ಟೆನಿಸ್ ದಂತಕಥೆ ರೋಹನ್ ಬೋಪಣ್ಣ ಭಾರತೀಯ ಟೆನಿಸ್‌ಗೆ ವಿದಾಯ ಘೋಷಿಸಿದ್ದಾರೆ. ಆದರೆ ಎಟಿಪಿ ಟೂರ್ನಿಗಳಲ್ಲಿ ಮುಂದುವರೆಯುವುದಾಗಿ ಘೋಷಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಪ್ಯಾರಿಸ್: ಒಲಿಂಪಿಕ್ಸ್‌ನ ಪುರುಷರ ಡಬಲ್ಸ್‌ನ ಮೊದಲ ಸುತ್ತಿನಲ್ಲೇ ಸೋತ ಬಳಿಕ ಹಿರಿಯ ಟೆನಿಸಿಗ , ಕರ್ನಾಟಕದ ರೋಹನ್ ಬೋಪಣ್ಣ ಭಾರತೀಯ ಟೆನಿಸ್‌ಗೆ ವಿದಾಯ ಘೋಷಿಸಿದ್ದಾರೆ. ಇದರೊಂದಿಗೆ 22 ವರ್ಷಗಳ ಸುದೀರ್ಘ ಪಯಣಕ್ಕೆ ತೆರೆ ಬಿದ್ದಂತೆ ಆಗಿದೆ.

ರೋಹನ್ ಬೋಪಣ್ಣ ಎಟಿಪಿ ಟೂರ್ನಿಗಳಲ್ಲಿ ಮುಂದುವರೆಯುವುದಾಗಿ ಹೇಳಿದ್ದಾರೆ. ಅಂದರೆ ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್‌ ಗೇಮ್ಸ್‌, ಒಲಿಂಪಿಕ್ಸ್‌, ಡೇವಿಸ್ ಕಪ್ ಟೂರ್ನಿಗಳಲ್ಲಿ ರೋಹನ್ ಬೋಪಣ್ಣ ಆಡುವುದಿಲ್ಲ. ಆದರೆ ಗ್ರ್ಯಾನ್‌ಸ್ಲಾಂ ಸೇರಿ ಇನ್ನಿತರ ಎಟಿಪಿ ಟೂರ್ನಿಗಳಲ್ಲಿ ಇನ್ನಷ್ಟು ದಿನ ಆಡುವುದಾಗಿ ಖಚಿತಪಡಿಸಿದ್ದಾರೆ.

Scroll to load tweet…

ತಮ್ಮ ನಿರ್ಧಾರದ ಬಗ್ಗೆ ಮಾತನಾಡಿರುವ 44 ವರ್ಷದ ರೋಹನ್ ಬೋಪಣ್ಣ. "ಖಂಡಿತವಾಗಿಯೂ ಇದು ಭಾರತ ಪರ ನನ್ನ ಕೊನೆಯ ಪಂದ್ಯ. ನಾನೀಗ ಯಾವ ಹಂತದಲ್ಲಿದ್ದೇನೆ ಎಂಬುದು ಗೊತ್ತು. ಇಷ್ಟು ಕಾಲ ಆಡಿದ್ದೇ ಬೋನಸ್. ಭಾರತವನ್ನು ಎರಡು ದಶಕಗಳ ಕಾಲ ಪ್ರತಿನಿಧಿಸುತ್ತೇನೆ ಎಂದು ನಾನು ಭಾವಿಸಿರಲಿಲ್ಲ ಎಂದು ಹೇಳಿದ್ದಾರೆ.

Paris Olympics 2024: ಬ್ಯಾಡ್ಮಿಂಟನ್ ಕ್ವಾರ್ಟರ್‌ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಚಿರಾಗ್-ಸಾತ್ವಿಕ್ ಜೋಡಿ..!

ಬೋಪಣ್ಣ-ಶ್ರೀರಾಂಗೆ ಸೋಲಿನ ಶಾಕ್‌!

