Australian Open 2022: ಇಂದಿನಿಂದ ಆಸ್ಟ್ರೇಲಿಯನ್ ಓಪನ್‌ ಗ್ರ್ಯಾನ್‌ ಸ್ಲಾಂ ಆರಂಭ

By Kannadaprabha News  |  First Published Jan 17, 2022, 9:52 AM IST

* ಆಸ್ಟ್ರೇಲಿಯನ್‌ ಓಪನ್ ಟೆನಿಸ್ ಟೂರ್ನಿಗೆ ಸೋಮವಾರ ಚಾಲನೆ

* ಜೋಕೋವಿಚ್‌ ವಿವಾದದ ಬಳಿಕ ವರ್ಷದ ಮೊದಲ ಗ್ರ್ಯಾನ್‌ ಸ್ಲಾಂಗೆ ಚಾಲನೆ

* 21ನೇ ಗ್ರ್ಯಾನ್‌ ಸ್ಲಾಂ ಮೇಲೆ ಕಣ್ಣಿಟ್ಟಿದ್ದಾರೆ ಸ್ಪೇನ್ ಟೆನಿಸಿಗ ರಾಫೆಲ್‌ ನಡಾಲ್‌


ಮೆಲ್ಬರ್ನ್(ಜ.17)‌: ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾನ್‌ ಸ್ಲಾಂ ಟೆನಿಸ್‌ ಟೂರ್ನಿಗೆ (Australian Open Tennis Tournament) ಸೋಮವಾರ ಚಾಲನೆ ದೊರೆತಿದೆ. ವಿಶ್ವ ನಂ.1 ಆಟಗಾರ, ಸರ್ಬಿಯಾದ ನೋವಾಕ್‌ ಜೋಕೋವಿಚ್‌ (Novak Djokovic) ಗೈರಾಗುವ ಕಾರಣ ಸ್ಪೇನ್‌ನ ರಾಫೆಲ್‌ ನಡಾಲ್‌ (Rafael Nadal) ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಸೋಮವಾರ ವಿಶ್ವ ನಂ.6 ನಡಾಲ್‌ಗೆ ಅಮೆರಿಕದ ಮಾರ್ಕೊಸ್‌ ಗಿರೋನ್‌ ಸವಾಲು ಎದುರಾಗಲಿದೆ. 2009ರಲ್ಲಿ ಕೊನೆ ಬಾರಿ ಆಸ್ಪ್ರೇಲಿಯನ್‌ ಓಪನ್‌ ಪ್ರಶಸ್ತಿ ಗೆದ್ದಿರುವ ನಡಾಲ್‌ ಈ ಬಾರಿ ಮತ್ತೊಂದು ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿದ್ದಾರೆ. ಈ ಮೂಲಕ ದಾಖಲೆಯ 21ನೇ ಗ್ರ್ಯಾನ್‌ ಸ್ಲಾಂ ಗೆಲ್ಲುವ ತವಕದಲ್ಲಿದ್ದಾರೆ.

20 ಪ್ರಶಸ್ತಿ ಗ್ರ್ಯಾನ್‌ ಸ್ಲಾಂ ವಿಜೇತ ರೋಜರ್‌ ಫೆಡರರ್‌ (Roger Federer) ಕೂಡಾ ಗೈರಾಗಿದ್ದು ನಡಾಲ್‌ಗೆ ವರದಾನವಾಗುವ ಸಾಧ್ಯತೆ ಇದೆ. ವಿಶ್ವ ನಂ.2 ರಷ್ಯಾದ ಡೇನಿಲ್‌ ಮೆಡ್ವೆಡೆವ್‌ ಕೂಡಾ ಪ್ರಶಸ್ತಿ ಗೆಲ್ಲುವ ಫೇವರಿಟ್‌ ಎನಿಸಿಕೊಂಡಿದ್ದು, ಮೊದಲ ಸುತ್ತಲ್ಲಿ ಸ್ವಿಜರ್‌ಲೆಂಡ್‌ನ ಹೆನ್ರಿ ಲಾಕ್ಸೊನೆನ್‌ ವಿರುದ್ಧ ಆಡಲಿದ್ದಾರೆ.

Tap to resize

Latest Videos

ಇನ್ನು ಮಹಿಳಾ ಸಿಂಗಲ್ಸ್‌ನಲ್ಲಿ ಆಸ್ಪ್ರೇಲಿಯಾದ ಆಶ್ಲೆ ಬಾರ್ಟಿ, ಜಪಾನ್‌ನ ನವೋಮಿ ಒಸಾಕ ಪ್ರಶಸ್ತಿ ಗೆಲ್ಲುವ ತವಕದಲ್ಲಿದ್ದಾರೆ. ಆಶ್ಲೆಗೆ ಮೊದಲ ಸುತ್ತಿನಲ್ಲಿ ಉಕ್ರೇನ್‌ನ ಲೆಸಿಯಾ, ಒಸಾಕಗೆ ಕೊಲಂಬಿಯಾದ ಒಸೊರಿಯೋ ಸವಾಲು ಎದುರಾಗಲಿದೆ. 1997ರಿಂದ ಇದೇ ಮೊದಲ ಬಾರಿ ವಿಲಿಯಮ್ಸ್‌ ಸಹೋದರಿಯರು ಟೂರ್ನಿಗೆ ಗೈರಾಗಲಿದ್ದಾರೆ.

