
ನವದೆಹಲಿ: ಇತ್ತೀಚೆಗಷ್ಟೇ ಪ್ಯಾರಿಸ್ ಒಲಿಂಪಿಕ್ಸ್ ಬಳಿಕ ಹಾಕಿಗೆ ನಿವೃತ್ತಿ ಘೋಷಿಸಿದ್ದ ಭಾರತದ ದಿಗ್ಗಜ ಗೋಲ್ ಕೀಪರ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಪತ್ರ ಬರೆದಿದ್ದು, ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೆ ಭಾರತ ಕಿರಿಯರ ಹಾಕಿ ತಂಡಕ್ಕೆ ಕೋಚ್ ಆಗಿ ನೇಮಕಗೊಂಡಿದ್ದಕ್ಕೆ ಶ್ರೀಜೇಶ್‌ಗೆ ಶುಭ ಹಾರೈಸಿದ್ದಾರೆ.
'ನೀವು ಹಾಕಿಗೆ ನಿವೃತ್ತಿ ಘೋಷಿಸಿದ್ದೀರಿ. ಆದರೆ ಭಾರತೀಯ ಹಾಕಿಗೆ ನಿಮ್ಮ ಸ್ಮರಣೀಯ ಕೊಡುಗೆಗಳಿಗಾಗಿ ನನ್ನ ಹೃತ್ತೂರ್ವಕ ಅಭಿನಂದ ನೆಗಳು ಎಂದು ಆ.16ರಂದು ಬರೆದಿರುವ ಪತ್ರದಲ್ಲಿ ಮೋದಿ ತಿಳಿಸಿದ್ದಾರೆ. ಇದನ್ನು ಬುಧವಾರ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಶ್ರೀಜೇಶ್, 'ಪ್ರಧಾನಿ ಮೋದಿ ಪತ್ರ ನೋಡಿ ಖುಷಿಯಾಯಿತು. ಹಾಕಿ ನನ್ನ ಬದುಕು. ಹಾಕಿಯಲ್ಲಿ ಭಾರತ ಮತ್ತಷ್ಟು ಉನ್ನತಿಗೇರಲು ನಾನು ಕೊಡುಗೆ ನೀಡುತ್ತೇನೆ' ಎಂದು ಬರೆದುಕೊಂಡಿದ್ದಾರೆ.
ಪ್ಯಾರಾಲಿಂಪಿಕ್ಸ್ ಸ್ವರ್ಣ ಗೆದ್ದ ಅಥ್ಲೀಟ್ಸ್‌ಗೆ ₹75 ಲಕ್ಷ ನಗದು ಬೆಳ್ಳಿ ಪದಕ ಗೆದ್ದವರಿಗೆ ₹50 ಲಕ್ಷ, ಕಂಚಿಗೆ ₹30 ಲಕ್ಷ
ನವದೆಹಲಿ: ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತೀಯ ಕ್ರೀಡಾಪಟುಗಳಿಗೆ ಕೇಂದ್ರ ಕ್ರೀಡಾ ಸಚಿವಾಲಯ ಮಂಗಳವಾರ ನಗದು ಬಹುಮಾನ ವಿತರಿಸಿದೆ. ಪ್ಯಾರಿಸ್‌ನಿಂದ ಭಾರತಕ್ಕೆ ಮರಳಿದ ಪ್ಯಾರಾಲಿಂಪಿಕ್ಸ್ ಸಾಧಕರಿಗೆ ಕ್ರೀಡಾ ಸಚಿವ ಮಾನ್ಸುಖ್ ಮಾಂಡವೀಯ ನೇತೃತ್ವದಲ್ಲಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ವೇಳೆ ಮಾತನಾಡಿದ ಮಾಂಡವೀಯ ‘ಚಿನ್ನದ ಪದಕ ಗೆದ್ದವರಿಗೆ ತಲಾ ₹75 ಲಕ್ಷ, ಬೆಳ್ಳಿ ಪದಕ ವಿಜೇತರಿಗೆ ₹50 ಲಕ್ಷ ಹಾಗೂ ಕಂಚಿನ ಪದಕ ಗೆದ್ದವರಿಗೆ ₹30 ಲಕ್ಷ ನೀಡುತ್ತೇವೆ’ ಎಂದರು. ಅಲ್ಲದೆ, ಆರ್ಚರಿ ಮಿಶ್ರ ತಂಡ ವಿಭಾಗದಲ್ಲಿ ಪದಕ ಗೆದ್ದ ಶೀತಲ್ ದೇವಿ ಹಾಗೂ ರಾಕೇಶ್ ಕುಮಾರ್‌ಗೆ ತಲಾ ₹22.5 ಲಕ್ಷ ಸಿಗಲಿದೆ ಎಂದು ಹೇಳಿದರು.
