Pro Kabaddi Final ಪಾಟ್ನಾ ಮಣಿಸಿ ಚೊಚ್ಚಲ ಚಾಂಪಿಯನ್ ಕಿರೀಟ ಗೆದ್ದ ದಬಾಂಗ್ ದಿಲ್ಲಿ!

By Suvarna News  |  First Published Feb 25, 2022, 9:51 PM IST
  • ಪ್ರೋ ಕಬಡ್ಡಿ ಫೈನಲ್ ಪಂದ್ಯ, ದಿಲ್ಲಿಗೆ ಪ್ರಶಸ್ತಿ
  • ರೋಚಕ ಹೋರಾಟದಲ್ಲಿ ದಿಲ್ಲಿಗೆ ಭರ್ಜರಿ ಮೇಲುಗೈ

ಬೆಂಗಳೂರು(ಫೆ.25): ಪ್ರಶಸ್ತಿಗಾಗಿ ರೋಚಕ ಹೋರಾಟ, ಪ್ರತಿ ಅಂಕಕ್ಕಾಗಿ ಜಿದ್ದಾಜಿದ್ದಿ, ಇತ್ತ ಯಾರು ಪ್ರಶಸ್ತಿ ಗೆಲ್ಲುತ್ತಾರೆ ಅನ್ನೋ ಕುತೂಹಲ, ಕ್ಷಣಕ್ಷಣಕ್ಕೂ ರೋಚಕ ತಿರುವು..ಇದು ಈ ಬಾರಿಯ ಪ್ರೋ ಕಬಡ್ಡಿ ಫೈನಲ್(Pro Kabaddi Final) ಪಂದ್ಯದ ಚಿತ್ರಣ. ಅತ್ಯಂತ ರೋಚಕ ಹೋರಾಟದಲ್ಲಿ ಪಾಟ್ನಾ ಪೈರೇಟ್ಸ್(Patna Pirates) ವಿರುದ್ಧ ದಬಾಂಗ್ ದಿಲ್ಲಿ(Dabang Delhi) 37-36 ಅಂಕಗಳಿಂದ ಗೆದ್ದು ಕೊಂಡಿದೆ. ಈ ಮೂಲಕ ದಿಲ್ಲಿ ದಬಾಂಗ್ ಚಾಂಪಿಯನ್ ಪ್ರಶಸ್ತಿ ಗೆದ್ದಿಕೊಂಡಿದೆ.

ಫೈನಲ್ ಪಂದ್ಯ ಗೆಲ್ಲಲು ರೋಚಕ ಹೋರಾಟವೇ ಎರ್ಪಟ್ಟಿತ್ತು. ದಿಲ್ಲಿ ದಬಾಂಗ್ ಇದೇ ಮೊದಲ ಬಾರಿಗೆ ಪ್ರೋ ಕಬಡ್ಡಿ ಪ್ರಶಸ್ತಿ ಗೆದ್ದುಕೊಂಡಿದೆ. ಈ ಮೂಲಕ 4ನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಪಾಟ್ನಾ ಪೈರೇಟ್ಸ್ ಕನಸು ನುಚ್ಚುನೂರಾಗಿದೆ. 

Tap to resize

Latest Videos

Pro Kabaddi League: 930 ಮಂದಿ, 5 ತಿಂಗಳು ಬಯೋಬಬಲ್‌ ವನವಾಸ..!

ಪ್ರೊ ಕಬಡ್ಡಿ ಪ್ರಶಸ್ತಿ ವಿಜೇತರು:
2014: ಜೈಪುರ ಪಿಂಕ್ ಪ್ಯಾಂಥರ್ಸ್
2015 : ಯು ಮುಂಬಾ
2016: ಪಾಟ್ನಾ ಪೈರೇಟ್ಸ್
2016: ಪಾಟ್ನಾ ಪೈರೇಟ್ಸ್
2017: ಪಾಟ್ನಾ ಪೈರೇಟ್ಸ್
2018 : ಬೆಂಗಳೂರು ಬುಲ್ಸ್
2019 :ಬೆಂಗಾಲ್ ವಾರಿಯರ್ಸ್
2022 : ದಬಾಂಗ್ ದಿಲ್ಲಿ

ಪ್ರೋಕಬಡ್ಡಿ ಫೈನಲ್ ಪಂದ್ಯದ ಫಸ್ಟ್ ಹಾಫ್ ಟೈಮ್‌ನಲ್ಲಿ ಪಾಟ್ನಾ ಪೈರೇಟ್ಸ್ ಮೇಲುಗೈ ಸಾಧಿಸಿತ್ತು. ಆದರೆ ದ್ವಿತೀಯಾರ್ಧದಲ್ಲಿ ದಿಲ್ಲಿ ದಬಾಂಗ್ ಮತ್ತಷ್ಚು ಆಕ್ರಮಣಕಾರಿ ಆಟ ಪ್ರದರ್ಶಿಸುವ ಮೂಲಕ ಪಂದ್ಯದ ಗತಿಯನ್ನು ಬದಲಿಸಿತು. ಸೆಕೆಂಡ್ ಹಾಫ್‌ನಲ್ಲಿ ರೋಚಕ ಮುನ್ನಡೆ ಪಡೆಯುವ ಮೂಲಕ ಪ್ರಶಸ್ತಿ ಬಾಚಿಕೊಂಡಿತು.

