* ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಗೌರವ್ ಬಿಧುರಿಗೆ ಮೊದಲ ಸುತ್ತಿನಲ್ಲೇ ಶಾಕ್
* 57 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ರೈಲ್ವೇಸ್‌ನ ಗೌರವ್ ಹರ್ಯಾಣದ ಸಚಿನ್ ಎದುರು ಸೋಲು
* ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದಿದ್ದ ಗೌರವ್
ಬಳ್ಳಾರಿ(ಸೆ.18): ವಿಶ್ವ ಚಾಂಪಿಯನ್‌ಶಿಪ್ ಕಂಚು ವಿಜೇತ ಬಾಕ್ಸರ್ ಗೌರವ್ ಬಿಧುರಿ ರಾಷ್ಟ್ರೀಯ ಪುರುಷರ ಚಾಂಪಿಯನ್‌ಶಿಪನ್‌ನಲ್ಲಿ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ.
ಶುಕ್ರವಾರ ನಡೆದ 57 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ರೈಲ್ವೇಸ್‌ನ ಗೌರವ್ ಹರಾರಯಣದ ಸಚಿನ್ ವಿರುದ್ಧ 1-4ರಿಂದ ಮುಗ್ಗರಿಸಿದರು. ದಕ್ಷಿಣ ಏಷ್ಯನ್ ಗೇಮ್ಸ್ ಚಾಂಪಿಯನ್ ಅಂಕಿತ್ ಖತಾನ (75 ಕೆ.ಜಿ.) ಹಿಮಾಚಲ ಪ್ರದೇಶದ ಧರಂ ಪಾಲ್ ವಿರುದ್ಧ ಗೆದ್ದು ಕ್ವಾರ್ಟರ್‌ಫೈನಲ್ ತಲುಪಿದರು.
🆃🅷🆁🅾🆄🅶🅷 🆃🅷🅴 🅻🅴🅽🆂 📸
Take a look at some glimpses from Day 3️⃣ of 5th Elite Men's National Boxing Championships 2021 👇🏻 pic.twitter.com/0DB5Vo5AcA
ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಎಸ್‌ಎಸ್‌ಸಿಬಿ ಪ್ರಾಬಲ್ಯ
ತೆಲಂಗಾಣದ ಸಾವಿಯೊ ಡೊಮಿನಿಕ್(54 ಕೆ.ಜಿ.), ಗೋವಾದ ಅಶೋಕ್ ಪಾಟೀಲ್(67 ಕೆ.ಜಿ.), ಚಂಡೀಗಢದ ಕುಲದೀಪ್ ಕುಮಾರ್(48 ಕೆ.ಜಿ.) ಹಾಗೂ ಸಚಿನ್, ಮಹಾರಾಷ್ಟ್ರದ ನಿಖಿಲ್ ದುಬೆ(75 ಕೆ.ಜಿ.) ಕೂಡಾ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.