ಬಾಸ್ಕೆಟ್‌ಬಾಲ್ ದಿಗ್ಗಜ ಕೋಬ್ ಬ್ರೆಯಾಂಟ್ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನ

Suvarna News   | Asianet News
Published : Jan 27, 2020, 10:38 AM ISTUpdated : Jan 27, 2020, 05:12 PM IST
ಬಾಸ್ಕೆಟ್‌ಬಾಲ್ ದಿಗ್ಗಜ ಕೋಬ್ ಬ್ರೆಯಾಂಟ್ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನ

ಸಾರಾಂಶ

ಖ್ಯಾತ ಬಾಸ್ಕೆಟ್‌ಬಾಲ್ ಆಟಗಾರ ಕೋಬ್ ಬ್ರೆಯಾಂಟ್ ಹೆಲಿಕ್ಯಾಪ್ಟರ್ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ಬಾಸ್ಕೆಟ್‌ಬಾಲ್ ಕ್ರೀಡೆಯಲ್ಲಿ ತನ್ನದೇ ಅದ ಛಾಪು ಮೂಡಿಸಿದ್ದ ಕೋಬ್ ಬ್ರೆಯಾಂಟ್ ಇನ್ನು ನೆನಪು ಮಾತ್ರ. ಈ ಕುರಿತಾದ ವಿವರ ಇಲ್ಲಿದೆ ನೋಡಿ...

ಕ್ಯಾಲಿಫೋರ್ನಿಯಾ(ಜ.27): NBA ಬಾಸ್ಕೆಟ್ ಬಾಲ್ ದಿಗ್ಗಜ ಕೋಬ್ ಬ್ರೆಯಾಂಟ್(41) ಹೆಲಿಕ್ಯಾಪ್ಟರ್ ಅಪಘಾತದಲ್ಲಿ ಅಸುನೀಗಿದ್ದಾರೆ. ಭಾನುವಾರು ಕ್ಯಾಲಿಫೋರ್ನಿಯಾದ ಕ್ಯಾಲಬಾಸಸ್ ಎಂಬಲ್ಲಿ ಈ ಅವಘಡ ಸಂಭವಿಸಿದೆ.

ಬ್ರೆಯಾಂಟ್ ತಮ್ಮದೇ ಆದ ಖಾಸಗಿ ಹೆಲಿಕ್ಯಾಪ್ಟರ್‌ನ್ನು ಹೊಂದಿದ್ದರು. ಈ ಅಪಘಾತದಲ್ಲಿ ಕೋಬ್ ಬ್ರೆಯಾಂಟ್ 13 ವರ್ಷದ ಮಗಳು ಗಿಯನ್ನ ಹಾಗೂ ಪತ್ನಿ ಸೇರಿದಂತೆ 9 ಮಂದಿ ಸಾವನಪ್ಪಿದ್ದಾರೆ ಎಂದು ವರದಿಯಾಗಿದೆ.

ಅಪಘಾತವಾದ ಸ್ಥಳದಿಂದ  ಕೋಬ್ ಬ್ರೆಯಾಂಟ್ ದೇಹವನ್ನು ಹೊರತೆಗೆಯಲು ಸಾಕಷ್ಟು ಸಮಯವಾಗಲಿದೆ ಎನ್ನಲಾಗುತ್ತಿದೆ. ಹೆಲಿಕ್ಯಾಪ್ಟರ್ ಅಪಘಾತವಾದ ಸ್ಥಳ ಸಾಕಷ್ಟು ದುರ್ಗಮವಾಗಿದ್ದು, ಸಾಧ್ಯವಾದಷ್ಟು ಬೇಗ ಅಪಘಾತ ನಡೆದ ಸ್ಥಳಕ್ಕೆ ತಲುಪುವ ಪ್ರಯತ್ನ ಮಾಡುತ್ತೇವೆ ಎಂದು ಲಾಸ್ ಏಂಜಲೀಸ್ ಕೌಂಟಿಯ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

