Pro Kabaddi League 2022: ಭಾಗ-2ರ ಪ್ರೊ ಕಬಡ್ಡಿ ವೇಳಾಪಟ್ಟಿ ಪ್ರಕಟ

Kannadaprabha News   | Asianet News
Published : Jan 18, 2022, 11:33 AM IST
Pro Kabaddi League 2022: ಭಾಗ-2ರ ಪ್ರೊ ಕಬಡ್ಡಿ ವೇಳಾಪಟ್ಟಿ ಪ್ರಕಟ

ಸಾರಾಂಶ

* ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಎರಡನೇ ಭಾಗದ ವೇಳಾಪಟ್ಟಿ ಪ್ರಕಟ * ಪ್ಲೇ ಆಫ್‌ಗೆ ಪ್ರವೇಶಿಸಲು ರೆಡಿಯಾದ ಬೆಂಗಳೂರು ಬುಲ್ಸ್ ತಂಡ * ಡಬಲ್‌ ರೌಂಡ್‌ ರಾಬಿನ್‌ ಹಂತದಲ್ಲಿ ಪ್ರತಿ ತಂಡ ತಲಾ 22 ಪಂದ್ಯಗಳನ್ನು ಆಡಲಿದೆ

ಬೆಂಗಳೂರು(ಜ.18): 8ನೇ ಆವೃತ್ತಿಯ ಪ್ರೊ ಕಬಡ್ಡಿಯ (Pro Kabaddi League 2022) ಭಾಗ 2ರ ವೇಳಾಪಟ್ಟಿಯನ್ನು (PKL Schedule) ಆಯೋಜಕರು ಸೋಮವಾರ ಪ್ರಕಟಿಸಿದ್ದು ಜನವರಿ 20ರಿಂದ ಫೆಬ್ರವರಿ 4ರ ವರೆಗೂ ಒಟ್ಟು 33 ಪಂದ್ಯಗಳು ನಡೆಯಲಿವೆ. ಈ ಅವಧಿಯಲ್ಲಿ ಬೆಂಗಳೂರು ಬುಲ್ಸ್‌ (Bengaluru Bulls) ತಂಡ 6 ಪಂದ್ಯಗಳನ್ನು ಆಡಲಿದೆ. ಡಬಲ್‌ ರೌಂಡ್‌ ರಾಬಿನ್‌ ಹಂತದಲ್ಲಿ ಪ್ರತಿ ತಂಡ ತಲಾ 22 ಪಂದ್ಯಗಳನ್ನು ಆಡಲಿದ್ದು, ಬುಲ್ಸ್‌ ಈಗಾಗಲೇ ಅರ್ಧದಷ್ಟು ಎಂದರೆ 11 ಪಂದ್ಯಗಳನ್ನು ಪೂರ್ಣಗೊಳಿಸಿದೆ. 

ಆಡಿರುವ 11 ಪಂದ್ಯಗಳ ಪೈಕಿ 7 ಗೆಲುವುಗಳನ್ನು ಕಂಡಿರುವ ಪವನ್ ಶೆರಾವತ್ ನೇತೃತ್ವದ ಬೆಂಗಳೂರು ಬುಲ್ಸ್‌, ಕೇವಲ 3 ಪಂದ್ಯಗಳಲ್ಲಿ ಸೋತಿದೆ. 1 ಪಂದ್ಯ ಟೈ ಆಗಿದೆ. ಇನ್ನುಳಿದಿರುವ 11 ಪಂದ್ಯಗಳಲ್ಲಿ ಕನಿಷ್ಠ 4ರಿಂದ 5 ಪಂದ್ಯಗಳನ್ನು ಗೆದ್ದರೆ ಬುಲ್ಸ್‌ ಪ್ಲೇ-ಆಫ್ಸ್‌ನಲ್ಲಿ ಸ್ಥಾನ ಖಚಿತಪಡಿಸಿಕೊಳ್ಳಲಿದೆ. ಅಂಕಪಟ್ಟಿಯಲ್ಲಿ ಅಗ್ರ 2ರಲ್ಲಿ ಸ್ಥಾನ ಗಳಿಸಿದರೆ ಲಾಭ ಹೆಚ್ಚು.

