Paris Olympics 2024 ಬ್ಯಾಡ್ಮಿಂಟನ್‌: ಡಬಲ್ಸ್‌ನಲ್ಲಿ ಭರ್ಜರಿಯಾಗಿ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ ಸಾತ್ವಿಕ್‌-ಚಿರಾಗ್‌ ಜೋಡಿ

By Kannadaprabha News  |  First Published Jul 31, 2024, 12:02 PM IST

ಭಾರತದ ನಂಬಿಗಸ್ಥ ಡಬಲ್ಸ್ ಬ್ಯಾಡ್ಮಿಂಟನ್ ಜೋಡಿ ಎನಿಸಿಕೊಂಡಿರುವ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ- ಚಿರಾಗ್ ಶೆಟ್ಟಿ ಭರ್ಜರಿಯಾಗಿಯೇ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ಪ್ಯಾರಿಸ್: ಭಾರತದ ತಾರಾ ಪುರುಷರ ಡಬಲ್ಸ್‌ ಜೋಡಿ ಸಾತ್ವಿಕ್‌ ಸಾಯಿರಾಜ್‌ ಹಾಗೂ ಚಿರಾಗ್‌ ಶೆಟ್ಟಿ 2 ಗೆಲುವಿನೊಂದಿಗೆ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಮಂಗಳವಾರ ನಡೆದ ಗುಂಪು ಹಂತದ ಕೊನೆ ಪಂದ್ಯದಲ್ಲಿ 3ನೇ ಶ್ರೇಯಾಂಕಿತ ಭಾರತೀಯ ಜೋಡಿಗೆ, ಇಂಡೋನೇಷ್ಯಾದ ಮುಹಮ್ಮದ್‌ ರಿಯಾನ್‌-ಫಜರ್‌ ಅಲ್ಫಿಯಾನ್‌ ವಿರುದ್ಧ 21-13, 21-13 ಗೇಮ್‌ಗಳಲ್ಲಿ ಗೆಲುವು ಲಭಿಸಿತು. 

ಗುಂಪಿನಲ್ಲಿ ಒಟ್ಟು 4 ಜೋಡಿಗಳಿದ್ದವು. ಆದರೆ ಗಾಯದ ಕಾರಣಕ್ಕೆ ಸೋಮವಾರ ಜರ್ಮನಿಯ ಜೋಡಿ ಕ್ರೀಡಾಕೂಟದಿಂದ ಹೊರಬಿದ್ದಿತ್ತು. ಹೀಗಾಗಿ 3 ಜೋಡಿಗಳು ಮಾತ್ರ ಇದ್ದವು. ಭಾರತ ವಿರುದ್ಧ ಸೋಲಿನ ಹೊರತಾಗಿಯೂ ಇಂಡೋನೇಷ್ಯಾ ಕೂಡಾ ಕ್ವಾರ್ಟರ್‌ಗೇರಿದ್ದು, ಫ್ರಾನ್ಸ್‌ ಜೋಡಿ ಹೊರಬಿದ್ದಿದೆ. ಬುಧವಾರ ಕ್ವಾರ್ಟರ್‌ ಫೈನಲ್‌ ಡ್ರಾ ನಡೆಯಲಿದೆ.

Latest Videos

undefined

IPL 2025 ಹರಾಜಿಗೂ ಮುನ್ನ 4 ಅಲ್ಲ ಈ ಮೂವರನ್ನು ರೀಟೈನ್ ಮಾಡಲು ತೀರ್ಮಾನಿಸಿದ RCB.! ಈತನಿಗೆ RTM ಬಳಸಲು ನಿರ್ಧಾರ?

