Australian Open: ರೂ 8 ಕೋಟಿ ಮೌಲ್ಯದ ವಾಚ್‌ ತೊಟ್ಟು ಫೈನಲ್‌ ಪಂದ್ಯವನ್ನಾಡಿದ ರಾಫೆಲ್ ನಡಾಲ್‌..!

By Suvarna News  |  First Published Feb 1, 2022, 11:22 AM IST

* ದಾಖಲೆಯ 21ನೇ ಟೆನಿಸ್ ಗ್ರ್ಯಾನ್ ಸ್ಲಾಂ ಜಯಿಸಿದ ರಾಫೆಲ್ ನಡಾಲ್

* ಫೈನಲ್ ಪಂದ್ಯದ ವೇಳೆ 8 ಕೋಟಿ ರುಪಾಯಿ ಮೌಲ್ಯದ ವಾಚ್ ತೊಟ್ಟಿದ್ದ ನಡಾಲ್

* ಸ್ವಿಜರ್‌ಲೆಂಡ್‌ನ ರಿಚರ್ಡ್‌ ಮಿಲ್ಲೆ ವಾಚ್‌ ಧರಿಸಿ ಗಮನ ಸೆಳೆದ ನಡಾಲ್


ಮೆಲ್ಬರ್ನ್(ಫೆ.01)‌: ಆಸ್ಪ್ರೇಲಿಯನ್‌ ಓಪನ್‌ (Australian Open) ಗೆದ್ದು ದಾಖಲೆಯ 21ನೇ ಗ್ರ್ಯಾನ್‌ ಸ್ಲಾಂ ಪ್ರಶಸ್ತಿಗೆ ಮುತ್ತಿಟ್ಟ ರಾಫೆಲ್‌ ನಡಾಲ್‌ (Rafael Nadal) ಟೂರ್ನಿಯಲ್ಲಿ ಆಡುವಾಗ ತೊಟ್ಟಿದ್ದ ವಾಚ್‌ ಎಲ್ಲರ ಗಮನ ಸೆಳೆದಿತ್ತು. ಅವರು ತೊಟ್ಟಿದ್ದ ವಾಚ್‌ನ ಮೌಲ್ಯ ಬರೋಬ್ಬರಿ 8 ಕೋಟಿ ರು. (1.05 ಮಿಲಿಯನ್‌ ಡಾಲರ್‌) ಎಂದರೆ ಯಾರಿಗಾದರೂ ಅಚ್ಚರಿಯಾಗುತ್ತೆ. 2010ರಿಂದ ಸ್ವಿಜರ್‌ಲೆಂಡ್‌ನ ರಿಚರ್ಡ್‌ ಮಿಲ್ಲೆ ವಾಚ್‌ (Richard Mille Watch) ಸಂಸ್ಥೆಯ ರಾಯಭಾರಿಯಾಗಿರುವ ನಡಾಲ್‌ ಈ ಹಿಂದೆಯೂ ಹಲವು ಬಾರಿ ಈ ವಾಚ್‌ ಧರಿಸಿ ಕಣಕ್ಕಿಳಿದಿದ್ದಾರೆ. ಈ ವಾಚ್‌ ಅತ್ಯಂತ ಕಡಿಮೆ ತೂಕದ್ದಾಗಿದ್ದು ಕೇವಲ 30 ಗ್ರಾಂ ಇದೆ. ಇದು ನೀರಿನ ಮೇಲೆ ತೇಲಬಲ್ಲದು.

ಟೆನಿಸ್‌ ಜಗತ್ತಿನಲ್ಲಿ ರೋಜರ್‌ ಫೆಡರರ್‌(Roger Federer), ರಾಫೆಲ್‌ ನಡಾಲ್‌ ಹಾಗೂ ನೊವಾಕ್‌ ಜೋಕೋವಿಚ್‌ರನ್ನು (Novak Djokovic) ‘ಬಿಗ್‌ 3’ ಎಂದು ಕರೆಯಲಾಗುತ್ತೆ. ಫೆಡರರ್‌ ಹಾಗೂ ಜೋಕೋವಿಚ್‌ 20 ಗ್ರ್ಯಾನ್‌ ಸ್ಲಾಂ ಗೆಲುವುಗಳಲ್ಲೇ ಉಳಿದುಕೊಂಡಿದ್ದು, ನಡಾಲ್‌ ತಮ್ಮ ಇಬ್ಬರು ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿದ್ದಾರೆ.

Tap to resize

Latest Videos

ಸರಿಯಾದ ಅಭ್ಯಾಸವಿಲ್ಲದೆ ಆಸ್ಪ್ರೇಲಿಯಾಗೆ ತೆರಳಿದ್ದ ರಾಫಾ!

ನಡಾಲ್‌ 2021ರ ಅಂತಿಮ ಹಂತದಲ್ಲಿ ಕೇವಲ 2 ಪಂದ್ಯಗಳನ್ನಷ್ಟೇ ಆಡಿ ಆಸ್ಪ್ರೇಲಿಯಾಗೆ ತೆರಳಿದ್ದರು. ಕಾಲಿನ ಗಾಯದಿಂದ ಚೇತರಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಂಡ ನಡಾಲ್‌, ಕೋವಿಡ್‌ಗೂ (COVID 19) ತುತ್ತಾಗಿ ಟೆನಿಸ್‌ನಿಂದ ಬಹಳ ದಿನಗಳ ಕಾಲ ಹೊರಗುಳಿದಿದ್ದರು. ಈ ನಡುವೆ ಕಳೆದ ವರ್ಷ ಟೆನಿಸ್‌ಗೆ ಗುಡ್‌ಬೈ ಹೇಳಲು ಚಿಂತಿಸಿದ್ದಾಗಿ ನಡಾಲ್‌ ಬಹಿರಂಗಪಡಿಸಿದ್ದಾರೆ.