ಟೂರ್ನಿ ಆರಂಭಕ್ಕೂ ಮುನ್ನ ಮೊದಲ 65 ಪಂದ್ಯಗಳ ವೇಳಾಪಟ್ಟಿಯನ್ನಷ್ಟೇ ಪ್ರಕಟಗೊಳಿಸಲಾಗಿತ್ತು. ಭಾಗ 2ರ ಬಳಿಕ ಡಬಲ್‌ ರೌಂಡ್‌ ರಾಬಿನ್‌ ಹಂತದಲ್ಲಿ ಇನ್ನು 33 ಪಂದ್ಯಗಳು ಉಳಿದುಕೊಳ್ಳಲಿದ್ದು, ಮುಂಬರುವ ದಿನಗಳಲ್ಲಿ ಆ ಪಂದ್ಯಗಳಿಗೆ ವೇಳಾಪಟ್ಟಿಯನ್ನು ಆಯೋಜಕರು ಪ್ರಕಟಿಸಲಿದ್ದಾರೆ. ಫೆಬ್ರವರಿ ಕೊನೆ ವಾರದಲ್ಲಿ ಪ್ಲೇ-ಆಫ್‌ ಪಂದ್ಯಗಳು ನಡೆಯಲಿದ್ದು ಫೈನಲ್‌ ಫೆಬ್ರವರಿ 26ಕ್ಕೆ ನಡೆಯುವ ಸಾಧ್ಯತೆ ಇದೆ.

ಬೆಂಗಳೂರು ಬುಲ್ಸ್‌ ವೇಳಾಪಟ್ಟಿ

ದಿನಾಂಕ ಎದುರಾಳಿ

ಜ.30 ಪಾಟ್ನಾ ಪೈರೇಟ್ಸ್‌

ಜ.23 ಗುಜರಾತ್‌ ಜೈಂಟ್ಸ್‌

ಜ.26 ದಬಾಂಗ್‌ ಡೆಲ್ಲಿ

ಜ.30 ತೆಲುಗು ಟೈಟಾನ್ಸ್‌

ಫೆ.1 ತಮಿಳ್‌ ತಲೈವಾಸ್‌

ಫೆ.4 ಯು.ಪಿ.ಯೋಧಾ

ಪ್ರೊ ಕಬಡ್ಡಿ ಲೀಗ್‌ನಲ್ಲಿ 8ನೇ ಸೋಲು ಕಂಡ ತೆಲುಗು ಟೈಟಾನ್ಸ್

ಬೆಂಗಳೂರು: 8ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ ತೆಲುಗು ಟೈಟಾನ್ಸ್‌ 8ನೇ ಸೋಲನುಭವಿಸಿದೆ. ಸೋಮವಾರ ಬೆಂಗಾಲ್ ವಾರಿಯರ್ಸ್ ವಿರುದ್ದ ನಡೆದ ಪಂದ್ಯದಲ್ಲಿ 27-28 ಅಂಕಗಳ ಅಂತರದ ರೋಚಕ ಸೋಲು ಅನುಭವಿಸಿತು. ಟೂರ್ನಿಯಲ್ಲಿ 5ನೇ ಗೆಲುವು ಕಂಡ ಬೆಂಗಾಲ್ ವಾರಿಯರ್ಸ್ ತಂಡವು ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. 

Pro Kabaddi League : ಪಟನಾ ಪೈರೇಟ್ಸ್ ವಿರುದ್ಧ ಸೋಲು ಕಂಡ ಬೆಂಗಳೂರು ಬುಲ್ಸ್!

ಇದಕ್ಕೂ ಮೊದಲು ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ಪುಣೇರಿ ಪಲ್ಟನ್ ವಿರುದ್ದ ಯು.ಪಿ. ಯೋಧಾ ತಂಡವು 40-50 ಅಂಕಗಳ ಗೆಲುವು ಸಾಧಿಸಿತು. 4ನೇ ಗೆಲುವು ಸಾಧಿಸಿದ ಯೋಧಾ ತಂಡವು ನಾಲ್ಕನೇ ಸ್ಥಾನದಲ್ಲಿದ್ದರೆ, ಪುಣೆ ತಂಡವು 10ನೇ ಸ್ಥಾನದಲ್ಲಿದೆ.

