅಂತ್ಯವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಬ್ಯಾಂಕಾಕ್(ಜ.15): ಕೋವಿಡ್ ಬಳಿಕ ಮೊದಲ ಬಾರಿಗೆ ಸ್ಪರ್ಧಾತ್ಮಕ ಬ್ಯಾಡ್ಮಿಂಟನ್‌ಗೆ ವಾಪಸಾದ ಭಾರತೀಯ ಶಟ್ಲರ್‌ಗಳಿಗೆ ನಿರಾಸೆಯಾಗಿದೆ. ಥಾಯ್ಲೆಂಡ್ ಓಪನ್‌ನಲ್ಲಿ ಭಾರತದ ಸವಾಲು ಮುಕ್ತಾಯಗೊಂಡಿದೆ.
ಮಹಿಳೆಯರ ಸಿಂಗಲ್ಸ್‌ನ 2ನೇ ಸುತ್ತಿನಲ್ಲಿ ಸೈನಾ ನೆಹ್ವಾಲ್, ಸ್ಥಳೀಯ ಆಟಗಾರ್ತಿ ಬುಸನಾನ್ ವಿರುದ್ಧ 23-21, 14-21, 16-21 ಗೇಮ್‌ಗಳಲ್ಲಿ ಸೋಲುಂಡರು. ವಿಶ್ವ ನಂ.12 ಬುಸಾನನ್ ವಿರುದ್ಧ ಸೈನಾಗಿದು ಸತತ 4ನೇ ಸೋಲು.
Lost in the second round today against busanan from Thailand.. 23-21 , 14-21 , 16-21 in 70 mins match .. overall very tough tournament after recovering from covid and could prepare only for two weeks before this... but happy that I tried my best n gave it all 👍 pic.twitter.com/WtltXjIhbZ
— Saina Nehwal (@NSaina)ಸೈನಾ, ಪ್ರಣಯ್ ಕೋವಿಡ್ ಪರೀಕ್ಷಾ ವರದಿ ಗೊಂದಲ!
ಇನ್ನು ಕಿದಂಬಿ ಶ್ರೀಕಾಂತ್ ಮೀನಖಂಡದ ಗಾಯಕ್ಕೆ ತುತ್ತಾದ ಕಾರಣ ಪುರುಷರ ಸಿಂಗಲ್ಸ್ 2ನೇ ಸುತ್ತಿನ ಪಂದ್ಯದಿಂದ ನಿವೃತ್ತಿ ಪಡೆದು ಟೂರ್ನಿಯಿಂದ ಹೊರಬಿದ್ದರು. ಇದೇ ವೇಳೆ ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿಜೋಡಿ 19-21, 17-21ರಲ್ಲಿ ಸೋಲುಂಡರೆ, ಮಿಶ್ರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ಸಾತ್ವಿಕ್ ಜೋಡಿ ಪರಾಭವಗೊಂಡು ಹೊರಬಿತ್ತು. ಜ.19ರಿಂದ ಥಾಯ್ಲೆಂಡ್ ಓಪನ್‌ನ ಮತ್ತೊಂದು ಆವೃತ್ತಿಯಲ್ಲಿ ಭಾರತೀಯ ಶಟ್ಲರ್‌ಗಳು ಕಣಕ್ಕಿಳಿಯಲಿದ್ದಾರೆ.