Pro Kabaddi League: ಜಯದ ಹಳಿಗೆ ಮರಳುತ್ತಾ ಬೆಂಗಳೂರು ಬುಲ್ಸ್..?

By Suvarna News  |  First Published Feb 1, 2022, 12:09 PM IST

* ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿದೆ ಬೆಂಗಳೂರು ಬುಲ್ಸ್‌

* ಪವನ್ ಶೆರಾವತ್ ಪಡೆ ಕಳೆದ 6 ಪಂದ್ಯಗಳ ಪೈಕಿ 5 ಪಂದ್ಯಗಳಲ್ಲಿ ಸೋಲು ಕಂಡಿದೆ

* ಸದ್ಯ ಬೆಂಗಳೂರು  ಬುಲ್ಸ್‌ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ


ಬೆಂಗಳೂರು(ಫೆ.01): ಕಳೆದ 6 ಪಂದ್ಯಗಳಲ್ಲಿ 5ರಲ್ಲಿ ಸೋಲನುಭಸಿರುವ ಮಾಜಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌(Bengaluru Bulls), 8ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ (Pro Kabaddi League) ಮಂಗಳವಾರ ಯು.ಪಿ.ಯೋಧಾ (UP Yoddha) ಸವಾಲನ್ನು ಎದುರಿಸಲಿದೆ. ಒಟ್ಟು 16 ಪಂದ್ಯಗಳಲ್ಲಿ 8 ಜಯದೊಂದಿಗೆ 46 ಅಂಕ ಗಳಿಸಿರುವ ಬುಲ್ಸ್‌ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಪ್ಲೇ ಆಫ್‌ ಸ್ಥಾನಕ್ಕೇರಲು ಎದುರು ನೋಡುತ್ತಿರುವ ಬುಲ್ಸ್‌ ಈ ಪಂದ್ಯದಲ್ಲಿ ಗೆಲ್ಲುವ ನಿರೀಕ್ಷೆಯಲ್ಲಿದೆ.

ಸೋಲಿನ ಸುಳಿಯಿಂದ ಮೇಲೇರಲು ಪರದಾಡುತ್ತಿರುವ ತಂಡಕ್ಕೆ ಪ್ಲೇ-ಆಫ್‌ ರೇಸ್‌ನಲ್ಲಿ ಉಳಿಯಲು ಇನ್ನುಳಿದ 6 ಪಂದ್ಯಗಳಲ್ಲಿ ಕನಿಷ್ಠ 4ರಲ್ಲಿ ಗೆಲುವು ಅನಿವಾರ್ಯ. ನಾಯಕ ಪವನ್‌ ಶೆರಾವತ್‌ (Pawan Sehrawat) ಮೇಲೆ ತಂಡ ಅತಿಯಾಗಿ ಅವಲಂಬಿತಗೊಂಡಿದೆ. ಪವನ್‌ರನ್ನು ಹೆಚ್ಚು ಹೊತ್ತು ಅಂಕಣದಿಂದ ಹೊರಗಿಟ್ಟರೆ ಗೆಲುವು ಸುಲಭವಾಗಲಿದೆ ಎನ್ನುವುದು ಎದುರಾಳಿಗಳಿಗೆ ತಿಳಿದಿದೆ. ತಂಡದ ಡಿಫೆಂಡರ್‌ಗಳು ಅಸ್ಥಿರ ಆಟವಾಡುತ್ತಿದ್ದು, ಸೋಲಿಗೆ ಪ್ರಮುಖ ಕಾರಣಗಳಲ್ಲಿ ಒಂದೆನಿಸಿದೆ.

Tap to resize

Latest Videos

ಇನ್ನೊಂದೆಡೆ, ಯೋಧಾ 14 ಪಂದ್ಯಗಳಲ್ಲಿ ಕೇವಲ 5ರಲ್ಲಿ ಜಯ ಸಾಧಿಸಿದೆ. ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿರುವ ತಂಡ ಹ್ಯಾಟ್ರಿಕ್‌ ಸೋಲು ತಪ್ಪಿಸಲು ಎದುರು ನೋಡುತ್ತಿದೆ. ತಾರಾ ರೈಡರ್‌ ಪ್ರದೀಪ್‌ ನರ್ವಾಲ್‌ ಲಯ ಕಳೆದುಕೊಂಡಿರುವುದು ತಂಡಕ್ಕೆ ಕಂಟಕವಾಗಿ ಪರಿಣಮಿಸಿದೆ. ಮಂಗಳವಾರದ ಮೊದಲ ಪಂದ್ಯದಲ್ಲಿ ಬೆಂಗಾಲ್‌ ವಾರಿಯ​ರ್ಸ್‌ ಮತ್ತು ಗುಜರಾತ್‌ ಸೂಪರ್‌ಜೈಂಟ್ಸ್‌ ಮುಖಾಮುಖಿಯಾಗಲಿವೆ.

