ಬ್ಯಾಡ್ಮಿಂಟನ್ ಆಟಗಾರರಿಗೆ ಪುಲ್ಲೇಲಾ ಗೋಪಿಚಂದ್‌ ವಾಟ್ಸ್‌ಆ್ಯಪ್‌ನಲ್ಲಿ ಪಾಠ

By Suvarna NewsFirst Published Apr 4, 2020, 2:50 PM IST
Highlights

ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಡಿಜಿಟಲ್ ಇಂಡಿಯಾವನ್ನು ಭಾರತ ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲಾ ಗೋಪಿಚಂದ್ ಕೊರೋನಾ ಸಂಕಷ್ಟದ ಸಮಯವನ್ನು ಸೂಕ್ತವಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಏ.04): ಲಾಕ್‌ಡೌನ್‌ನಿಂದಾಗಿ ಅಂಕಣಕ್ಕೆ ಇಳಿಯಲಾಗದ ಭಾರತದ ಬ್ಯಾಡ್ಮಿಂಟನ್‌ ಆಟಗಾರರಿಗೆ ರಾಷ್ಟ್ರೀಯ ಕೋಚ್‌ ಪುಲ್ಲೇಲಾ ಗೋಪಿಚಂದ್‌ ವಾಟ್ಸ್‌ಆ್ಯಪ್‌ ಮೂಲಕ ಕೋಚಿಂಗ್‌ ಮಾಡುತ್ತಿದ್ದಾರೆ. 

ಕ್ರೀಡಾಪಟುಗಳಿಗೆ ಸಾಯ್‌ ಆನ್‌ಲೈನ್‌ ಕಾರ್ಯಾಗಾರ

‘ಕೋರ್ಟ್‌ಗಿಳಿದು ಅಭ್ಯಾಸ ನಡೆಸಲು ಸಾಧ್ಯವಿಲ್ಲ. ಹೀಗಾಗಿ ನಮ್ಮ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಫಿಟ್ನೆಸ್‌ಗೆ ಸಂಬಂಧಿಸಿದ ವಿಡಿಯೋ, ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದೇವೆ. ಕೆಲ ಸ್ಫೂರ್ತಿದಾಯಕ ಸಂದೇಶ, ವಿಡಿಯೋಗಳ ಮೂಲಕ ಶಟ್ಲರ್‌ಗಳು ಮಾನಸಿಕ ಸದೃಢತೆ ಕಾಪಾಡಿಕೊಳ್ಳುವಂತೆ ನೋಡಿಕೊಳ್ಳುತ್ತಿದ್ದೇನೆ’ ಎಂದು ಗೋಪಿಚಂದ್‌ ಹೇಳಿದ್ದಾರೆ.

ಲಾಕ್‌ಡೌನ್‌ ಮುಗಿದ ಮೇಲೂ ಕಟ್ಟುನಿಟ್ಟಿನ ಕ್ರಮಕ್ಕೆ ಸಚಿನ್‌ ಸಲಹೆ

ಕೊರೋನಾ ವೈರಸ್ ಭೀತಿಯಿಂದಾಗಿ ಈಗಾಗಲೇ ದೇಶಾದ್ಯಂತ 21 ದಿನ್‌ಗಳ ಕಾಲ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಕೋವಿಡ್ 19 ಸೋಂಕಿಗೆ ಭಾರತದಲ್ಲಿ ಮೂರು ಸಾವಿರಕ್ಕೂ ಅಧಿಕ ಮಂದಿ ತುತ್ತಾಗಿದ್ದಾರೆ. ಈ ಎಲ್ಲಾ ಸಮಸ್ಯೆಗಳು ಬಗೆಹರಿಯುವ ಹೊತ್ತಿಗೆ ಆಟಗಾರರಿಗೆ ಕನಿಷ್ಠ ಎಂಟು ವಾರಗಳು ಸಮಯ ಸಿಗಲಿದೆ ಎನ್ನುವ ಆಶಾವಾದವನ್ನು ಗೋಪಿ ವ್ಯಕ್ತಪಡಿಸಿದ್ದಾರೆ. ಬ್ಯಾಡ್ಮಿಂಟನ್ ಟೂರ್ನಿಗಳು ಯಾವಾಗಿನಿಂದ ಆರಂಭವಾಗುತ್ತದೆಯೋ ಗೊತ್ತಿಲ್ಲ, ಆದರೆ ಎಲ್ಲದಕ್ಕೂ ಆಟಗಾರರು ಸಿದ್ದರಿರಬೇಕು ಎಂದು ಹೇಳಿದ್ದಾರೆ. ಆರೋಗ್ಯ ಎಲ್ಲದಕ್ಕಿಂತ ಮುಖ್ಯ, ಕ್ರೀಡೆ ಆಮೇಲಿನ ಮಾತು ಎನ್ನುತ್ತಾರೆ ಗೋಪಿಚಂದ್.

click me!