ಅಮನ್ ಶೆರಾವತ್ ಬದುಕಿನ ಕಥೆಯೇ ರೋಚಕ..! ಅನಾಥ ಹುಡುಗನಿಗೆ ಆಸರೆಯಾಗಿದ್ದು ಅಜ್ಜನ ಗರಡಿ..!

By Kannadaprabha News  |  First Published Aug 10, 2024, 10:00 AM IST

ಪುರುಷರ 57 ಕೆ.ಜಿ. ವಿಭಾಗದ ಕುಸ್ತಿಯಲ್ಲಿ ಭಾರತದ ಅಮನ್‌ ಶೆರಾವತ್‌ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದರೊಂದಿಗೆ ಭಾರತ ಈ ಬಾರಿ ಕುಸ್ತಿಯಲ್ಲಿ ಮೊದಲ ಪದಕಕ್ಕೆ ತಮ್ಮದಾಗಿಸಿಕೊಂಡಿದೆ. ಅಮನ್ ಬೆಳೆದು ಬಂದ ಕಥೆಯೇ ಒಂದು ರೋಚಕ ಸ್ಟೋರಿ


ಪ್ಯಾರಿಸ್: ಈ ಬಾರಿ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಕುಸ್ತಿಯಲ್ಲಿ ಮೊದಲ ಪದಕ ತಂದುಕೊಟ್ಟಿರುವ ಅಮನ್‌ ಶೆರಾವತ್‌ರ ಬದುಕೇ ರೋಚಕ. ಕೇವಲ 11 ವರ್ಷವಾಗಿದ್ದಾಗಲೇ ತಮ್ಮ ತಂದೆ ಹಾಗೂ ತಾಯಿಯನ್ನು ಅನಾರೋಗ್ಯ ಕಾರಣಕ್ಕೆ ಕಳೆದುಕೊಂಡಿದ್ದ ಅಮನ್‌, ಅದರಿಂದ ಸಂಪೂರ್ಣ ಕುಗ್ಗಿಹೋಗಿದ್ದರು. ಆದರೆ ತಮ್ಮ ಅಜ್ಜನ ಗರಡಿಯಲ್ಲಿ ಬೆಳೆದ ಅಮನ್‌, ಶಾಲಾ ಸಮಯದಲ್ಲೇ ಕುಸ್ತಿಯಲ್ಲಿ ತೊಡಗಿಸಿಕೊಂಡರು. 

2021ರಲ್ಲಿ ಮೊದಲ ರಾಷ್ಟ್ರೀಯ ಚಾಂಪಿಯನ್‌ಶಿಪ್‌ ಗೆದ್ದ ಅಮನ್‌ ಬಳಿಕ ಹಿಂದಿರುಗಿ ನೋಡಿದ್ದೇ ಇಲ್ಲ. 2022ರಲ್ಲಿ ಅಂಡರ್‌-23 ಏಷ್ಯನ್‌ ಹಾಗೂ ವಿಶ್ವ ಚಾಂಪಿಯನ್‌ ಎನಿಸಿಕೊಂಡ ಅವರು, ಅದೇ ವರ್ಷ ಏಷ್ಯನ್‌ ಗೇಮ್ಸ್‌ನಲ್ಲಿ ಬೆಳ್ಳಿ, ಆಲ್ಮಾಟಿ ಗ್ರ್ಯಾನ್‌ಪ್ರಿ ಟೂರ್ನಿಯಲ್ಲಿ ಚಿನ್ನ ಸಂಪಾದಿಸಿದರು. ಕಳೆದ ವರ್ಷ ಏಷ್ಯನ್‌ ಚಾಂಪಿಯನ್‌ಶಿಪ್‌ನ 57 ಕೆ.ಜಿ. ವಿಭಾಗದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದರು.