ಫೋಟೋ ಕ್ಲಿಕ್ಕಿಸಿದ ಪಿ.ಟಿ.ಉಷಾ ವಿರುದ್ಧ ವಿನೇಶ್ ಫೋಗಟ್ ಗರಂ! ರಾಜಕೀಯದ ಬಗ್ಗೆ ಹೇಳಿದ್ದೇನು?
ಸಮಾರಂಭದಲ್ಲಿ ಸುಮಿತ್ ಅಂತಿಲ್, ನವ್‌ದೀಪ್, ಪ್ರವೀಣ್ ಕುಮಾರ್, ಧರಂಭಿರ್ ನೈನ್, ಹರ್ವಿಂದರ್ ಸಿಂಗ್ ಸೇರಿ ಕೆಲ ಕ್ರೀಡಾಪಟುಗಳು ಕ್ರೀಡಾ ಸಚಿವರಿಂದ ಚೆಕ್ ಸ್ವೀಕರಿಸಿದರು. ಅವನಿ ಲೇಖರಾ ಸೇರಿದಂತೆ ಇತರ ಕೆಲ ಪದಕ ಸಾಧಕರಿಗೆ ಈಗಾಗಲೇ ಸನ್ಮಾನ ಮಾಡಲಾಗಿತ್ತು. ಹೀಗಾಗಿ ಅವರು ಮಂಗಳವಾರದ ಸಮಾರಂಭದಲ್ಲಿ ಪಾಲ್ಗೊಳ್ಳಲಿಲ್ಲ.
2028ಕ್ಕೆ ಸಿದ್ಧತೆ ಶುರು
2016ರಲ್ಲಿ ಕೇವಲ 4 ಪದಕ ಗೆದ್ದಿದ್ದ ಭಾರತ, 2020ರಲ್ಲಿ 19, ಈ ಬಾರಿ 29 ಪದಕ ಗೆದ್ದು 18ನೇ ಸ್ಥಾನ ಪಡೆದಿದೆ. 2028ರ ಲಾಸ್ ಏಂಜಲೀಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಇನ್ನಷ್ಟು ಪದಕ ಸಾಧನೆ ಮಾಡಲು ನಮ್ಮ ಕ್ರೀಡಾಪಟುಗಳಿಗೆ ಅಗತ್ಯವಿರುವ ಎಲ್ಲಾ ಸಹಕಾರ, ಬೆಂಬಲ ನೀಡುತ್ತೇವೆ. ಅದಕ್ಕಾಗಿ ಈಗಲೇ ಸಿದ್ಧತೆ ಆರಂಭಿಸುತ್ತೇವೆ. ಭಾರತಕ್ಕೆ ಆತಿಥ್ಯ ಸಿಗುವ ಸಾಧ್ಯತೆಯಿರುವ 2036ರ ಒಲಿಂಪಿಕ್ಸ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡುವುದು ನಮ್ಮ ಪ್ರಮುಖ ಗುರಿ ಎಂದು ಕೇಂದ್ರ ಕ್ರೀಡಾ ಸಚಿವ ಮಾನ್ಸುಖ್ ಮಾಂಡವೀಯ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.