ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌: ಭಾರತದ ಕ್ರೀಡಾಳುಗಳಿಗೆ ಶುಭ ಹಾರೈಸಿದ ನರೇಂದ್ರ ಮೋದಿ

By Kannadaprabha News  |  First Published Aug 20, 2024, 9:13 AM IST

ಇದೇ ಆಗಸ್ಟ್ 28ರಿಂದ ಆರಂಭವಾಗಲಿರುವ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ ಅಥ್ಲೀಟ್‌ಗಳ ಜತೆ ಪ್ರಧಾನಿ ನರೇಂದ್ರ ಮೋದಿ ಮುಕ್ತವಾಗಿ ಮಾತಾಡಿದ್ದು, ಶುಭ ಹಾರೈಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ನವದೆಹಲಿ: ಮುಂಬರುವ ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತದ ಕ್ರೀಡಾಪಟುಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ. ಅವರು ಸೋಮವಾರ ಭಾರತದ ಅಥ್ಲೀಟ್‌ಗಳ ಜೊತೆ ವರ್ಚುವಲ್‌ ಸಂವಾದದಲ್ಲಿ ಪಾಲ್ಗೊಂಡರು. 

‘ನಿಮ್ಮ ಪಯಣ ನಿಮಗೆ ಮಾತ್ರವಲ್ಲ, ಇಡೀ ದೇಶಕ್ಕೆ ಮುಖ್ಯವಾದದ್ದು. ನೀವು ಪ್ಯಾರಿಸ್‌ನಲ್ಲಿ ಸಾಧನೆ ಮಾಡಿದರೆ ಭಾರತೀಯರು ಇಲ್ಲಿ ಹೆಮ್ಮೆ ಪಡುತ್ತಾರೆ. ಇಡೀ ದೇಶವೇ ನಿಮ್ಮ ಬೆಂಬಲಕ್ಕಿದೆ. 140 ಕೋಟಿ ಭಾರತೀಯರ ಆಶೀರ್ವಾದ ನಿಮ್ಮ ಮೇಲಿದೆ. ಏಷ್ಯನ್‌ ಪಾರಾಲಿಂಪಿಕ್ಸ್‌, ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಗೆದ್ದ ಹಾಗೆ ಪ್ಯಾರಿಸ್‌ನಲ್ಲೂ ಹೊಸ ದಾಖಲೆ ಸೃಷ್ಟಿಸಿ’ ಎಂದು ಅವರು ಹಾರೈಸಿದ್ದಾರೆ. 

Latest Videos

undefined

ಕೆಲ ಅಥ್ಲೀಟ್‌ಗಳ ಜೊತೆ ಮುಕ್ತವಾಗಿ ಮಾತನಾಡಿದ ಅವರು, ಯಾವುದೇ ಒತ್ತಡಕ್ಕೊಳಗಾಗದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು. ಈ ಬಾರಿ ಪ್ಯಾರಾಲಿಂಪಿಕ್ಸ್‌ ಆ.28ರಿಂದ ಸೆ.8ರ ವರೆಗೆ ನಡೆಯಲಿದೆ.

ವಿಶ್ವ ಅಂಡರ್‌-20 ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ಗೆ ಕರ್ನಾಟಕದ 6 ಮಂದಿ

ಬೆಂಗಳೂರು: ಆ.27ರಿಂದ 31ರ ವರೆಗೂ ನಡೆಯಲಿರುವ ಕೂಟ ಪೆರು ದೇಶದ ಲಿಮಾ ನಗರದಲ್ಲಿ ನಡೆಯಲಿರುವ ವಿಶ್ವ ಅಂಡರ್‌-20 ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ 6 ಮಂದಿ ಪಾಲ್ಗೊಳ್ಳಲಿದ್ದಾರೆ.