Tap to resize

Latest Videos

undefined

ಕಂಚಿನ ಪದಕದಲ್ಲಿ ಮಿಂಚಿದ ರೆಸ್ಲರ್‌ ಅಮನ್‌

ಪ್ಯಾರಿಸ್‌: ಪ್ಯಾರಿಸ್‌ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತ 6ನೇ ಪದಕ ತನ್ನದಾಗಿಸಿಕೊಂಡಿದೆ. ಪುರುಷರ 57 ಕೆ.ಜಿ. ವಿಭಾಗದ ಕುಸ್ತಿಯಲ್ಲಿ ಭಾರತದ ಅಮನ್‌ ಶೆರಾವತ್‌ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದರೊಂದಿಗೆ ಭಾರತ ಈ ಬಾರಿ ಕುಸ್ತಿಯಲ್ಲಿ ಮೊದಲ ಪದಕಕ್ಕೆ ತಮ್ಮದಾಗಿಸಿಕೊಂಡಿದೆ.

ಶನಿವಾರ ನಡೆದ ಕಂಚಿನ ಪದಕ ಪಂದ್ಯದಲ್ಲಿ ಅಮನ್‌ ಅವರು ಪೊರ್ಟೊ ರಿಕೊದ ಡೇರಿಯನ್‌ ಕ್ರಜ್‌ ಟೊಯಿ ವಿರುದ್ಧ 000 ಅಂಕಗಳಿಂದ ಜಯಭೇರಿ ಬಾರಿಸಿದರು. ಭಾರಿ ರೋಚಕತೆ ಹುಟ್ಟು ಹಾಕಿದ್ದ ಪಂದ್ಯದಲ್ಲಿ ಅಮನ್‌ ಎದುರಾಳಿಯನ್ನು ಮಣಿಸಿ ಪದಕ ತಮ್ಮದಾಗಿಸಿಕೊಂಡರು.

ಬೆಳ್ಳಿ ಪದಕಕ್ಕೆ ಮುಂದುವರೆದ ವಿನೇಶ್ ಫೋಗಟ್ ಹೋರಾಟ; ಮಹತ್ವದ ನಿರ್ಧಾರ ಪ್ರಕಟಿಸಿದ ಕ್ರೀಡಾ ನ್ಯಾಯ ಮಂಡಳಿ

ಇದಕ್ಕೂ ಮುನ್ನ 2022ರ ಏಷ್ಯನ್‌ ಗೇಮ್ಸ್‌ ಬೆಳ್ಳಿ ಪದಕ ವಿಜೇತ ಅಮನ್‌, ಗುರುವಾರ ಅಂತಿಮ 4ರ ಸುತ್ತಿನ ಪಂದ್ಯದಲ್ಲಿ 2016 ಒಲಿಂಪಿಕ್ಸ್‌ನ ಬೆಳ್ಳಿ ವಿಜೇತ ಜಪಾನ್‌ನ ರೇ ಹಿಗುಚಿ ವಿರುದ್ಧ ಕೇವಲ 2 ನಿಮಿಷ 14 ಸೆಕೆಂಡ್‌ಗಳಲ್ಲಿ 0-10 ಅಂತರದಲ್ಲಿ ಪರಾಭವಗೊಂಡಿದ್ದರು.

ಮೊದಲ ಸುತ್ತಿನಲ್ಲಿ 2022ರ ಯುರೋಪಿಯನ್‌ ಚಾಂಪಿಯನ್‌, ಉತ್ತರ ಮೆಸೆಡೋನಿಯಾದ ಎಗೊರೊವ್‌ ವ್ಲಾಡಿಮಿರ್‌ ವಿರುದ್ಧ 10-0 ಅಂತರದಲ್ಲಿ ಗೆಲುವು ಸಾಧಿಸಿದ್ದ ಅವರು, ಬಳಿಕ ಕ್ವಾರ್ಟರ್‌ ಫೈನಲ್‌ನಲ್ಲಿ 2022ರ ವಿಶ್ವ ಚಾಂಪಿಯನ್‌, ಅಲ್ಬೇನಿಯಾದ ಅಬಕರೊವ್‌ರನ್ನು 12-0 ಅಂಕಗಳಲ್ಲಿ ಮಣಿಸಿ ಸೆಮೀಸ್‌ಗೇರಿದ್ದರು. ಅತ್ತ, ಡೇರಿಯನ್‌ ಕ್ವಾರ್ಟರ್‌ನಲ್ಲಿ ಜಪಾನ್‌ನ ಹಿಗುಚಿ ವಿರುದ್ಧ ಸೋತಿದ್ದರು. ಹಿಗುಚಿ ಫೈನಲ್‌ಗೇರಿದ ಕಾರಣ ಡೇರಿಯನ್‌ಗೆ ಕಂಚಿನ ಪದಕ ಪಂದ್ಯದಲ್ಲಿ ಆಡುವ ಅವಕಾಶ ಲಭಿಸಿತ್ತು.

