
ಬೆಂಗಳೂರು(ಫೆ.25): ಪ್ರೊ ಕಬ್ಬಡಿ ಲೀಗ್(Pro kabaddi League) 8 ನೇ ಆವೃತ್ತಿ ಫೈನಲ್ ಪಂದ್ಯದಲ್ಲಿ ವಿಜೇತರಾದ ದಬಾಂಗ್ ದೆಹಲಿ(Dabang Delhi) ತಂಡದ ಆಟಗಾರರಿಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್‌ರವರು(thawar chand gehlot) ಪದಕ ವಿತರಿಸಿ ಪ್ರಶಂಸಿದರು.ಬೆಂಗಳೂರಿನ(Bengaluru) ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಪ್ರೊ ಕಬಡ್ಡಿ ಲೀಗ್ ಅಂತಿಮ ಪಂದ್ಯವನ್ನು ಗೌರವಾನ್ವಿತ ರಾಜ್ಯಪಾಲರು ವೀಕ್ಷಿಸಿ, ಆನಂದಿಸಿದರು.
ಫೈನಲ್ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಹಾಗೂ ಪಾಟ್ನಾ ಫೈರೇಟ್ಸ್(Patna pirates) ತಂಡ ಮುಖಾಮುಖಿಯಾಗಿದ್ವು. ನೇರಾ ಹಣಾಹಣಿಯಲ್ಲಿ 37-36 ಅಂಕಗಳಿಂದ ದಬಾಂಗ್ ಡೆಲ್ಲಿ ತಂಡ ಗೆಲುವು ದಾಖಲಿಸಿತು. ಭರ್ಜರಿ ಗೆಲುವು ದಾಖಲಿಸಿದ ಡೆಲ್ಲಿ ದಬಾಂಗ್ ತಂಡಕ್ಕೆ ಸಚಿವ ಗೌರವಾನ್ವಿತ ರಾಜ್ಯಪಾಲರು, ಸನ್ಮಾನ್ಯ ಸಚಿವರಾದ ಡಾ.ನಾರಾಯಣಗೌಡ ಅವರು ಅಭಿನಂದನೆ ಸಲ್ಲಿಸಿದರು.
Pro Kabaddi Final ಪಾಟ್ನಾ ಮಣಿಸಿ ಚೊಚ್ಚಲ ಚಾಂಪಿಯನ್ ಕಿರೀಟ ಗೆದ್ದ ದಬಾಂಗ್ ದಿಲ್ಲಿ!
ಶಾಸಕರಾದ ಅರವಿಂದ ಲಿಂಬಾವಳಿ, ವಿಧಾನಪರಿಷತ್ ಸದಸ್ಯ ಗೋವಿಂದರಾಜ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಪ್ರೊ ಕಬ್ಬಡ್ಡಿ ಸಹ-ಸಂಸ್ಥಾಪಕ ಆನಂದ್ ಮಹೇಂದ್ರ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ದಬಾಂಗ್ ದಿಲ್ಲಿ ತಂಡ ಇದೇ ಮೊದಲ ಬಾರಿಗೆ ಪ್ರೋ ಕಬಡ್ಡಿ ಲೀಗ್ ಟ್ರೋಫಿ ಗೆದ್ದುಕೊಂಡಿದೆ. ಬಲಿಷ್ಠ ಪಾಟ್ನಾ ಪೈರೇಟ್ಸ್ ವಿರುದ್ಧ 37-36 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿದ ಡೆಲ್ಲಿ ಪ್ರಶಸ್ತಿ ಗೆದ್ದುಕೊಂಡಿತು. ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಪಾಟ್ನಾ ಪೈರೇಟ್ಸ್ 3 ಬಾರಿ ಟ್ರೋಫಿ ಗೆದ್ದುಕೊಂಡಿದೆ. ಈ ಬಾರಿಯೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಹೊರಹೊಮ್ಮಿತ್ತು. ಆದರೆ ಅಂತಿಮ ಕ್ಷಣದಲ್ಲಿ ಟ್ರೋಫಿ ದಿಲ್ಲಿ ಪಾಲಾಯಿತು.
Pro Kabaddi League: ಗುಜರಾತ್ ಎದುರು ಬೆಂಗಳೂರು ಬುಲ್ಸ್‌ಗೆ ಆಘಾತಕಾರಿ ಸೋಲು..!
