
ನವದೆಹಲಿ(ಸೆ.03): ಕೊರೋನಾ ಸೋಂಕಿಗೆ ತುತ್ತಾಗಿದ್ದ ಭಾರತದ ತಾರಾ ಮಹಿಳಾ ಕುಸ್ತಿಪಟು ವಿನೇಶ್ ಪೋಗಾಟ್ ಚೇತರಿಸಿಕೊಂಡಿದ್ದಾರೆ. ವಿನೇಶ್ ಅವರ 2 ಕೊರೋನಾ ಪರೀಕ್ಷೆ ನೆಗೆಟಿವ್ ಬಂದಿದೆ.
ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ವಿನೇಶ್ ಐಸೋಲೇಶನ್‌ನಲ್ಲಿ ಮುಂದುವರಿಯಲಿದ್ದಾರೆ. ಕೊರೋನಾ ಸೋಂಕು ತಗುಲಿದ ಕಾರಣದಿಂದ ವಿನೇಶ್ ಆ.29ರಂದು ನಡೆದಿದ್ದ ವರ್ಚುವಲ್ ರಾಷ್ಟ್ರೀಯ ಪ್ರಶಸ್ತಿ ಸಮಾರಂಭದಲ್ಲಿ ಖೇಲ್ ರತ್ನ ಸ್ವೀಕರಿಸಿರಲಿಲ್ಲ.
ಮಂಗಳವಾರ ನಡೆದ 2ನೇ ಕೊರೋನಾ ಪರೀಕ್ಷೆ ವರದಿ ಕೂಡ ನೆಗೆಟಿವ್ ಬಂದಿರುವುದು ಸಂತಸ ತಂದಿದೆ ಎಂದು ವಿನೇಶ್ ಟ್ವೀಟ್ ಮಾಡಿದ್ದಾರೆ. ವಿನೇಶ್, ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿರುವ ಭಾರತದ ಏಕೈಕ ಮಹಿಳಾ ಕುಸ್ತಿಪಟು ಆಗಿದ್ದಾರೆ.
ಥಾಮಸ್-ಊಬರ್ ಕಪ್ ಟೂರ್ನಿಗೆ ಸಿಂಧು ಇಲ್ಲ
ನವದೆಹಲಿ: ಅಕ್ಟೋಬರ್ 3 ರಿಂದ 11ರವರೆಗೆ ಡೆನ್ಮಾರ್ಕ್ನಲ್ಲಿ ನಡೆಯಲಿರುವ ಥಾಮಸ್-ಊಬರ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ತಾರಾ ಶಟ್ಲರ್ ಪಿ.ವಿ. ಸಿಂಧು ವೈಯಕ್ತಿಕ ಕಾರಣಗಳಿಂದಾಗಿ ಪಾಲ್ಗೊಳ್ಳುತ್ತಿಲ್ಲ.
ಯುಎಸ್ ಓಪನ್: 2ನೇ ಸುತ್ತಿಗೆ ಲಗೆಯಿಟ್ಟ ಭಾರತದ ಸುಮಿತ್
ಅಕ್ಟೋಬರ್ ಮೊದಲ ವಾರದಲ್ಲಿ ಹೈದರಾಬಾದ್‌ನಲ್ಲಿ ಸಿಂಧುಗೆ ವೈಯಕ್ತಿಕ ಕೆಲಸಗಳಿವೆ. ಹೀಗಾಗಿ ಈ ಟೂರ್ನಿಯಿಂದ ಸಿಂಧು ಹಿಂದೆ ಸರಿಯಲಿದ್ದಾರೆ ಎಂದು ಸಿಂಧು ಅವರ ತಂದೆ ಪಿ.ವಿ. ರಮಣ ಹೇಳಿದ್ದಾರೆ. ದೇವರ ಪೂಜಾ ಕಾರ‍್ಯ ಇದಾಗಿದ್ದು, ಕುಟಂಬದ ಎಲ್ಲಾ ಸದಸ್ಯರು ಉಪಸ್ಥಿತರಿರಬೇಕಿದೆ. ಈ ಕಾರಣದಿಂದಾಗಿ ಸಿಂಧು ಈ ಟೂರ್ನಿಯಲ್ಲಿ ಆಡುವುದಿಲ್ಲ ಎಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.