ಸೋಮವಾರ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್‌ ಸಂಸ್ಥೆ ಸ್ಪರ್ಧಿಗಳ ಹೆಸರು ಪ್ರಕಟಿಸಿತು. 400 ಮೀ. ಹರ್ಡಲ್ಸ್‌ನಲ್ಲಿ ಶ್ರೇಯಾ ರಾಜೇಶ್‌, ಲಾಂಗ್‌ಜಂಪ್‌ನಲ್ಲಿ ಪಾವನಾ ನಾಗರಾಜ್‌ ಕಣಕ್ಕಿಳಿಯಲಿದ್ದಾರೆ. ಉನ್ನತಿ ಅಯ್ಯಪ್ಪ 100 ಮೀ. ಹರ್ಡಲ್ಸ್‌ ಹಾಗೂ 200 ಮೀ. ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಸ್ಟೇಡಿಯಂ ಮಾತ್ರವಲ್ಲ, ಫುಟ್ಬಾಲ್‌ಗೇ ದುಸ್ಥಿತಿ: 11 ವರ್ಷದಿಂದ ಕರ್ನಾಟಕದ ಒಬ್ಬರೂ ರಾಷ್ಟ್ರೀಯ ತಂಡಕ್ಕಿಲ್ಲ..!

ಮಹಿಳೆಯರ 4*100 ಮೀ. ರಿಲೇ ಓಟದಲ್ಲಿ ನಿಯೋಲ್‌ ಕಾರ್ನೆಲಿಯೊ, ಸುದೀಕ್ಷಾ ವಿ., ಪುರುಷರ 4*400 ಮೀ. ಓಟದ ಸ್ಪರ್ಧೆಯಲ್ಲಿ ರಿಹಾನ್‌ ಸಿ. ಭಾರತವನ್ನು ಪ್ರತಿನಿಧಿಸಲಿದ್ದಾರೆ. ಸಹನಾ ಕುಮಾರಿ ತಂಡದ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ 10ನೇ ಏಷ್ಯನ್‌ ಟೆಕ್ವಾಂಡೋ ಕೂಟ ನಾಳೆಯಿಂದ

ಬೆಂಗಳೂರು: 10ನೇ ಆವೃತ್ತಿಯ ಏಷ್ಯನ್ ಟೆಕ್ವಾಂಡೋ ಚಾಂಪಿಯನ್‌ಶಿಪ್‌ ಆ.21ರಿಂದ 25ರ ವರೆಗೂ ಬೆಂಗಳೂರಿನಲ್ಲಿ ನಡೆಯಲಿದೆ. ನಗರದ ಕೋರಮಂಗಳ ಒಳಾಂಗಣ ಕ್ರೀಡಾಂಗದಲ್ಲಿ ಪಂದ್ಯಗಳು ಆಯೋಜನೆಗೊಳ್ಳಲಿದ್ದು, 28 ದೇಶಗಳ 750ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ.

ಈ ಬಗ್ಗೆ ಸೋಮವಾರ ಕೂಟದ ಆಯೋಜಕರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಭಾರತದಲ್ಲಿ 2ನೇ ಬಾರಿ ಏಷ್ಯನ್‌ ಕೂಟ ನಡೆಯಲಿದೆ. ಇದೇ ಮೊದಲ ಬಾರಿ ಬೆಂಗಳೂರು ಆತಿಥ್ಯ ವಹಿಸಲಿದೆ. ಭಾರತದ 220 ಮಂದಿ ಸ್ಪರ್ಧಿಸಲಿದ್ದಾರೆ. ಒಟ್ಟು 9 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.

ಬಾರ್ಡರ್-ಗವಾಸ್ಕರ್ ಸರಣಿ ಗೆಲ್ಲಲು ಈಗಿನಿಂದಲೇ ಆಸಿಸ್ ರಣತಂತ್ರ..! 3 ತಿಂಗಳು ಮೊದಲೇ ಮೈಂಡ್‌ಗೇಮ್ ಶುರು..!

ಬುಧವಾರ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌, ರಾಜ್ಯ ಸರ್ಕಾರದ ಸಚಿವರಾದ ಕೃಷ್ಣ ಬೈರೇಗೌಡ, ರಾಮಲಿಂಗಾರೆಡ್ಡಿ, ಭೈರತಿ ಸುರೇಶ್‌, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಫಿಬಾ ಏಷ್ಯಾ ಅಧ್ಯಕ್ಷ ಡಾ.ಕೆ. ಗೋವಿಂದರಾಜು ಸೇರಿ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.
 

click me!