ಫಸ್ಟ್ ಹಾಫ್‌ನಲ್ಲಿ ದಬಾಂಗ್ ದಿಲ್ಲಿ 15 ಅಂಕ ಸಂಪಾದಿಸಿದರೆ, ಪಾಟ್ನಾ ಪೈರೇಟ್ಸ್ 17 ಅಂಕದ ಮೂಲಕ 2 ಅಂಕ ಮುನ್ನಡೆ ಸಾಧಿಸಿತು. ಆದರೆ ಉಭಯ ತಂಡಗಳ ರೈಡಿಂಗ್ ಪಾಯಿಂಟ್ಸ್ ಒಂದೇ ರೀತಿ ಇತ್ತು. ತಲಾ ಎರಡೂ ತಂಡಗಳು 12 ಅಂಕ ಸಂಪಾದಿಸಿತು. ಇನ್ನು ಟ್ಯಾಕಲ್ ಪಾಯಿಂಟ್ಸ್‌ನಲ್ಲೂ ಸಮಬಲ ಸಾಧಿಸಿತು. ಪಾಟ್ನಾ 2 ಆಲೌಟ್ ಅಂಕ ಸಂಪಾದಿಸಿತು.

ಸೆಕೆಂಡ್ ಹಾಫ್‌ನಲ್ಲಿ ದಬಾಂಗ್ ದಿಲ್ಲಿ ಒಟ್ಟು 22 ಅಂಕ ಸಂಪಾದಿಸಿದರೆ, ಪಾಟ್ನಾ ಪೈರೇಟ್ಸ್ 19 ಅಂಕ ಸಂಪಾದಿಸಿ ಹಿನ್ನಡೆ ಅನುಭವಿಸಿತು. ರೈಡಿಂಗ್‌ನಲ್ಲಿ ಪಾಟ್ನಾ 17 ಅಂಕ ಪಡೆದರೆ, ದಿಲ್ಲಿ 15 ಅಂಕ ಪಡೆಯಿತು. ಆದರೆ ದಿಲ್ಲಿ 2 ಆಲೌಟ್ ಪಾಯಿಂಟ್ಸ್ ಹಾಗೂ ಇತರ 3 ಅಂಕ ಪಡೆಯುವ ಮೂಲಕ ದಿಲ್ಲಿ ದಬಾಂಗ್ 2 ಅಂಕಗಳ ಅಂತರದಲ್ಲಿ ಟ್ರೋಫಿ ಗೆದ್ದಿತು.ಪ್ರೋ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಪಾಟ್ನಾ ಪೈರೇಟ್ಸ್ ಬಲಿಷ್ಠ ತಂಡ. ಇದೇ ಬಲಿಷ್ಠ ತಂಡವನ್ನು ಮಣಿಸಿದ ದಿಲ್ಲಿಗೆ ಶುಭಾಶಗಳ ಮಹಾಪೂರವೇ ಹರಿದು ಬರುತ್ತಿದೆ. 

ಕೊರೋನಾ ಕಾರಣ ಅನಿವಾರ್ಯವಾಗಿ ಸ್ಥಗಿತಗೊಂಡಿದ್ದ ಪ್ರೊ ಕಬಡ್ಡಿ ಲೀಗ್ ಟೂರ್ನಿ ಇದೀಗ ಕೊರೋನಾ ನಡುವೆ ಆಯೋಜಿಸಿ ಯಶಸ್ವಿಯಾಗಿದೆ. ಬರೋಬ್ಬರಿ 5 ತಿಂಗಳ ಕಾಲ ಕಬಡ್ಡಿಪಟುಗಳು ಬಯೋಬಬಲ್ ಮೂಲಕ ಕಠಿಣ ನಿಯಮ ಪಾಲಿಸಿದ್ದಾರೆ. 235 ಕಬಟ್ಟಿಪಟುಗಳು ಸೇರಿದಂತೆ ಸಿಬ್ಬಂದಿ ಸೇರಿ ಒಟ್ಟು 930 ಮಂದಿ ಬಯೋಬಬಲ್ ಮೂಲಕ ಈ ಟೂರ್ನಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಂಡಿದ್ದಾರೆ.


 

click me!