ಆಸ್ಪ್ರೇಲಿಯನ್ ಓಪನ್‌: ಪ್ರಿ ಕ್ವಾರ್ಟರ್‌ಗೆ ನಡಾಲ್‌, ಹಾಲೆಪ್‌

By Kannadaprabha NewsFirst Published Jan 26, 2020, 10:27 AM IST
Highlights

ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಸ್ಪೇನ್ ಟೆನಿಸ್ ದಿಗ್ಗಜ ರಾಫೆಲ್ ನಡಾಲ್ ಅಂತಿಮ 16ರ ಘಟ್ಟ ಪ್ರವೇಶಿದಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..

ಮೆಲ್ಬರ್ನ್‌(ಜ.26): ವಿಶ್ವ ನಂ.1 ಸ್ಪೇನ್‌ನ ರಾಫೆಲ್‌ ನಡಾಲ್‌, ಆಸ್ಪ್ರೇಲಿಯಾದ ಟೆನಿಸಿಗ ನಿಕ್‌ ಕಿರಿಯೋಸ್‌, ಸ್ವಿಜರ್‌ಲೆಂಡ್‌ನ ಸ್ಟಾನ್‌ ವಾವ್ರಿಂಕಾ, ರೋಮೇನಿಯಾದ ಸಿಮೋನಾ ಹಾಲೆಪ್‌, ಏಂಜೆಲಿಕ್‌ ಕೆರ್ಬರ್‌, ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾಂಡ್‌ಸ್ಲಾಂನಲ್ಲಿ ಪ್ರಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದಾರೆ.

ಶನಿವಾರ ನಡೆದ ಪುರುಷರ ಸಿಂಗಲ್ಸ್‌ನ 3ನೇ ಸುತ್ತಿನಲ್ಲಿ ನಡಾಲ್‌, ಸ್ಪೇನ್‌ನವರೇ ಆದ ಫ್ಯಾಬ್ಲೊ ಕರೆನೊ ಬುಸ್ಟಾವಿರುದ್ಧ 6-1, 6-2, 6-4 ಸೆಟ್‌ಗಳಲ್ಲಿ ಸುಲಭ ಜಯ ಸಾಧಿಸಿದರು. 20ನೇ ಗ್ರ್ಯಾಂಡ್‌ಸ್ಲಾಂ ಮೇಲೆ ಕಣ್ಣಿಟ್ಟಿರುವ ನಡಾಲ್‌, ಅಂತಿಮ 16ರ ಸುತ್ತಿನಲ್ಲಿ ಸ್ಥಳೀಯ ಟೆನಿಸಿಗ ನಿಕ್‌ ಕಿರಿಯೋಸ್‌ರನ್ನು ಎದುರಿಸಲಿದ್ದಾರೆ.

KYRGIOS WINS! 💥

🇦🇺 will play in the 4R after defeating Khachanov 6-2 7-6 6-7 6-7 7-6! pic.twitter.com/DO1QH63DrP

— ATP Tour (@atptour)

ಆಸ್ಪ್ರೇಲಿಯಾ ಆಟಗಾರ ನಿಕ್‌ ಕಿರಿಯೋಸ್‌, ರಷ್ಯಾದ ಕರೆನ್‌ ಕಚನೊವ್‌ ವಿರುದ್ಧ 6-2, 7-6(7-5), 6-7(6-8), 6-7(7-9), 7-6(10-8) ಸೆಟ್‌ಗಳಲ್ಲಿ ಪ್ರಯಾಸದ ಗೆಲುವು ಪಡೆದರು. ಉಳಿದಂತೆ ಸ್ವಿಜರ್‌ಲೆಂಡ್‌ ಸ್ಟಾನ್‌ ವಾವ್ರಿಂಕಾ, ರಷ್ಯಾದ ಡೇನಿಯಲ್‌ ಮೆಡ್ವೆಡೆವ್‌, ಅಲೆಕ್ಸಾಂಡರ್‌ ಜ್ವೆರೆವ್‌, ಡೊಮಿನಿಕ್‌ ಥೀಮ್‌ ಪ್ರಿ ಕ್ವಾರ್ಟರ್‌ಗೇರಿದ್ದಾರೆ.

ಆಸ್ಪ್ರೇಲಿಯನ್‌ ಓಪನ್‌: ಸೆರೆನಾಗೆ ಶಾಕ್‌, ಹೊರಬಿದ್ದ ಒಸಾಕ!

