Pro Kabaddi League: ಬೆಂಗಳೂರು ಬುಲ್ಸ್‌ಗಿಂದು ಟೈಟಾನ್ಸ್ ಸವಾಲು

Suvarna News   | Asianet News
Published : Jan 01, 2022, 12:25 PM IST
Pro Kabaddi League: ಬೆಂಗಳೂರು ಬುಲ್ಸ್‌ಗಿಂದು ಟೈಟಾನ್ಸ್ ಸವಾಲು

ಸಾರಾಂಶ

* ಹೊಸ ವರ್ಷದ ಮೊದಲ ದಿನ ಬೆಂಗಳೂರು ತಂಡಕ್ಕೆ ತೆಲುಗು ಟೈಟಾನ್ಸ್ ಸವಾಲು * ಹ್ಯಾಟ್ರಿಕ್ ಗೆಲುವು ಸಾಧಿಸಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ಬುಲ್ಸ್‌ ಪಡೆ * ಬೆಂಗಳೂರು ತಂಡಕ್ಕೆ ಮಾಜಿ ನಾಯಕ ರೋಹಿತ್ ಕುಮಾರ್‌ ಪಡೆ ಸವಾಲು

ಬೆಂಗಳೂರು(ಜ.01): ಪ್ರೊ ಕಬಡ್ಡಿ 8ನೇ ಆವೃತ್ತಿಯಲ್ಲಿ (Pro Kabaddi League) ಹ್ಯಾಟ್ರಿಕ್‌ ಗೆಲುವಿನೊಂದಿಗೆ ಬೀಗುತ್ತಿರುವ ಬೆಂಗಳೂರು ಬುಲ್ಸ್‌(Bengaluru Bulls), ಹೊಸ ವರ್ಷವನ್ನು ಭರ್ಜರಿ ಗೆಲುವಿನೊಂದಿಗೆ ಆರಂಭಿಸಲು ಕಾತರಿಸುತ್ತಿದೆ. ಶನಿವಾರ ತಂಡಕ್ಕೆ ತೆಲುಗು ಟೈಟಾನ್ಸ್‌ (Telugu Titans) ಎದುರಾಗಲಿದೆ. ಹಿಂದಿನ ಆವೃತ್ತಿಗಳಲ್ಲಿ ಬುಲ್ಸ್‌ ತಂಡದ ನಾಯಕರಾಗಿದ್ದ ರೋಹಿತ್‌ ಕುಮಾರ್‌ (Rohit Kumar) ಈ ಬಾರಿ ತೆಲುಗು ಟೈಟಾನ್ಸ್‌ ತಂಡವನ್ನು ಮುನ್ನಡೆಸುತ್ತಿದ್ದು, ತಮ್ಮ ಮಾಜಿ ನಾಯಕನ ವಿರುದ್ಧ ಮೇಲುಗೈ ಸಾಧಿಸಲು ಬೆಂಗಳೂರು ಬುಲ್ಸ್‌ ಸಜ್ಜಾಗಿದೆ.

ತಂಡದ ನಾಯಕ ಹಾಗೂ ತಾರಾ ರೈಡರ್‌ ಪವನ್‌ ಶೆರಾವತ್‌ ಉತ್ಕೃಷ್ಟ ಲಯದಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ 22 ಅಂಕ ಕಲೆಹಾಕಿದ್ದ ಪವನ್‌, ಮತ್ತೊಂದು ಭರ್ಜರಿ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ. ತಂಡದ ರಕ್ಷಣಾ ಪಡೆ ಸಹ ಉತ್ತಮ ಲಯದಲ್ಲಿದ್ದು, ಟೈಟಾನ್ಸ್‌ನ ರೈಡ್‌ ಮಷಿನ್‌ ಸಿದ್ಧಾರ್ಥ್ ದೇಸಾಯಿಯನ್ನು ನಿಯಂತ್ರಿಸಿದರೆ ಗೆಲುವು ಕಷ್ಟವೇನಲ್ಲ. ಈ ಪಂದ್ಯದಲ್ಲಿ ಗೆದ್ದರೆ ಬುಲ್ಸ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಸಾಧ್ಯತೆ ಇದೆ. ಇನ್ನು 3 ಪಂದ್ಯಗಳಲ್ಲಿ 2 ಸೋಲು, 1 ಟೈ ಕಂಡಿರುವ ಟೈಟಾನ್ಸ್‌ ಗೆಲುವಿನ ಖಾತೆ ತೆರೆಯಲು ಹಪಹಪಿಸುತ್ತಿದೆ.