2015ರಲ್ಲಿ ಬಾಸ್ಕೆಟ್‌ಬಾಲ್‌ಗೆ ವಿದಾಯ ಹೇಳುವಾಗ ಕೋಬ್ ಬ್ರೆಯಾಂಟ್ 'ಡಿಯರ್ ಬಾಸ್ಕೆಟ್‌ಬಾಲ್' ಎನ್ನುವ ಕವಿತೆಯನ್ನು ಬರೆದಿದ್ದರು. ಆ ಬಳಿಕ ಗ್ಲೆನ್ ಕೀನ್ ಹಾಗೂ ಜಾನ್ ವಿಲಿಯಮ್ಸ್ ಜತೆಗೂಡಿ ಆ ಹಾಡನ್ನು ಕಿರುಚಿತ್ರವನ್ನು ನಿರ್ಮಿಸಿದ್ದರು. ಇದು 2018ರಲ್ಲಿ ಬೆಸ್ಟ್ ಆನಿಮೇಟೆಡ್ ಶಾರ್ಟ್ ಫಿಲ್ಮ್ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗಳಿಸಿತ್ತು. 

ಹೀಗಿದೆ ನೋಡಿ ಡಿಯರ್ ಬಾಸ್ಕೆಟ್‌ಬಾಲ್ ಶಾರ್ಟ್ ಫಿಲ್ಮ್

ಕೋಬ್ ಬ್ರೆಯಾಂಟ್ ನಿಧನಕ್ಕೆ ಹಲವು ಕ್ಷೇತ್ರದ ದಿಗ್ಗಜರು ಕಂಬನಿ ಮಿಡಿದಿದ್ದಾರೆ. 

ಕೋಬ್ ಬ್ರೆಯಾಂಟ್ ಬಗ್ಗೆ ಒಂದಷ್ಟು ಮಾಹಿತಿ

*  ಆಗಸ್ಟ್ 23, 1978ರಲ್ಲಿ ಜನಿಸಿದ್ದ ಕೋಬ್ ಬ್ರೆಯಾಂಟ್ ಅಮೆರಿಕದ ವೃತ್ತಿಪರ ಬಾಕ್ಸೆಟ್ ಬಾಲ್ ಆಟಗಾರನಾಗಿ ಆಗಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದರು

* ನ್ಯಾಷನಲ್ ಬಾಸ್ಕೆಟ್ ಬಾಲ್ ಅಸೋಸಿಯೇಶನ್(NBA) ಟೂರ್ನಿಯಲ್ಲಿ 20 ವರ್ಷಗಳ ಕಾಲ  ಲಾಸ್ ಏಂಜಲೀಸ್ ತಂಡವನ್ನು ಪ್ರತಿನಿಧಿಸಿದ್ದರು.

* ಹೈಸ್ಕೂಲ್ ಓದುವಾಗಲೇ NBA ಟೂರ್ನಿಗೆ ನೇರ ಪ್ರವೇಶ ಪಡೆದಿದ್ದ ಕೋಬ್ ಬ್ರೆಯಾಂಟ್, 5 ಬಾರಿ NBA ಚಾಂಪಿಯನ್ಸ್ ಪಟ್ಟ ಅಲಂಕರಿಸಿದ್ದರು.

* 20 NBA ಆವೃತ್ತಿಗಳನ್ನಾಡಿದ ಕೋಬ್ ಬ್ರೆಯಾಂಟ್ ಸಾರ್ವಕಾಲಿಕ ಶ್ರೇಷ್ಠ ಬಾಸ್ಕೆಟ್‌ಬಾಲ್ ಆಟಗಾರ ಎನಿಸಿಕೊಂಡಿದ್ದರು.

ಜನವರಿ 27ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್; ಟೂರ್ನಿಯ ವೇಳಾಪಟ್ಟಿ ಪ್ರಕಟ, ಟಿಕೆಟ್ ಬುಕಿಂಗ್ ಆರಂಭ
ಸತತ ಎರಡನೇ ಬಾರಿಗೆ ಭಾರತ ಮಹಿಳೆಯರಿಗೆ ಒಲಿದ ಕಬಡ್ಡಿ ವಿಶ್ವಕಪ್ ಚಾಂಪಿಯನ್ ಪಟ್ಟ!