It's Rafa time 🇪🇸 • • pic.twitter.com/LvGg7HMPMC

— #AusOpen (@AustralianOpen)

ಜೋಕೋವಿಚ್‌ಗೆ ಆಸ್ಪ್ರೇಲಿಯನ್‌ ಓಪನ್‌ ಬಾಗಿಲು ಬಂದ್‌!

ವಿಶ್ವ ನಂ.1 ಟೆನಿಸಿಗ, ಸರ್ಬಿಯಾದ ನೋವಾಕ್‌ ಜೋಕೋವಿಚ್‌ ಹಾಗೂ ಆಸ್ಪ್ರೇಲಿಯಾ ಸರ್ಕಾರದ ನಡುವಿನ ಸಂಘರ್ಷ ಕೊನೆಗೊಂಡಿದ್ದು, ಆಸ್ಪ್ರೇಲಿಯಾ ಸರ್ಕಾರ ಮೇಲುಗೈ ಸಾಧಿಸಿ ಮುಖಭಂಗದಿಂದ ಪಾರಾಗಿದೆ. ವೀಸಾ ರದ್ದು ಪ್ರಕರಣದಲ್ಲಿ 2ನೇ ಬಾರಿ ಸರ್ಕಾರದ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದ ಜೋಕೋವಿಚ್‌ ಕಾನೂನು ಸಮರದಲ್ಲಿ ಸೋಲನುಭವಿಸಿದ್ದಾರೆ.

Novak Djokovic Australian Visa : ವಿಶ್ವ ನಂ.1 ಟೆನಿಸ್ ಆಟಗಾರ ಆಸೀಸ್ ನಿಂದ ಗಡಿಪಾರು!

ಇದರೊಂದಿಗೆ ಸೋಮವಾರ ಆರಂಭವಾಗಲಿರುವ ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾನ್‌ ಸ್ಲಾಂನಲ್ಲಿ ಪಾಲ್ಗೊಳ್ಳಲು ಅರ್ಹತೆ ಕಳೆದುಕೊಂಡಿದ್ದು, ಆಸ್ಪ್ರೇಲಿಯಾದಿಂದ ಗಡಿಪಾರುಗೊಂಡಿದ್ದಾರೆ. ಭಾನುವಾರ ಕೋರ್ಟ್‌ ತೀರ್ಪು ನೀಡಿದ ಕೆಲವೇ ಗಂಟೆಗಳಲ್ಲಿ ಅವರು ದುಬೈಗೆ ವಿಮಾನ ಹತ್ತಿದರು. ಒಮ್ಮೆ ಆಸ್ಪ್ರೇಲಿಯಾ ಸರ್ಕಾರ ವೀಸಾ (Australian Visa) ರದ್ದುಗೊಳಿಸಿದರೆ 3 ವರ್ಷ ಆ ದೇಶಕ್ಕೆ ಪ್ರವೇಶಿಸುವಂತಿಲ್ಲ ಎನ್ನುವುದು ಕಾನೂನು. ಜೋಕೋವಿಚ್‌ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ನಿರ್ಧರಿಸಿರುವ ಆಸ್ಪ್ರೇಲಿಯಾ, 3 ವರ್ಷ ನಿರ್ಬಂಧ ಹೇರುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಕೋರ್ಟ್‌ ತೀರ್ಪು ಗೌರವಿಸುತ್ತೇನೆ

ವೀಸಾ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪಿನಿಂದ ಬಹಳ ಬೇಸರವಾಗಿದೆ. ಆದರೆ ತೀರ್ಪನ್ನು ನಾನು ಗೌರವಿಸುತ್ತೇನೆ ಮತ್ತು ಗಡಿಪಾರು ವಿಚಾರದಲ್ಲಿ ಅಧಿಕಾರಿಗಳಿಗೆ ಎಲ್ಲಾ ನೆರವು ನೀಡುತ್ತೇನೆ. ಆಸ್ಪ್ರೇಲಿಯನ್‌ ಓಪನ್‌ನಲ್ಲಿ ಆಡುತ್ತಿರುವ ಎಲ್ಲರಿಗೂ ಆಲ್‌ ದಿ ಬೆಸ್ಟ್‌ ಹಾಗೂ ಸಂಕಷ್ಟದ ಸಮಯದಲ್ಲಿ ನನ್ನನ್ನು ಬೆಂಬಲಿಸಿದ ಅಭಿಮಾನಿಗಳು, ಸ್ನೇಹಿತರು, ಸರ್ಬಿಯಾದ ಜನತೆಗೆ ಧನ್ಯವಾದಗಳು.