ಬೆಂಗಳೂರು ಬುಲ್ಸ್‌ ತಂಡ ನಾಯಕ ಹಾಗೂ ತಾರಾ ರೈಡರ್‌ ಪವನ್‌ ಶೆರಾವತ್(Pawan Sharawat) ಮೇಲೆ ಹೆಚ್ಚಾಗಿ ಅವಲಂಬಿತಗೊಂಡಿದೆಯಾದರೂ, ಚಂದ್ರನ್‌ ರಂಜಿತ್‌ ಹಾಗೂ ಭರತ್‌ ಕೂಡಾ ಉತ್ತಮ ರೈಡಿಂಗ್ ಮೂಲಕ ನಾಯಕನಿಗೆ ಉತ್ತಮ ಬೆಂಬಲ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ತಂಡದ ರಕ್ಷಣಾ ಪಡೆ ಸ್ಥಿರತೆ ಕಾಯ್ದುಕೊಳ್ಳಬೇಕಿದೆ. ಮೊದಲ ಪಂದ್ಯದಲ್ಲಿ ಯು ಮುಂಬಾ ಎದುರು ಬೆಂಗಳೂರು ಬುಲ್ಸ್ ತಂಡದ ರಕ್ಷಣಾ ಪಡೆ ಕೊಂಚ ದುರ್ಬಲ ಎನಿಸಿತ್ತು. ಇದಾದ ಬಳಿಕ ನಡೆದ ಮೂರು ಪಂದ್ಯಗಳಲ್ಲೂ ಬುಲ್ಸ್‌ ರಕ್ಷಣಾ ವಿಭಾಗದಲ್ಲಿ ಬಲಿಷ್ಠ ಪ್ರದರ್ಶನ ತೋರುವ ಮೂಲಕ ತಂಡದ ಗೆಲುವಿನಲ್ಲಿ ತನ್ನದೇ ಆದ ಪಾತ್ರ ನಿಭಾಯಿಸಿದೆ.

Pro Kabaddi League : ಹರಿಯಾಣ ಸ್ಟೀಲರ್ಸ್ ಬಗ್ಗುಬಡಿದ ಬೆಂಗಳೂರು ಬುಲ್ಸ್

ಇಂದಿನ ಪಂದ್ಯಗಳು: 
ಯು ಮುಂಬಾ-ಯು.ಪಿ.ಯೋಧಾ, ಸಂಜೆ 7.30ಕ್ಕೆ 
ಬೆಂಗಳೂರು ಬುಲ್ಸ್‌-ತೆಲುಗು ಟೈಟಾನ್ಸ್‌, ರಾತ್ರಿ 8.30ಕ್ಕೆ 
ದಬಾಂಗ್‌ ಡೆಲ್ಲಿ-ತಮಿಳ್‌ ತಲೈವಾಸ್‌, ರಾತ್ರಿ 9.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಗೆಲುವಿನ ಖಾತೆ ತೆರೆದ ತಮಿಳ್ ತಲೈವಾಸ್‌

ಬೆಂಗಳೂರು: ತಮಿಳ್‌ ತಲೈವಾಸ್‌ (Tamil Thalaivas) ಪ್ರೊ ಕಬಡ್ಡಿ 8ನೇ ಆವೃತ್ತಿಯಲ್ಲಿ ಮೊದಲ ಗೆಲುವು ದಾಖಲಿಸಿದೆ. ಶುಕ್ರವಾರ ನಡೆದ ಪುಣೇರಿ ಪಲ್ಟನ್‌ ವಿರುದ್ಧದ ಪಂದ್ಯದಲ್ಲಿ 36-26ರ ಗೆಲುವು ಸಾಧಿಸಿತು. 21ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಅಂಕಣಕ್ಕಿಳಿದ ಅಜಿಂಕ್ಯ ಪವಾರ್‌ 11 ರೈಡ್‌ ಅಂಕ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. 3ನೇ ಸೋಲು ಕಂಡ ಪುಣೇರಿ ಪಲ್ಟನ್‌ (Puneri Paltan) ಕೊನೆ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

ತಿರುಪತಿಯಲ್ಲಿ ಬ್ಯಾಡ್ಮಿಂಟನ್ ಅಕಾಡೆಮಿ ಆರಂಭಿಸಲಿರುವ ಕಿದಂಬಿ ಶ್ರೀಕಾಂತ್..!
 
ಬೆಂಗಾಲ್‌ ವಾರಿಯರ್ಸ್‌ಗೆ ಹ್ಯಾಟ್ರಿಕ್‌ ಸೋಲು

ಬೆಂಗಳೂರು: ಹಾಲಿ ಚಾಂಪಿಯನ್‌ ಬೆಂಗಾಲ್‌ ವಾರಿಯ​ರ್ಸ್‌ 8ನೇ ಆವೃತ್ತಿಯಲ್ಲಿ ಹ್ಯಾಟ್ರಿಕ್‌ ಸೋಲು ಕಂಡಿದೆ. ಶುಕ್ರವಾರ ನಡೆದ ಪಾಟ್ನಾ ಪೈರೇಟ್ಸ್‌ (Patna Pirates) ವಿರುದ್ಧದ ಪಂದ್ಯದಲ್ಲಿ ಬೆಂಗಾಲ್‌ 30-44ರ ಹೀನಾಯ ಸೋಲು ಅನುಭವಿಸಿತು. ಪಾಟ್ನಾ ಪರ ಮೋನು ಗೋಯತ್‌ 15, ಸಚಿನ್‌ 9 ಅಂಕ ಗಳಿಸಿದರು. ಈ ಗೆಲುವಿನೊಂದಿಗೆ ಪಾಟ್ನಾ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದು, ಬೆಂಗಾಲ್‌ 8ನೇ ಸ್ಥಾನಕ್ಕೆ ಕುಸಿದಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್; ಟೂರ್ನಿಯ ವೇಳಾಪಟ್ಟಿ ಪ್ರಕಟ, ಟಿಕೆಟ್ ಬುಕಿಂಗ್ ಆರಂಭ
ಸತತ ಎರಡನೇ ಬಾರಿಗೆ ಭಾರತ ಮಹಿಳೆಯರಿಗೆ ಒಲಿದ ಕಬಡ್ಡಿ ವಿಶ್ವಕಪ್ ಚಾಂಪಿಯನ್ ಪಟ್ಟ!