ಪ್ರೊ ಕಬಡ್ಡಿ ಲೀಗ್: ಡೆಲ್ಲಿ-ಗುಜರಾತ್‌ಗೆ ಜಯ

ಬೆಂಗಳೂರು: 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ದಬಾಂಗ್ ಡೆಲ್ಲಿ (Dabang Delhi) ಮತ್ತೆ ಅಗ್ರಸ್ಥಾನಕ್ಕೇರಿದೆ. ಸೋಮವಾರ ನಡೆದ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ತಂಡವು ಯು ಮುಂಬಾ (U Mumba) ಎದುರು 36-30 ಅಂಕಗಳ ಅಂತರದ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಮತ್ತೆ ನಂ.1 ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಇನ್ನು ಮತ್ತೊಂದು ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್‌ ವಿರುದ್ದ ಗುಜರಾತ್ ಸೂಪರ್‌ಜೈಂಟ್ಸ್‌32-26 ಅಂಕಗಳಿಂದ ಜಯ ಸಾಧಿಸಿದೆ.

ಪ್ರೊ ಲೀಗ್‌ ಹಾಕಿ: ಭಾರತಕ್ಕೆ 7-1 ಜಯ

ಮಸ್ಕಟ್‌: ಎಫ್‌ಐಎಚ್‌ ಪ್ರೊ ಲೀಗ್‌ ಹಾಕಿ (FIH Pro League Hockey) ಟೂರ್ನಿಯ ತನ್ನ ಪಾದಾರ್ಪಣಾ ಪಂದ್ಯದಲ್ಲೇ ಭಾರತ ಮಹಿಳಾ ತಂಡ ಚೀನಾವನ್ನು 7-1 ಗೋಲುಗಳಿಂದ ಸೋಲಿಸಿ ಶುಭಾರಂಭ ಮಾಡಿದೆ. ಸೋಮವಾರ ನಡೆದ ಪಂದ್ಯದಲ್ಲಿ ಭಾರತ ಪರ ಚಾನು 2 ಗೋಲು ಬಾರಿಸಿದರೆ, ನವ್‌ನೀತ್‌, ವಂದನಾ, ಶರ್ಮಿಳಾ ಹಾಗೂ ಗುರ್ಜಿತ್‌ ತಲಾ ಒಂದು ಗೋಲು ಗಳಿಸಿದರು. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರತ 3ನೇ ಸ್ಥಾನ ಪಡೆಯಿತು. ಮಂಗಳವಾರ ಭಾರತ ತಂಡ ಚೀನಾ ವಿರುದ್ಧ 2ನೇ ಪಂದ್ಯವನ್ನು ಆಡಲಿದ್ದು, ಮತ್ತೊಂದು ಭರ್ಜರಿ ಗೆಲುವಿನ ಮೇಲೆ ಕಣ್ಣಿಟ್ಟಿದೆ.

ಜೋಕೋ ಕಾಲೆಳೆಯುತ್ತಲೇ ಪುಣೆ ಪೊಲೀಸ್‌ ಲಸಿಕೆ ಜಾಗೃತಿ!

ಪುಣೆ: ಕೋವಿಡ್‌ ಲಸಿಕೆಯ (COVID Vaccine) ಬಗ್ಗೆ ಜಾಗೃತಿಗಾಗಿ ಪುಣೆ ಪೊಲೀಸರು ವಿನೂತನ ಮಾರ್ಗ ಆಯ್ದುಕೊಂಡಿದ್ದು, ವಿಶ್ವ ನಂ.1 ಟೆನಿಸಿಗ ನೋವಾಕ್‌ ಜೋಕೋವಿಚ್‌ರನ್ನು (Novak Djokovic) ಉದಾಹರಣೆಯಾಗಿ ಬಳಸಿಕೊಂಡಿದ್ದಾರೆ. 

Australian Open: ರೂ 8 ಕೋಟಿ ಮೌಲ್ಯದ ವಾಚ್‌ ತೊಟ್ಟು ಫೈನಲ್‌ ಪಂದ್ಯವನ್ನಾಡಿದ ರಾಫೆಲ್ ನಡಾಲ್‌..!

ಲಸಿಕೆ ಪಡೆಯಲು ನಿರಾಕರಿಸಿ ಭಾರೀ ಸುದ್ದಿಯಾಗಿದ್ದಲ್ಲದೇ, ಆಸ್ಪ್ರೇಲಿಯನ್‌ ಓಪನ್‌ (Australian Open) ಆಡಲು ಅರ್ಹತೆ ಕಳೆದುಕೊಂಡ ಜೋಕೋವಿಚ್‌ರನ್ನು ಉಲ್ಲೇಖಿಸಿ ಪುಣೆ ಪೊಲೀಸ್‌ ಇಲಾಖೆ ಭಾನುವಾರ ಟ್ವೀಟ್‌ ಮಾಡಿದ್ದು, ‘ನೋ ವ್ಯಾಕ್ಸಿನ್‌, ನೋ ಟ್ರೋಫಿ’ (ಲಸಿಕೆ ಪಡೆಯದಿದ್ದರೆ ಟ್ರೋಫಿ ಇಲ್ಲ), ಇಂದೇ ಲಸಿಕೆ ಹಾಕಿಸಿಕೊಳ್ಳಿ’ ಎಂದು ಬರೆದಿದೆ. ಲಸಿಕೆ ಹಾಕದಿದ್ದರೆ ನಷ್ಟ ಎಂಬ ಸಂದೇಶವನ್ನು ನೀಡುವ ಈ ಟ್ವೀಟ್‌ಗೆ ರಾಫೆಲ್‌ ನಡಾಲ್‌ (Rafael Nadal) ಹಾಗೂ ಜೋಕೋವಿಚ್‌ ಫೋಟೋ ಬಳಸಲಾಗಿದೆ.

click me!