Rafael Nadal just became the only man in tennis history to win 21 Grand Slams, and he did it while wearing a $1.05 million Richard Mille watch 🔥 pic.twitter.com/sz1Jop1nTv

— Joe Pompliano (@JoePompliano)

Australian Open: ಫ್ಯಾನ್ಸ್‌ ಒತ್ತಡದಿಂದ ಫೈನಲ್ ಪಂದ್ಯ ಸೋತ ಡ್ಯಾನಿಲ್‌ ಮೆಡ್ವೆಡೆವ್‌

ನಡಾಲ್‌ರನ್ನು ಅಭಿನಂದಿಸಿದ ಫೆಡರರ್‌, ಜೋಕೋವಿಚ್‌!

21ನೇ ಗ್ರ್ಯಾನ್‌ ಸ್ಲಾಂ ಗೆದ್ದು ತಮ್ಮನ್ನು ಹಿಂದಿಕ್ಕಿದ್ದ ರಾಫೆಲ್‌ ನಡಾಲ್‌ರನ್ನು ರೋಜರ್‌ ಫೆಡರರ್‌ ಹಾಗೂ ನೋವಾಕ್‌ ಜೋಕೋವಿಚ್‌ ಅಭಿನಂದಿಸಿದ್ದಾರೆ. ‘ನನ್ನ ಆಪ್ತ ಸ್ನೇಹಿತ ಹಾಗೂ ಅತಿ ಕಠಿಣ ಎದುರಾಳಿಗೆ ಅಭಿನಂದನೆಗಳು. ನಿಮ್ಮ ಪರಿಶ್ರಮ, ಛಲ, ಆಟದತ್ತ ಶ್ರದ್ಧೆಗೆ ಸಿಕ್ಕಿರುವ ಫಲವಿದು. ನಿಮ್ಮೊಂದಿಗೆ ಆಡುವ ಅವಕಾಶ ಸಿಕ್ಕಿದ್ದಕ್ಕೆ ನನಗೆ ಬಹಳ ಹೆಮ್ಮೆ ಇದೆ. ಕಳೆದ 18 ವರ್ಷಗಳಿಂದ ನನಗೆ ಮತ್ತಷ್ಟು ಸಾಧಿಸಲು ಸ್ಫೂರ್ತಿ ತುಂಬುತಿದ್ದೀರಿ. ನಿಮಗಾಗಿ ಮತ್ತಷ್ಟು ಯಶಸ್ಸು ಕಾಯುತ್ತಿದೆ’ ಎಂದು ಫೆಡರರ್‌ ಟ್ವೀಟ್‌ ಮಾಡಿದರೆ, ‘ನಿಮ್ಮ ಹೋರಾಟದ ಛಲ ಮತ್ತೆ ಗೆದ್ದಿದೆ. 21ನೇ ಗ್ರ್ಯಾನ್‌ ಸ್ಲಾಂ ಜಯಿಸಿದ್ದಕ್ಕೆ ಅಭಿನಂದನೆಗಳು’ ಎಂದು ಜೋಕೋವಿಚ್‌ ಟ್ವೀಟರಲ್ಲಿ ಬರೆದುಕೊಂಡಿದ್ದಾರೆ.

Rafael Nadal: ದಾಖಲೆಯ 21 ಗ್ರ್ಯಾನ್‌ ಸ್ಲಾಂಗೆ ಅಧಿಪತಿ ರಾಫೆಲ್ ನಡಾಲ್‌

2005-2022: ಒಟ್ಟು 68 ಗ್ರ್ಯಾನ್‌ಸ್ಲಾಂ, 57 ‘ಬಿಗ್‌’ 3 ಪಾಲು!

2005ರಿಂದ 2022ರ ವರೆಗೂ ಒಟ್ಟು 68 ಗ್ರ್ಯಾನ್‌ ಸ್ಲಾಂ ಟೂರ್ನಿಗಳು ನಡೆದಿವೆ. ಇದರಲ್ಲಿ ಫೆಡರರ್‌, ನಡಾಲ್‌ ಹಾಗೂ ಜೋಕೋವಿಚ್‌ ಮೂವರೇ ಒಟ್ಟು 57 ಗ್ರ್ಯಾನ್‌ ಸ್ಲಾಂಗಳನ್ನು ಗೆದ್ದಿದ್ದಾರೆ. ಫೆಡರರ್‌ 5 ಆಸ್ಪ್ರೇಲಿಯನ್‌ ಓಪನ್‌, 1 ಫ್ರೆಂಚ್‌ ಓಪನ್‌, 6 ವಿಂಬಲ್ಡನ್‌, 4 ಯುಎಸ್‌ ಓಪನ್‌ ಗೆದ್ದರೆ. ನಡಾಲ್‌ 2 ಆಸ್ಪ್ರೇಲಿಯನ್‌ ಓಪನ್‌, 13 ಫ್ರೆಂಚ್‌ ಓಪನ್‌(French Open), 2 ವಿಂಬಲ್ಡನ್‌(Wimbledon), 4 ಯುಎಸ್‌ ಓಪನ್‌ (US Open) ಟ್ರೋಫಿಗಳನ್ನು ಜಯಿಸಿದ್ದಾರೆ. ಜೋಕೋವಿಚ್‌ 9 ಆಸ್ಪ್ರೇಲಿಯನ್‌ ಓಪನ್‌, 2 ಫ್ರೆಂಚ್‌ ಓಪನ್‌, 6 ವಿಂಬಲ್ಡನ್‌, 3 ಯುಎಸ್‌ ಓಪನ್‌ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.

click me!