ಇಂದಿನಿಂದ ಸೈಯದ್‌ ಮೋದಿ ಬ್ಯಾಡ್ಮಿಂಟನ್‌: ಸಿಂಧು ಫೇವರಿಟ್‌

ಲಖನೌ: ಸೈಯದ್‌ ಮೋದಿ ಇಂಟರ್‌ನ್ಯಾಷನಲ್‌ ಬ್ಯಾಡ್ಮಿಂಟನ್‌ ಟೂರ್ನಿ ಇಲ್ಲಿನ ಬಾಬು ಬನಾರಸಿ ದಾಸ್‌ ಒಳಾಂಗಣ ಕ್ರೀಡಾಂಣಗಣಲ್ಲಿ ಮಂಗಳವಾರ ಆರಂಭವಾಗಲಿದ್ದು, 2 ಬಾರಿ ಒಲಿಂಪಿಕ್‌ ಪದಕ ವಿಜೇತೆ ಪಿ.ವಿ.ಸಿಂಧು (PV Sindhu) ಪ್ರಶಸ್ತಿ ಫೇವರಿಟ್‌ ಎನಿಸಿಕೊಂಡಿದ್ದಾರೆ. 2017ರಲ್ಲಿ ಮೊದಲ ಬಾರಿ ಮಹಿಳಾ ಸಿಂಗಲ್ಸ್‌ ಚಾಂಪಿಯನ್‌ ಆಗಿದ್ದ ಸಿಂಧು, ಇದೀಗ ಮತ್ತೊಮ್ಮೆ ಪ್ರಶಸ್ತಿಗೆ ಮುತ್ತಿಕ್ಕಲು ಎದುರು ನೋಡುತ್ತಿದ್ದಾರೆ.

ಮೊದಲ ಸುತ್ತಲ್ಲಿ ಅವರು ಭಾರತದವರೇ ಆದ ತಾನ್ಯ ಹೇಮಂತ್‌ರ ಸವಾಲನ್ನು ಎದುರಿಸಲಿದ್ದಾರೆ. 3 ಬಾರಿಯ ಚಾಂಪಿಯನ್‌ ಸೈನಾ ನೆಹ್ವಾಲ್‌ ಕೂಡಾ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು, ಆರಂಭಿಕ ಸುತ್ತಲ್ಲಿ ಚೆಕ್‌ ಗಣರಾಜ್ಯದ ತೆರೆಜಾ ವಿರುದ್ಧ ಆಡಲಿದ್ದಾರೆ. ಇವರ ಹೊರತಾಗಿ ಇನ್ನೂ 16 ಭಾರತೀಯ ಶಟ್ಲರ್‌ಗಳು ಮಹಿಳಾ ಸಿಂಗಲ್ಸ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಭಾನುವಾರ ಇಂಡಿಯಾ ಓಪನ್‌ ಪ್ರಶಸ್ತಿ ಗೆದ್ದ ವರ್ಷದ ಲಕ್ಷ್ಯ ಸೆನ್‌ ಸೇರಿ ಹಲವರು ಗೈರಾಗಲಿದ್ದಾರೆ. ಎಚ್‌.ಎಸ್‌.ಪ್ರಣಯ್‌, ಸೌರಭ್‌ ವರ್ಮಾ, ಸಮೀರ್‌ ವರ್ಮಾ ಕಣದಲ್ಲಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್; ಟೂರ್ನಿಯ ವೇಳಾಪಟ್ಟಿ ಪ್ರಕಟ, ಟಿಕೆಟ್ ಬುಕಿಂಗ್ ಆರಂಭ
ಸತತ ಎರಡನೇ ಬಾರಿಗೆ ಭಾರತ ಮಹಿಳೆಯರಿಗೆ ಒಲಿದ ಕಬಡ್ಡಿ ವಿಶ್ವಕಪ್ ಚಾಂಪಿಯನ್ ಪಟ್ಟ!