-ನೋವಾಕ್‌ ಜೋಕೋವಿಚ್‌

ಜೋಕೋಗೆ ನಂ.1 ಪಟ್ಟ ಕೈತಪ್ಪುವ ಭೀತಿ!

ದಾಖಲೆಯ 355 ವಾರಗಳ ಕಾಲ ವಿಶ್ವ ನಂ.1 ಸ್ಥಾನದಲ್ಲಿರುವ ನೋವಾಕ್‌ ಜೋಕೋವಿಚ್‌ ಆಸ್ಪ್ರೇಲಿಯನ್‌ ಓಪನ್‌ನಿಂದ ಹೊರಬಿದ್ದಿರುವ ಕಾರಣ ಅವರ ಸ್ಥಾನ ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ ಪಾಲಾಗುವ ಸಾಧ್ಯತೆ ಇದೆ. ಮೆಡ್ವೆಡೆವ್‌ ಆಸ್ಪ್ರೇಲಿಯನ್‌ ಓಪನ್‌ ಗೆದ್ದರೆ ಚೊಚ್ಚಲ ಬಾರಿಗೆ ಅಗ್ರಸ್ಥಾನಕ್ಕೇರಲಿದ್ದಾರೆ. ಅಲ್ಲದೇ ಪುರುಷರ ವಿಶ್ವ ರಾರ‍ಯಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿದ 27ನೇ ಆಟಗಾರ ಎನಿಸಲಿದ್ದಾರೆ.

ಪ್ರಾಯೋಜಕತ್ವ ಖೋತಾ?

ಜೋಕೋವಿಚ್‌ ಕೋವಿಡ್‌ ಲಸಿಕೆ ಪಡೆಯದೆ ಇರುವುದು, ಆಸ್ಪ್ರೇಲಿಯನ್‌ ಓಪನ್‌ನಲ್ಲಿ ಇನ್ನೂ 2 ವರ್ಷ ಆಡಲು ಸಾಧ್ಯವಾಗದೆ ಇರುವುದರಿಂದ ಅವರು ಕೆಲ ಪ್ರಾಯೋಜಕತ್ವಗಳನ್ನು ಕಳೆದುಕೊಳ್ಲುವ ಸಾಧ್ಯತೆ ಇದೆ. ಜನರ ಹಿತಾದೃಷ್ಟಿಯ ಬಗ್ಗೆ ಜೋಕೋವಿಚ್‌ ಚಿಂತಿಸುತ್ತಿಲ್ಲ ಎಂದು ಈಗಾಗಲೇ ಹಲವರು ಟೀಕೆ ಮಾಡಿದ್ದಾರೆ. ವಿವಾದದಲ್ಲಿ ಸಿಲುಕಿರುವ ಜೋಕೋವಿಚ್‌ರನ್ನು ರಾಯಭಾರಿಯಾಗಿ ಮುಂದುವರಿಸಲು ಕೆಲ ಕಂಪನಿಗಳು ನಿರಾಕರಿಸಬಹುದು ಎನ್ನಲಾಗುತ್ತಿದೆ.

ಸರ್ಬಿಯಾಗೆ ಬನ್ನಿ: ಜೋಕೋಗೆ ಅಧ್ಯಕ್ಷ

ಬೆಲ್ಗ್ರೇಡ್‌: ಆಸ್ಪ್ರೇಲಿಯಾದಿಂದ ಗಡಿಪಾರಾದ ನೋವಾಕ್‌ ಜೋಕೋವಿಚ್‌ರನ್ನು ಶೀಘ್ರ ಸರ್ಬಿಯಾಗೆ ಬರುವಂತೆ ಆ ದೇಶದ ಅಧ್ಯಕ್ಷ ಅಲೆಕ್ಸಾಂಡರ್‌ ವುಸಿಚ್‌ ಹೇಳಿದ್ದಾರೆ. ಆಸ್ಪ್ರೇಲಿಯಾ, ದಿಗ್ಗಜ ಟೆನಿಸಿಗನನ್ನು ಅವಮಾನಿಸಿದೆ ಎಂದಿರುವ ವುಸಿಚ್‌, ಕೋರ್ಟ್‌ ತೀರ್ಪನ್ನು ತಮಾಷೆ ಎಂದು ಕರೆದಿದ್ದಾರೆ. ‘ವಿಶ್ವದ ಶ್ರೇಷ್ಠ ಟೆನಿಸಿಗನನ್ನು ಅವಮಾನಿಸಲಾಗಿದೆ. 10 ದಿನಗಳ ಕಾಲ ಹಿಂಸೆ ನೀಡಿದ್ದಾರೆ. ಜೋಕೋವಿಚ್‌ ಆಗಮನಕ್ಕೆ ಇಡೀ ಸರ್ಬಿಯಾ ಕಾಯುತ್ತಿದೆ’ ಎಂಧು ವುಸಿಚ್‌ ಹೇಳಿದ್ದಾರೆ.

click me!