ಈ ಬಾರಿ ಕುಸ್ತಿಯಲ್ಲಿ ಭಾರತಕ್ಕೆ ಮೊದಲ ಪದಕ

ಭಾರತಕ್ಕೆ ಈ ಬಾರಿ ಒಲಿಂಪಿಕ್ಸ್‌ನ ಕುಸ್ತಿ ಸ್ಪರ್ಧೆಯಲ್ಲಿ ಮೊದಲ ಪದಕ ಲಭಿಸಿದೆ. ಮಹಿಳಾ ವಿಭಾಗದಲ್ಲಿ ಐವರು, ಪುರುಷರ ವಿಭಾಗದಲ್ಲಿ ಅಮನ್‌ ಒಬ್ಬರೇ ಭಾರತವನ್ನು ಪ್ರತಿನಿಧಿಸಿದ್ದರು. ಈ ಪೈಕಿ ವಿನೇಶ್‌ ಫೋಗಟ್‌ ಫೈನಲ್‌ಗೇರಿದರೂ, ಅನರ್ಹಗೊಂಡು ಹೊರಬಿದ್ದರೆ, ಅಂತಿಮ್‌ ಪಂಘಲ್‌, ಅನ್ಶು ಮಲಿಕ್‌ ಮೊದಲ ಸುತ್ತಿನಲ್ಲೇ ಅಭಿಯಾನ ಕೊನೆಗೊಳಿಸಿದ್ದರು. ನಿಶಾ ದಹಿಯಾ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತಿದ್ದಾರೆ.

ಭಾರತದ ನೀರಜ್ ಚೋಪ್ರಾನಿಂದ ಚಿನ್ನದ ಪದಕ ಕಿತ್ತುಕೊಂಡ ನದೀಂ 'ಪಂಜಾಬ್' ಹುಡುಗ..! ಈತ ಬೆಂಕಿಯಲ್ಲಿ ಅರಳಿದ ಹೂ

ಒಲಿಂಪಿಕ್ಸ್‌ನಲ್ಲಿ 8ನೇ ಪದಕ ಗೆದ್ದ ಭಾರತದ ರೆಸ್ಲರ್‌ಗಳು

ಅಮನ್‌ ಗೆದ್ದ ಕಂಚಿನ ಪದಕ ಒಲಿಂಪಿಕ್ಸ್‌ನಲ್ಲಿ ಈ ವರೆಗೂ ಭಾರತಕ್ಕೆ ಲಭಿಸಿದ 8ನೇ ಪದಕ. 1952ರಲ್ಲಿ ಕೆ.ಡಿ.ಜಾಧವ್‌ ಮೊದಲ ಪದಕ(ಕಂಚು) ಗೆದ್ದಿದ್ದರು. ಆ ಬಳಿಕ 2008ರಲ್ಲಿ ಸುಶೀಲ್‌ ಕುಮಾರ್‌ ಕಂಚು, 2012ರಲ್ಲಿ ಸುಶೀಲ್‌ ಬೆಳ್ಳಿ ಮತ್ತು ಯೋಗೇಶ್ವರ್‌ ದತ್‌ ಕಂಚು, 2016ರಲ್ಲಿ ಸಾಕ್ಷಿ ಮಲಿಕ್‌ ಕಂಚು, 2020ರಲ್ಲಿ ರವಿ ಕುಮಾರ್‌ ಬೆಳ್ಳಿ ಹಾಗೂ ಬಜರಂಗ್‌ ಪೂನಿಯಾ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು.
 

click me!