ಟೇಬಲ್ ಟೆನಿಸ್: ಮನಿಕಾ ಪ್ರಿಕ್ವಾರ್ಟರ್ ಫೈನಲ್‌ಗೆ

ಭಾರತದ ತಾರಾ ಟೇಬಲ್ ಟೆನಿಸ್ ಪಟು ಮನಿಕಾ ಬಾತ್ರಾ ಒಲಿಂಪಿಕ್ಸ್ ಮಹಿಳಾ ಸಿಂಗಲ್ಸ್‌ನಲ್ಲಿ ಪ್ರಿ ಕ್ವಾರ್ಟ‌್ರಫೈನಲ್‌ ಪ್ರವೇಶಿಸಿದ್ದಾರೆ. ಇದರೊಂದಿಗೆ ಒಲಿಂಪಿಕ್ ಇತಿಹಾಸದಲ್ಲೇ ಟೇಬಲ್ ಟೆನಿಸ್ ನಲ್ಲಿ ಅಂತಿಮ 16ರ ಘಟ್ಟ ಪ್ರವೇಶಿಸಿದ ಭಾರತದ ಮೊದಲ ಟಿಟಿ ಪಟು ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

29 ವರ್ಷದ ಮನಿಕಾ ಸೋಮವಾರ ರಾತ್ರಿ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಭಾರತೀಯ ಮೂಲದ, ಫ್ರಾನ್ಸ್‌ನ ಪ್ರೀತಿಕಾ ಪಾವಡೆ ವಿರುದ್ಧ 4-0 ಅಂತರದಲ್ಲಿ ಸುಲಭ ಗೆಲುವು ದಾಖಲಿಸಿದರು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ 2ನೇ ಸುತ್ತಿನಲ್ಲಿ ಮುಗ್ಗರಿಸಿದ್ದ ಮನಿಕಾ ಈ ಬಾರಿ ಪ್ರಿ ಕ್ವಾರ್ಟ‌್ರಗೇರಲು ಸಫಲರಾದರು.

ಕೆಟ್ಟ ದಿನ , ಕೆಟ್ಟ ಸೋಲು: ಅಷ್ಟಕ್ಕೆ ಆ ಹೆಣ್ಣುಮಗಳ ಮೇಲೇಕೆ ಇಷ್ಟೊಂದು ನಿಂದನೆ?

ಆರ್ಚರಿ: ಪಿ ಕ್ವಾಟರ್‌ಗೆ ಪ್ರವೇಶಿಸಿದ ಭಜನ್ ಕೌರ್

ಆರ್ಚರಿಯಲ್ಲಿ ಮೊದಲ 3 ದಿನ ಬರೀ ಸೋಲು ಕಂಡಿದ್ದ ಭಾರತೀಯರಿಗೆ ಮಂಗಳವಾರ ಕೊನೆಗೂ ಗೆಲುವು ಒಲಿಯಿತು. ಮಹಿಳೆಯರ ರೀಕರ್ವ್ ವೈಯ ಕ್ತಿಕ ವಿಭಾಗದದಲ್ಲಿ ಭಜನ್ ಕೌರ್ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. 

ಸುತ್ತಿನಲ್ಲಿ 18 ವರ್ಷದ ಭಜನ್ ಅರ್ಹತಾ ಇಂಡೋ ನೇಷ್ಯಾದ ಕಮಲ್ ಸೈಫಾ ವಿರುದ್ದ 7-3 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿ ದರು. ಆ ಬಳಿಕ ನಡೆದ 2ನೇ ಸುತ್ತಿನಲ್ಲಿ ಪೋಲೆಂಡ್‌ನ ಮೈಜೊರ್ ರನ್ನು 6-0ರಲ್ಲಿ ಮಣಿಸಿ ಪ್ರಿ ಕ್ವಾರ್ಟರ್‌ಗೆ ಲಗ್ಗೆ ಇಟ್ಟರು. ಅಂತಿಮ 16ರ ಪಂದ್ಯ ಆ.3ರಂದು ನಡೆಯಲಿದೆ.

