ಒಲಿಂಪಿಕ್ಸ್‌ ಮೊದಲ ದಿನವೇ ಶೂಟಿಂಗ್‌ನಲ್ಲಿ ಹ್ಯಾಪಿ ನ್ಯೂಸ್‌, 10 ಮೀ. ಏರ್‌ ಪಿಸ್ತೂಲ್‌ನಲ್ಲಿ ಫೈನಲ್‌ಗೆ ಮನು ಭಾಕರ್‌!

By Naveen Kodase  |  First Published Jul 27, 2024, 5:22 PM IST

ಪ್ಯಾರಿಸ್ ಒಲಿಂಪಿಕ್ಸ್‌ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮನು ಭಾಕರ್ ಫೈನಲ್ ಪ್ರವೇಶಿಸುವ ಮೂಲಕ ಪದಕದ ಆಸೆ ಮೂಡಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ


ಪ್ಯಾರಿಸ್: ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್‌ನ ಮೊದಲ ದಿನದಲ್ಲೇ ಭಾರತದ ತಾರಾ ಶೂಟರ್ ಮನು ಭಾಕರ್ ಮಹಿಳೆಯರ 10 ಮೀಟರ್ ಏರ್‌ ಪಿಸ್ತೂಲ್‌ನಲ್ಲಿ ಫೈನಲ್‌ ಫೈನಲ್‌ ಪ್ರವೇಶಿಸುವ ಮೂಲಕ ಪದಕದ ಆಸೆ ಮೂಡಿಸಿದ್ದಾರೆ. 6 ಸುತ್ತುಗಳ ಸ್ಪರ್ಧೆಯಲ್ಲಿ ಮನು ಭಾಕರ್ 580 ಅಂಕಗಳೊಂದಿಗೆ ಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. ಇನ್ನು ಮಹಿಳೆಯರ 10 ಮೀಟರ್ ಫೈನಲ್ ಪಂದ್ಯವು ನಾಳೆ ಅಂದರೆ ಜುಲೈ 28ರ ಮಧ್ಯಾಹ್ನ 3.30ಕ್ಕೆ ನಡೆಯಲಿದೆ.

ಹೌದು, 60 ಪ್ರಯತ್ನಗಳ ಪೈಕಿ ಮನು ಭಾಕರ್ 27 ಬಾರಿ 10ರ ಸರ್ಕರ್‌ಗೆ ಗುರಿ ಇಡುವ ಮೂಲಕ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾದರು. ಕಳೆದ ಬಾರಿ ಅಂದರೆ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಮನು ಭಾಕರ್ ಮೊದಲ ಸೀರಿಸ್‌ನಲ್ಲಿ 100ಕ್ಕೆ 98 ಅಂಕ ಕಲೆಹಾಕಿದ್ದರು. ಆದರೆ ಎರಡನೇ ಸುತ್ತಿನ ಸಂದರ್ಭದಲ್ಲಿ ಅವರ ಪಿಸ್ತೂಲ್ ಕೈಕೊಟ್ಟಿತ್ತು. ಪಿಸ್ತೂಲ್ ಸರಿ ಪಡಿಸಲು ಸಮಯಾವಕಾಶ ನೀಡಲಾಗಿತ್ತು. ಈ ವೇಳೆ ಹೆಚ್ಚಿನ ಸಮಯ ವ್ಯಯ ಮಾಡಿದ್ದರಿಂದಾಗಿ ಕೊನೆಗೆ 12ನೇ ಸ್ಥಾನಕ್ಕೆ ಕುಸಿಯುವ ಮೂಲಕ ಪ್ರಶಸ್ತಿ ರೇಸ್‌ನಿಂದ ಹೊರಬಿದ್ದಿದ್ದರು. ಇದರಿಂದ ಬೇಸತ್ತು ನಿದ್ದೆಯಿಲ್ಲದೇ ರಾತ್ರಿ ಕಳೆದಿದ್ದ ಮನು ಭಾಕರ್, 25 ಪಿಸ್ತೂಲ್ ಹಾಗೂ ಮಿಶ್ರ ತಂಡದ ಸ್ಪರ್ಧೆಯಲ್ಲೂ ನೀರಸ ಪ್ರದರ್ಶನ ತೋರುವಂತಾಗಿತ್ತು. ಇದರ ಬೆನ್ನಲ್ಲೇ ಮನು ಭಾಕರ್ ತೀವ್ರ ಟೀಕೆಗೆ ಗುರಿಯಾಗಿದ್ದರು.

