ಫೆಡರರ್ to ಜೊಕೊವಿಚ್: ಲಾಕ್‌ಡೌನ್‌ನಿಂದ ಹೊಸ ಆಟ ಆರಂಭಿಸಿದ ಟೆನಿಸ್ ದಿಗ್ಗಜರು!

By Suvarna News  |  First Published Apr 2, 2020, 3:37 PM IST

ಕೊರೋನಾ ವೈರಸ್ ಹೊಡೆತಕ್ಕೆ ಇಡೀ ವಿಶ್ವವೇ ನಲುಗಿದೆ. ಎಲ್ಲಾ ಕ್ರೀಡೆಗಳು ರದ್ದಾಗಿದೆ. ಹೀಗಾಗಿ ಕ್ರೀಡಾಪಟುಗಳು ಸದ್ಯ ಮನೆಯಲ್ಲಿ ಅಭ್ಯಾಸ, ವರ್ಕೌಟ್ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಇದೀಗ ಟೆನಿಸ್ ದಿಗ್ಗಜರಾದ ರೋಜರ್ ಫೆಡರರ್, ನೋವಾಕ್ ಜೊಕೋವಿಚ್ ಇದೀಗ ಮನೆಯಲ್ಲಿ ಕುಳಿತ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿದ್ದಾರೆ.


ನವದೆಹಲಿ(ಏ.02): ಕೊರೋನಾ ವೈರಸ್‌ ಹರಡುತ್ತಿರುವ ಹಿನ್ನಲೆಯಲ್ಲಿ ಬಹುತೇಕ ರಾಷ್ಟ್ರಗಳು ಲಾಕ್‌ಡೌನ್ ಘೋಷಿಸಿದೆ. ಇಷ್ಟೇ ಅಲ್ಲ ಬಹುತೇಕ ಎಲ್ಲಾ ಕ್ರೀಡೆಗಳು ರದ್ದಾಗಿದೆ. ಇದೀಗ ಕ್ರೀಡಾಪಟುಗಳು, ಕ್ರಿಕೆಟಿಗರು ಮನೆಯಲ್ಲಿ ವಿಶ್ರಾಂತಿಗೆ ಜಾರಿದ್ದಾರೆ. ಇದರ ನಡುವೆ ಟೆನಿಸ್ ದಿಗ್ಗಜರು ಹೊಸ ಹೊಸ ವಿಡಿಯೋ ಪೋಸ್ಟ್ ಮಾಡಿ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿದ್ದಾರೆ. ಸರ್ಬಿಯಾದ ನೋವಾಕ್ ಜೊಕೋವಿಚ್, ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್ ಸೇರಿದಂತೆ ಟೆನಿಸ್ ಪಟುಗಳು ಇದೀಗ ಅಭ್ಯಾಸ ಶುರ ಮಾಡಿದ್ದಾರೆ.

'ವಲಸಿಗ ಜನರೇ ಬನ್ನಿ ನಮ್ಮನೆಯಲ್ಲೇ ಉಳಿಯಿರಿ' ನಿರಾಶ್ರಿತರಿಗೆ ಮುಕ್ತ ಆಹ್ವಾನ ಕೊಟ್ಟ ಫುಟ್ಬಾಲ್ ಲೆಜೆಂಡ್ ಭುಟಿಯಾ..

Latest Videos

undefined

ಟೆನಿಸ್ ಪಟುಗಳು ಇದೀಗ ಟೆನಿಸ್ ಎಟ್ ಹೋಮ್ ಅನ್ನೋ ಅಭಿಯಾನ ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿನ ಅಭಿಯಾನದಲ್ಲಿ ಟೆನಿಸ್ ಪಟುಗಳು ತಮ್ಮ ತಮ್ಮ ಮನೆಯಲ್ಲಿ ಟೆನಿಸ್ ಆಡುತ್ತಿರುವ ಅಥವಾ ಅಭ್ಯಾಸ ಮಾಡುತ್ತಿರುವ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಸ್ವಿಟ್ಜರ್‌ಲೆಂಡ್‌ನಲ್ಲಿರುವ ಮನೆಯಲ್ಲಿ ಫೆಡರರ್ ಅಭ್ಯಾಸ ನಡೆಸುತ್ತಿದ್ದಾರೆ.

ಕೊರೋನಾ ವೈರಸ್‌ಗೆ ಬಲಿಯಾದ ಪಾಕಿಸ್ತಾನದ ಸ್ಕ್ವಾಶ್ ದಿಗ್ಗಜ ಅಝಮ್ ಖಾನ್!

ಹಿಮದ ತುಂತುರ ನಡುವೆ ಫೆಡರರ್ ಏಕಾಂಗಿಯಾಗಿ ಅಭ್ಯಾಸ ನಡೆಸುತ್ತಿದ್ದಾರೆ. ಗೋಡೆಗೆ ಟೆನಿಸ್ ಬಾಲ್ ಹೊಡೆಯುತ್ತಾ ಅಭ್ಯಾಸ ನಡೆಸುತ್ತಿದ್ದಾರೆ. ಈ ವಿಡಿಯೋವನ್ನು ಫೆಡರರ್ ಅಪ್ ಮಾಡಿದ್ದಾರೆ.

Making sure I still remember how to hit trick shots pic.twitter.com/DKDKQTaluY

— Roger Federer (@rogerfederer)

 

ನೋವಾಕ್ ಜೊಕೋವಿಚ್ ತಮ್ಮ ಮನೆಯೊಳಗೆ ಟೆನಿಸ್ ಆಡುತ್ತಿರುವ ವಿಡಿಯೋ ಅಪ್ ಮಾಡಿದ್ದಾರೆ. ನೆಟ್‌ಗಾಗಿ ಮನೆಯಲ್ಲಿರುವ ಕುರ್ಚಿಯನ್ನು ಬಳಸಿಕೊಂಡು ಜೊಕೋವಿಚ್ ಟೆನಿಸ್ ಆಡುತ್ತಿರುವ ವಿಡಿಯೋ ಪೋಸ್ಟ್ ಮಾಡಿದ್ದಾರೆ.

 

Competition never stops 💪🏼😂 🎾🏠

Такмичење није престало 😂 pic.twitter.com/JG8ux5DSdB

— Novak Djokovic (@DjokerNole)

ಸ್ಟಾನ್ ವಾವ್ರಿಂಕಾ ವಿಡಿಯೋ ಪೋಸ್ಟ್‌ಗೆ ಅಭಿಮಾನಿಗಳು ಹೆಚ್ಚು ಕಮೆಂಟ್ ಮಾಡಿದ್ದಾರೆ. ವಾವ್ರಿಂಕ ಪೋಸ್ಟ್ ಮಾಡಿರುವ ವಿಡಿಯೋದ ಆರಂಭದಲ್ಲೇ ಇಂದು ನನ್ನ ಹುಟ್ಟು ಹಬ್ಬ. ಆದರೆ ನಾನು ಕ್ವಾರಂಟೈನ್‌ನಲ್ಲಿದ್ದೇನೆ ಎಂದಿದ್ದಾರೆ. ಬಳಿಕ ಗೆಳೆಯರ ಜೊತೆ ಬರ್ತ್‌ಡೇ ಆಚರಿಸುವ ವಿಡಿಯೋ ಅಪ್ ಮಾಡಿದ್ದಾರೆ.
 

click me!