ಈ ಬಾರಿಯ ಪ್ರೋ ಕಬಡ್ಡಿ ಲೀಗ್ ಟೂರ್ನಿಗೆ ಹೊಸ ಚಾಂಪಿಯನ್ ಸಿಕ್ಕಿದೆ. 2018ರಿಂದ ಪ್ರತಿ ಪ್ರೋ ಕಬಡ್ಡಿ ಆವೃತ್ತಿಗೆ ಹೊಸ ಚಾಂಪಿಯನ್ ಸಿಕ್ಕಿದೆ 2018ರಲ್ಲಿ ಬೆಂಗಳೂರು ಬುಲ್ಸ್ ಚೊಚ್ಚಲ ಪಿಕೆಎಲ್ ಟ್ರೋಫಿ ಗೆದ್ದು ಇತಿಹಾಸ ಬರೆದಿತ್ತು. ಇನ್ನು 2019ರಲ್ಲಿ ಇದೇ ಮೊದಲ ಬಾರಿಗೆ ಬೆಂಗಾಲ್ ವಾರಿಯರ್ಸ್ ಕಬಡ್ಡಿ ಟ್ರೋಫಿ ಗೆದ್ದುಕೊಂಡಿತು. ಇದೀಗ ದಬಾಂಗ್ ದಿಲ್ಲಿ ಕೂಡ ಅದೇ ಸಾಧನೆ ಮಾಡಿದೆ.
ಪ್ರೋ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಇತಿಹಾಸ, ದಾಖಲೆ ಸೇರಿದಂತೆ ಹಲವ ಮೈಲಿಗಲ್ಲು ನಿರ್ಮಿಸಿದ ಕೀರ್ತಿ ಪಾಟ್ನಾ ಪೈರೇಟ್ಸ್‌ಗೆ ಸಲ್ಲಲಿದೆ. ಪಾಟ್ನಾ ಪೈರೇಟ್ಸ್ ಫೈನಲ್ ಪ್ರವೇಶಿದ ಎಲ್ಲಾ ಆವೃತ್ತಿಗಳಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಆದರೆ ಈ ಬಾರಿ ಈ ಸಂಪ್ರದಾಯಕ್ಕೆ ಬ್ರೇಕ್ ಬಿದ್ದಿದೆ. ಪಾಟ್ನಾ ರನ್ನರ್ ಅಪ್ ಸ್ಥಾನಕ್ಕೆ ತಪ್ತಿಪಟ್ಟುಕೊಂಡಿದೆ. 2016ರಲ್ಲಿ ಪಾಟ್ನಾ ಪೈರೇಟ್ಸ್ ಎರಡು ಬಾರಿ ಚಾಂಪಿಯನ್ ಆಗಿದೆ. 2016ರಲ್ಲಿ ಒಂದೇ ವರ್ಷದಲ್ಲಿ ಎರಡು ಬಾರಿ ಪ್ರೋ ಕಬಡ್ಡಿ ಲೀಗ್ ಟೂರ್ನಿ ಆಯೋಜಿಸಲಾಗಿತ್ತು. ಇನ್ನು 2017ರಲ್ಲೂ ಪಾಟ್ನಾ ಪೈರೇಟ್ಸ್ ಪ್ರಶಸ್ತಿ ಗೆದ್ದುಕೊಂಡಿದೆ. ಈ ಮೂಲಕ ಹ್ಯಾಟ್ರಿಕ್ ಪ್ರಶಸ್ತಿ ಗೆದ್ದ ಏಕೈಕ ಪ್ರೋ ಕಬಡ್ಡೀ ಲೀಗ್ ತಂಡ ಹಾಗೂ ಒಂದಕ್ಕಿಂತ ಹೆಚ್ಚು ಬಾರಿ ಪ್ರಶಸ್ತಿ ಗೆದ್ದ ತಂಡ ಅನ್ನೋ ಹೆಗ್ಗಳಿಗೆ ಪಾತ್ರವಾಗಿದೆ.
ಫೈನಲ್ ಪ್ರವೇಶಿ ಎರಡು ಬಾರಿ ಸೋತ ತಂಡ ಗುಜರಾತ್ ಗೈಂಟ್ಸ್. 2017 ಹಾಗೂ 2018ರಲ್ಲಿ ಗುಜರಾತ್ ಗೈಂಟ್ಸ್ ಸತತವಾಗಿ ಫೈನಲ್ ಪ್ರವೇಶಿಸ್ತಿತ್ತು. ಎರಡು ಬಾರಿಯೂ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. 2017 ರಲ್ಲಿ ಪಾಟ್ನಾ ಪೈರೇಟ್ಸ್ ವಿರುದ್ಧ ಸೋಲು ಕಂಡರೆ, 2018ರಲ್ಲಿ ಬೆಂಗಳೂರು ಬುಲ್ಸ್ ವಿರುದ್ದ ಮುಗ್ಗರಿಸಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಅವಕಾಶ ಕಳೆದುಕೊಂಡಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.