Latest Videos

undefined

ಪ್ಯಾರಿಸ್‌ ಒಲಿಂಪಿಕ್ಸ್‌: ಭಾರತಕ್ಕೆ ಇಂದೇ ಸಿಗುತ್ತಾ ಮೊದಲ ಪದಕ?

Meet the first shooter from India to Qualify for the Finals

Manu Bhaker 🇮🇳❤️ pic.twitter.com/KBSfJHBIWk

— The Khel India (@TheKhelIndia)

ಮೂರನೇ ಸ್ಥಾನಿಯಾಗಿ ಫೈನಲ್ ಪ್ರವೇಶ: ಕಳೆದ ಟೋಕಿಯೋ ಒಲಿಂಪಿಕ್ಸ್ ವೈಫಲ್ಯ ಮರೆತು ಪ್ಯಾರಿಸ್ ಕೂಟದಲ್ಲಿ ಪಾಲ್ಗೊಂಡಿರುವ ಮನು ಭಾಕರ್ ಇದೀಗ ಮೂರನೇ ಸ್ಥಾನಿಯಾಗಿ ಫೈನಲ್ ಪ್ರವೇಶಿಸಿದ್ದಾರೆ. ಮೊದಲೆರಡು ಸ್ಥಾನದಲ್ಲಿರುವ ಶೂಟರ್‌ಗಳು 582 ಅಂಕ ಕಲೆಹಾಕಿದರೆ, ಮನು ಭಾಕರ್ 580 ಅಂಕಗಳನ್ನು ಗಳಿಸುವ ಮೂಲಕ ಪದಕದ ಆಸೆ ಮೂಡಿಸಿದ್ದಾರೆ.

ಕ್ರೀಡಾ ಗ್ರಾಮದಲ್ಲಿ ಭಾರತದ ಅಥ್ಲೀಟ್ಸ್‌ಗೆ ಆಹಾರ ಕೊರತೆ!

𝗙𝗿𝗼𝗺 𝗧𝗼𝗸𝘆𝗼 𝗵𝗲𝗮𝗿𝘁𝗯𝗿𝗲𝗮𝗸 𝘁𝗼 𝗣𝗮𝗿𝗶𝘀 𝗽𝗿𝗼𝗺𝗶𝘀𝗲: 𝗜𝘁'𝘀 𝘁𝗶𝗺𝗲 𝗳𝗼𝗿 𝗠𝗮𝗻𝘂 𝗕𝗵𝗮𝗸𝗲𝗿'𝘀 𝗿𝗲𝗱𝗲𝗺𝗽𝘁𝗶𝗼𝗻! 🇮🇳👇

🇯🇵 𝗧𝗼𝗸𝘆𝗼 𝟮𝟬𝟮𝟬, 𝗪𝗼𝗺𝗲𝗻'𝘀 𝟭𝟬𝗺 𝗔𝗶𝗿 𝗣𝗶𝘀𝘁𝗼𝗹 𝗤𝘂𝗮𝗹𝗶𝗳𝗶𝗰𝗮𝘁𝗶𝗼𝗻

19-year-old Manu Bhaker scores 98/100… pic.twitter.com/nipwBpbYgc

— India at Paris 2024 Olympics (@sportwalkmedia)

ಇದೀಗ ಫೈನಲ್‌ನಲ್ಲಿ 8 ಶೂಟರ್‌ಗಳು ಮೂರು ಪದಕಕ್ಕಾಗಿ ಪೈಪೋಟಿ ನಡೆಸಲಿದ್ದು, ಮನು ಭಾಕರ್ ಪದಕದ ಭರವಸೆ ಮೂಡಿಸಿದ್ದಾರೆ.

click me!