ಮಿನಿ ಒಲಿಂಪಿಕ್ಸ್‌: ಚಿನ್ನಕ್ಕೆ ಮುತ್ತಿಕ್ಕಿದ ರಿಮಾ

By Kannadaprabha News  |  First Published Feb 5, 2020, 9:43 AM IST

ಮಿನಿ ಒಲಿಂಪಿಕ್ಸ್‌ನಲ್ಲಿ ರಾಜ್ಯದ ಈಜುಪಟು ರಿಮಾ ವೀರೇಂದ್ರ ಕುಮಾರ್‌ ಚಿನ್ನದ ಪದಕ ಜಯಿಸಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..


ಬೆಂಗಳೂರು(ಫೆ.05): ರಾಜ್ಯದ ಯುವ ಈಜುಪಟು ರಿಮಾ ವೀರೇಂದ್ರ ಕುಮಾರ್‌ ಇಲ್ಲಿ ನಡೆಯುತ್ತಿರುವ ರಾಜ್ಯ ಮಿನಿ ಒಲಿಂಪಿಕ್ಸ್‌ನ ಮೊದಲ ಆವೃತ್ತಿಯ ಬಾಲಕಿಯರ 100ಮೀ. ಬ್ಯಾಕ್‌ಸ್ಟ್ರೋಕ್‌ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. 

ಮಿನಿ ಒಲಿಂಪಿಕ್ಸ್‌ಗೆ ಮುಖ್ಯಮಂತ್ರಿ ಅದ್ಧೂರಿ ಚಾಲನೆ

Tap to resize

Latest Videos

ಬಸವನಗುಡಿ ಈಜು ಕೇಂದ್ರದಲ್ಲಿ ಕೂಟದ 2ನೇ ದಿನವಾದ ಮಂಗಳವಾರ ನಡೆದ ಸ್ಪರ್ಧೆಯಲ್ಲಿ ರಿಮಾ (1:10.95ಸೆ.)ಗಳಲ್ಲಿ ಗುರಿ ಮುಟ್ಟಿ ಮೊದಲಿಗರಾದರೆ, ಅಶ್ವಿನ್‌ ಮತ್ತೂರ್‌(1:16.23ಸೆ.) ಮತ್ತು ನೈಶಾ ಶೆಟ್ಟಿ(1:16.41ಸೆ.) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು. ಬಾಲಕರ 50ಮೀ.ಬ್ರೇಸ್ಟ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ ವಿದಿತ್‌ ಎಸ್‌.ಶಂಕರ್‌(33.66ಸೆ.) ಚಿನ್ನ ಗೆದ್ದರು. 

ಕಂಠೀರವದಲ್ಲಿ ಕ್ರೀಡಾ ವಿಜ್ಞಾನ ಕೇಂದ್ರಕ್ಕೆ ಡಿಸಿಎಂ ಚಾಲನೆ

ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಬಾಲಕಿಯರ 28 ಕೆ.ಜಿ. ವಿಭಾಗದ ಜುಡೋ ಸ್ಪರ್ಧೆಯಲ್ಲಿ ಮುಕ್ತಾ ಎಂ. ಚಿನ್ನಕ್ಕೆ ಮುತ್ತಿಟ್ಟರು. ಬಾಲಕಿಯರ 32 ಕೆ.ಜಿ. ವಿಭಾಗದಲ್ಲಿ ಶ್ವೇತಾ ಸಿ ಅಲಕನೂರು ಮತ್ತು ಕೆ.ಎಸ್‌. ಶಿವಾತ್ಮಿಕಾ ಕ್ರಮವಾಗಿ ಮೊದಲೆರಡು ಸ್ಥಾನಕ್ಕೆ ಪಾತ್ರರಾದರೆ, 40 ಕೆ.ಜಿ. ಬಾಲಕಿಯರ ವಿಭಾಗದಲ್ಲಿ ಶೌಫ್ತಾ ನಾಜ್‌ ಐಸಾಕ್‌ ವಾಲಿಕರ್‌ ಮತ್ತು ಡಿ.ಪಿ. ಸುಖಿತಾ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದರು.

click me!