ಪ್ಯಾರಿಸ್‌ ಒಲಿಂಪಿಕ್ಸ್‌ ಟೆನಿಸ್‌ನಲ್ಲಿ ಭಾರತೀಯರ ಅಭಿಯಾನ ಮೊದಲ ಸುತ್ತಿನಲ್ಲೇ ಅಂತ್ಯಗೊಂಡಿದೆ. ಭಾನುವಾರ ರಾತ್ರಿ ಪುರುಷರ ಡಬಲ್ಸ್‌ನಲ್ಲಿ ರೋಹನ್‌ ಬೋಪಣ್ಣ ಹಾಗೂ ಶ್ರೀರಾಮ್‌ ಬಾಲಾಜಿ ಜೋಡಿಗೆ ಫ್ರಾನ್ಸ್‌ನ ಎಡ್ವರ್ಡ್‌ ರೋಜರ್‌ ವ್ಯಾಸೆಲಿನ್‌ ಹಾಗೂ ಗಾಯೆಲ್ ಮೊನ್ಫಿಲ್ಸ್‌ ವಿರುದ್ಧ 5-7, 2-6 ನೇರ ಸೆಟ್‌ಗಳಲ್ಲಿ ಸೋಲು ಎದುರಾಯಿತು. ಇದಕ್ಕೂ ಮುನ್ನ ಪುರುಷರ ಸಿಂಗಲ್ಸ್‌ನಲ್ಲಿ ಸುಮಿತ್‌ ನಗಾಲ್‌ ಕೂಡಾ ಮೊದಲ ಸುತ್ತಿನಲ್ಲೇ ಸೋಲನುಭವಿಸಿದ್ದರು. ಇದರೊಂದಿಗೆ 28 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಭಾರತದ ಟೆನಿಸಿಗರ ಕನಸು ಭಗ್ನಗೊಂಡಿತು. 1996ರಲ್ಲಿ ಲಿಯಾಂಡರ್‌ ಪೇಸ್‌ ಪುರುಷರ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ಆದು ಭಾರತಕ್ಕೆ ಒಲಿಂಪಿಕ್ಸ್‌ ಟೆನಿಸ್‌ನಲ್ಲಿ ಸಿಕ್ಕ ಏಕೈಕ ಪದಕ.

ಒಲಿಂಪಿಕ್ಸ್ ಕಂಚು ಗೆಲ್ಲಲು ಮನು ಭಾಕರ್ ಮೇಲೆ ಕೇಂದ್ರ ಸರ್ಕಾರ ಖರ್ಚು ಮಾಡಿದ್ದು ಬರೋಬ್ಬರಿ ₹2 ಕೋಟಿ..!

ಜೋಕೋವಿಚ್‌ ವಿರುದ್ಧ ಸೋತ ರಾಫೆಲ್‌ ನಡಾಲ್‌

ಪ್ಯಾರಿಸ್‌: ಒಲಿಂಪಿಕ್ಸ್‌ ಟೆನಿಸ್‌ನ ಪುರುಷರ ಸಿಂಗಲ್ಸ್‌ 2ನೇ ಸುತ್ತಿನ ಪಂದ್ಯದಲ್ಲಿ ಸ್ಪೇನ್‌ನ ದಿಗ್ಗಜ ಆಟಗಾರ ರಾಫೆಲ್‌ ನಡಾಲ್‌ ವಿರುದ್ಧ ಸರ್ಬಿಯಾದ ನೋವಾಕ್‌ ಜೋಕೋವಿಚ್‌ ಸುಲಭ ಗೆಲುವು ಸಾಧಿಸಿದ್ದಾರೆ. ದೀರ್ಘ ಸಮಯದಿಂದ ಗಾಯದಿಂದ ಬಳಲುತ್ತಿದ್ದ 22 ಗ್ರ್ಯಾನ್‌ಸ್ಲಾಂಗಳ ಒಡೆಯ ನಡಾಲ್‌, ಜೋಕೋ ವಿರುದ್ಧ ಹೆಚ್ಚಿನ ಹೋರಾಟ ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ಅವರು 1-6, 6-4 ನೇರ ಸೆಟ್‌ಗಳಲ್ಲಿ ಪರಾಭವಗೊಂಡರು. ಇನ್ನು, ಡಬಲ್ಸ್‌ನಲ್ಲಿ ಯುವ ತಾರೆ ಕಾರ್ಲೊಸ್‌ ಆಲ್ಕರಜ್‌ ಜೊತೆಗೂಡಿ ಆಡುತ್ತಿರುವ ನಡಾಲ್‌ 2ನೇ ಸುತ್ತು ಪ್ರವೇಶಿಸಿದ್ದಾರೆ.