
ನ್ಯೂಯಾರ್ಕ್(ಸೆ.07): ಯಎಸ್ ಓಪನ್ ಟೂರ್ನಿಯ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹಿನ್ನಡೆಯಲ್ಲಿದ್ದ ವಿಶ್ವದ ನಂಬರ್ 1 ಟೆನಿಸ್ ಪಟು ನೋವಾಕ್ ಜೊಕೋವಿಚ್ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಆದರೆ ಈ ಆಕ್ರೋಶದಿಂದ ಲೈನ್ ಅಂಪೈರ್‌ಗೆ ಚೆಂಡು ಬಡಿದಿದೆ. ಇದರ ಪರಿಣಾಮ ವಿಶ್ವದ ನಂ.1 ಟೆನಿಸ್ ಪಟು ಜೊಕೋವಿಚ್ ಯುಸ್ ಓಪನ್ ಟೂರ್ನಿಯಿಂದ ಅನರ್ಹಗೊಂಡಿದ್ದಾರೆ.
ಯುಎಸ್ ಓಪನ್ 2020: ಪ್ಲಿಸ್ಕೋವಾ, ಜೋಕೋವಿಚ್ ಶುಭಾರಂಭ..
ಯುಎಸ್ ಒಪನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹಿನ್ನಡೆಯಲ್ಲಿದ್ದ ನೋವಾಕ್ ಜೊಕೋವಿಚ್ ಎದುರಾಳಿ ಸ್ಪೇನ್‌ನ ಪಾಬ್ಲೋ ಕರೆನೋ ಬುಸ್ಟಾ ವಿರುದ್ಧ ಹಿನ್ನಡೆ ಅನುಭವಿಸಿದ್ದರು. ಮುನ್ನಡೆಗಾಗಿ ಪ್ರಯತ್ನಿಸುತ್ತಿದ್ದ ನೋವಾಕ್ ಮತ್ತೆ ಅಂಕ ಕಳೆದುಕೊಂಡಾಗ ಆಕ್ರೋಶ ಹೊರಹಾಕಿದ್ದಾರೆ.
ಜೊಕೋವಿಚ್ ಟೀಕಿಸಬೇಡಿ, ಇದು ನನ್ನ ತಪ್ಪು ಎಂದ ಸರ್ಬಿಯಾ ಪ್ರಧಾನ ಮಂತ್ರಿ!.
ನೋವಾಕ್ ಕೈಯಲ್ಲಿದ್ದ ಚೆಂಡನ್ನು ಟೆನಿಸ್ ರಾಕೆಟ್‌ನಿಂದ ಹೊಡೆದಿದ್ದಾರೆ. ಇದು ಮಹಿಳಾ ಲೈನ್ ಅಂಪೈರ್‌ಗೆ ಬಡಿದಿದೆ. ಇದರಿಂದ ಮಹಿಳಾ ಸಿಬ್ಬಂದಿ ಅಂಪೈರ್ ಕುಸಿದಿದ್ದಾರೆ. ಜೊಕೊವಿಚ್ ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿಲ್ಲ. ಆಕ್ರೋಶ ಹೊರಹಾಕಿದ ವೇಳೆ ಅಚಾನಕ್ಕಾಗಿ ಚೆಂಡು ಬಡಿದಿದೆ. ಆದರೆ ನಿಯಮದ ಪ್ರಕಾರ ಜೊಕೋವಿಚ್‌ಗೆ ಅನರ್ಹ ಶಿಕ್ಷೆ ನೀಡಲಾಗಿದೆ.
ಕೊರೋನಾ ವೈರಸ್ ಕಾರಣ ರಾಫೆಲ್ ನಡಾಲ್, ರೋಜರ್ ಫೆಡರರ್ ಸೇರಿದಂತೆ ಹಲವು ಸ್ಟಾರ್ ಟೆನಿಸ್ ಪಟುಗಳು ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಜೊಕೊವಿಚ್ ಗೆಲವು ಬಹುತೇಕ ಪಕ್ಕಾ ಆಗಿತ್ತು. ಇದೀಗ ಈ ಬೆಳವಣಿಗೆಯಿಂದ ಜೊಕೋವಿಚ್ ಕನಸು ನುಚ್ಚು ನೂರಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.