ಪ್ಯಾರಿಸ್ ಒಲಿಂಪಿಕ್ಸ್‌ ಸೋಲಿನ ಬೆನ್ನಲ್ಲೇ ಭಾರತೀಯ ಟೆನಿಸ್‌ಗೆ ರೋಹನ್ ಬೋಪಣ್ಣ ವಿದಾಯ..!

ಟ್ರ್ಯಾಪ್ ಶೂಟಿಂಗ್: ಪೃಥ್ವಿಜಿತ್‌ಗೆ 21 ನೇ ಸ್ಥಾನ

ಪ್ಯಾರಿಸ್: ಪುರುಷರ ಟ್ರ್ಯಾಪ್ ಶೂಟಿಂಗ್ ಅರ್ಹತಾ ಸುತ್ತಿ ನಲ್ಲಿ ಭಾರತದ ಪೃಥ್ವಿಜಿತ್ 21ನೇ ಸ್ಥಾನಕ್ಕೆ ತೃಪ್ತಿಪಟ್ಟು ಕೊಂಡರು. ಇದರೊಂದಿಗೆ ಅವರು ಫೈನಲ್ ಪ್ರವೇಶಿಸುವ ಅವಕಾಶ ಕಳೆದುಕೊಂಡಿದ್ದಾರೆ. ಒಟ್ಟು 30 ಸ್ಪರ್ಧಿಗಳಿದ್ದ ವಿಭಾಗದಲ್ಲಿ ಪೃಥ್ವಿಜಿತ್ 118 ಅಂಕ ಗಳಿಸಿದರು. ಅಗ್ರ -6 ಮಂದಿ ಫೈನಲ್ ಪ್ರವೇಶಿಸಿದರು. ಇನ್ನು, ಮಹಿಳೆ ಯರ ಟ್ರ್ಯಾಪ್ ವಿಭಾಗದ ಅರ್ಹತಾ ಸುತ್ತಿನ ಮೊದಲ ಹಂತದಲ್ಲಿ ಮಂಗಳ ವಾರ ರಾಜೇಶ್ವರಿ 21ನೇ, ಶ್ರೇಯಸಿ 22ನೇ ಸ್ಥಾನ ಪಡೆದಿದ್ದಾರೆ. ಬುಧವಾರ 2ನೇ ಸುತ್ತು ನಡೆಯಲಿದೆ.

ಪ್ಯಾರಿಸ್‌ನಲ್ಲಿ ಉಷ್ಣ ಗಾಳಿ: ಕ್ರೀಡಾಪಟುಗಳಿಗೆ ಸಂಕಷ್ಟ

ಪ್ಯಾರಿಸ್: ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದ ವೇಳೆ ಮಳೆಯ ಸಿಂಚನ ಕಂಡುಬಂದಿದ್ದ ಪ್ಯಾರಿಸ್‌ನಲ್ಲಿ ಈಗ ಉಷ್ಣಗಾಳಿ ಬೀಸುತ್ತಿದೆ. ನಗರದ ತಾಪಮಾನ 35 ಡಿಗ್ರಿ ಗಿಂತ ಹೆಚ್ಚಾಗಿದ್ದು, ಕ್ರೀಡಾಪಟುಗಳಿಗೆ ಸವಾಲಾಗಿ ಪರಿಣಮಿಸಿದೆ. ಇನ್ನು, ಫುಟ್ಬಾಲ್, ಸೇಲಿಂಗ್ ಸೇರಿದಂತೆ ಕೆಲ ಕ್ರೀಡೆಗಳಿಗೆ ಆತಿಥ್ಯ ವಹಿಸಲಿರುವ, ಪ್ಯಾರಿಸ್‌ನಿಂದ 750+ ಕಿ.ಮೀ. ದೂರದ ಮಾರ್ಸೆಲ್ ನಗರದ ಭಾಗಗಳಲ್ಲಿ ತಾಪ ಮಾನ ಮತ್ತಷ್ಟು ಬಿಸಿಯಾಗಿದೆ. ಇಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಇದ್ದು, ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
 

click me!