ತಲೆಕೆಳಗಾದ ಲೆಕ್ಕಾಚಾರ: ಮಹಿಳಾ ಸಿಂಗಲ್ಸ್‌ನಲ್ಲಿ ಹಾಲಿ ಚಾಂಪಿಯನ್‌ ನವೊಮಿ ಒಸಾಕ, ಸೆರೆನಾ ವಿಲಿಯಮ್ಸ್‌ ಬಳಿಕ ಅಗ್ರ 10ರಲ್ಲಿರುವ ಮೂವರು ಹೊರಬಿದ್ದಿದ್ದಾರೆ. 2ನೇ ಶ್ರೇಯಾಂಕಿತೆ ಚೆಕ್‌ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ, 5ನೇ ಶ್ರೇಯಾಂಕಿತೆ ಉಕ್ರೇನ್‌ನ ಎಲೆನಾ ಸ್ವಿಟೋಲಿನಾ, 6ನೇ ಶ್ರೇಯಾಂಕಿತೆ ಸ್ವಿಜರ್‌ಲೆಂಡ್‌ನ ಬೆಲಿಂಡಾ ಬೆನ್ಸಿ$್ಚಚ್‌ 3ನೇ ಸುತ್ತಿನಲ್ಲಿ ಸೋಲುಂಡು ಹೊರಬಿದ್ದಿದ್ದಾರೆ.

ಮಾಜಿ ಗ್ರ್ಯಾಂಡ್‌ಸ್ಲಾಂ ಚಾಂಪಿಯನ್‌ ಸ್ಪೇನ್‌ನ ಗಾರ್ಬೈನ್‌ ಮುಗುರುಜಾ ವಿರುದ್ಧ ಸ್ವಿಟೋಲಿನಾ 1-6, 2-6 ಸೆಟ್‌ಗಳಲ್ಲಿ ಸೋಲುಂಡರೆ, 30ನೇ ಶ್ರೇಯಾಂಕಿತೆ ರಷ್ಯಾದ ಅನಸ್ತಾಸಿಯಾ ಪಾವ್ಲು್ಯಚೆಂಕೋವಾ ವಿರುದ್ಧ 6-7, 6-7 ಸೆಟ್‌ಗಳಲ್ಲಿ ವೀರೋಚಿತ ಸೋಲು ಕಂಡರು. ಎಸ್ಟೋನಿಯಾದ ಅನೆಟ್‌ ಕೊಂಟಾವಿಟ್‌ರ ವಿರುದ್ಧ ಬೆನ್ಸಿ$್ಚಚ್‌ 0-6, 1-6 ಸೆಟ್‌ಗಳಲ್ಲಿ ಹೀನಾಯ ಸೋಲು ಕಂಡು ಹೊರಬಿದ್ದರು.

ಈ ಆಘಾತಗಳ ನಡುವೆ ಮಾಜಿ ನಂ.1, ರೊಮೇನಿಯಾದ ಸಿಮೋನಾ ಹಾಲೆಪ್‌ ತಮ್ಮ ಎದುರಾಳಿ ಕಜಕಸ್ತಾನದ ಯುಲಿಯಾ ಪುಟೆನ್‌್ಟಸೆವಾ ವಿರುದ್ಧ 6-1, 6-4 ಸೆಟ್‌ಗಳಲ್ಲಿ ಸುಲಭವಾಗಿ ಗೆದ್ದು 4ನೇ ಸುತ್ತು ಪ್ರವೇಶಿಸಿದರು. ಮತ್ತೊಬ್ಬ ಮಾಜಿ ನಂ.1 ಆಟಗಾರ್ತಿ, ಜರ್ಮನಿಯ ಏಂಜೆಲಿಕ್‌ ಕೆರ್ಬರ್‌ ಇಟಲಿಯ ಕ್ಯಾಮಿಲಾ ವಿರುದ್ಧ 6-2, 6-7, 6-3 ಸೆಟ್‌ಗಳಲ್ಲಿ ಜಯಿಸಿ ಮುನ್ನಡೆದರು.

ಬೋಪಣ್ಣ ಜೋಡಿಗೆ ಜಯ

ಮಿಶ್ರ ಡಬಲ್ಸ್‌ನ ಮೊದಲ ಸುತ್ತಲ್ಲಿ ಭಾರತದ ರೋಹನ್‌ ಬೋಪಣ್ಣ ಹಾಗೂ ಉಕ್ರೇನ್‌ನ ನಾಡಿಯಾ ಕಿಚೆನೊಕ್‌ ಜೋಡಿ, ಅಮೆರಿಕದ ಆಸ್ಟಿನ್‌ ಕ್ರಜಿಕ್‌ ಮತ್ತು ಉಕ್ರೇನ್‌ನ ಲುದ್‌ಮ್ಯಾಲ ಕಿಚೆನೊಕ್‌ ಜೋಡಿ ವಿರುದ್ಧ 7-5, 4-6, 10-6 ಸೆಟ್‌ಗಳಲ್ಲಿ ಗೆಲುವು ಸಾಧಿಸಿ 2ನೇ ಸುತ್ತು ಪ್ರವೇಶಿಸಿತು. ಲಿಯಾಂಡರ್‌ ಪೇಸ್‌ ಹಾಗೂ ಲಾತ್ವಿಯಾದ ಎಲೆನಾ ಒಸ್ಟಪೆನ್ಕೋ ಜೋಡಿ ಭಾನುವಾರ ತನ್ನ ಮೊದಲ ಸುತ್ತಿನ ಪಂದ್ಯವನ್ನಾಡಲಿದೆ.

 

click me!