ವಿಶ್ವ ಚಾಂಪಿಯನ್ ಮೈಕೆಲ್ ಶೂಮಾಕರ್ ಮಗ ಮಿಕ್ ಶೂಮಾಕರ್ ಫಾರ್ಮುಲಾ 1 ರೇಸ್‌ಗಿಳಿಯಲು ಮುಂದಾಗಿದ್ದಾರೆ. ಹ್ಯಾಸ್ ತಂಡದೊಟ್ಟಿಗೆ ಮಿಕ್ ಶೂಮಾಕರ್ ಕೆಲ ವರ್ಷದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಲಂಡನ್(ಡಿ.03): ಫಾರ್ಮುಲಾ 1 ರೇಸ್‌ನ ದಿಗ್ಗಜ ಚಾಲಕ, 7 ಬಾರಿ ವಿಶ್ವ ಚಾಂಪಿಯನ್ ಮೈಕೆಲ್ ಶೂಮಾಕರ್ ಮಗ ಮಿಕ್ ಶೂಮಾಕರ್, 2021ರ ಫಾರ್ಮುಲಾ ಒನ್ ರೇಸ್‌ನಲ್ಲಿ ಭಾಗವಹಿಸಲಿದ್ದಾರೆ.
ಹ್ಯಾಸ್ ತಂಡದೊಟ್ಟಿಗೆ ಮಿಕ್ ಶೂಮಾಕರ್ ಕೆಲ ವರ್ಷದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಫಾರ್ಮುಲಾ ಒನ್ ರೇಸ್‌ನಲ್ಲಿ ಮಿಕ್ ಪಾದಾರ್ಪಣೆ ಮಾಡಲಿದ್ದಾರೆ ಎಂದು ಹ್ಯಾಸ್ ತಂಡ ಹೇಳಿಕೊಂಡಿದೆ.
ಫಾರ್ಮುಲಾ ಒನ್ ರೇಸಲ್ಲಿ ಭೀಕರ ಅಪಘಾತ: ಕಾರು ಭಸ್ಮ
21 ವರ್ಷದ ಮಿಕ್, ಫೆರಾರಿ ಡ್ರೈವರ್ ಅಕಾಡೆಮಿಯ ಸದಸ್ಯರಾಗಿದ್ದಾರೆ. ಈ ಆವೃತ್ತಿಯಲ್ಲಿ ಫಾರ್ಮುಲಾ 2 ರೇಸ್‌ನಲ್ಲಿ ಕೊನೆಯ ಸುತ್ತಿನಲ್ಲಿ ಪ್ರಶಸ್ತಿಗಾಗಿ ಸೆಣಸಿದ್ದರು. ಡಿಸೆಂಬರ್ 4 ರಿಂದ 6 ರವರೆಗೆ ನಡೆಯಲಿರುವ ಬಹರೈನ್ ಅಂತಾರಾಷ್ಟ್ರೀಯ ಸಕ್ರ್ಯೂಟ್‌ನಲ್ಲಿ ಮಿಕ್ ಸ್ಪರ್ಧಿಸಲಿದ್ದಾರೆ.
ಲೂಯಿಸ್ ಹ್ಯಾಮಿಲ್ಟನ್‌ಗೆ ಕೊರೋನಾ ಸೋಂಕು
ಸಾಕಿರ್(ಬಹರೈನ್): ಫಾರ್ಮುಲಾ ಒನ್ ಹಾಲಿ ಚಾಂಪಿಯನ್, 7 ಬಾರಿ ವಿಶ್ವ ಚಾಂಪಿಯನ್ ಚಾಲಕ ಲೂಯಿಸ್ ಹ್ಯಾಮಿಲ್ಟನ್‌ಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಎಫ್-1 ಅಧಿಕೃತ ಟ್ವೀಟರ್ ಮಂಗಳವಾರ ಪೋಸ್ಟ್ ಮಾಡಿದೆ.
ಹ್ಯಾಮಿಲ್ಟನ್‌ಗೆ ಸೋಂಕು ತಗುಲಿರುವ ಕಾರಣದಿಂದ ಈ ವಾರಾಂತ್ಯದಲ್ಲಿ ನಡೆಯಲಿರುವ ಸಾಕಿರ್ ಗ್ರ್ಯಾಂಡ್‌ಪ್ರಿಕ್ಸ್ ಕಾರು ರೇಸ್‌ಗೆ ಅಲಭ್ಯರಾಗಿದ್ದಾರೆ. ಕಳೆದ ವಾರ ಹ್ಯಾಮಿಲ್ಟನ್‌ಗೆ 3 ಬಾರಿ ಕೊರೋನಾ ಪರೀಕ್ಷೆ ನಡೆಸಲಾಗಿತ್ತು. 3 ಬಾರಿಯೂ ವರದಿ ನೆಗೆಟಿವ್ ಬಂದಿತ್ತು.
ಭಾನುವಾರ ಮಧ್ಯಾಹ್ನ ಬಹರೈನ್ ಇಂಟರ್ ನ್ಯಾಷನಲ್ ಸೆಕ್ರ್ಯೂಟ್‌ನಲ್ಲಿ ನಡೆದ ಕೊನೆಯ ಗ್ರ್ಯಾಂಡ್‌ಪ್ರಿಕ್ಸ್‌ನಲ್ಲಿ ಹ್ಯಾಮಿಲ್ಟನ್ ಜಯಗಳಿಸಿದರು. ಸೋಮವಾರ ಸೋಂಕಿನ ಲಕ್ಷಣ ಕಂಡುಬಂದಿದ್ದರಿಂದ ಪರೀಕ್ಷೆ ನಡೆಸಲಾಯಿತು. ಈ ವೇಳೆ ಸೋಂಕು ಪತ್ತೆಯಾಗಿದೆ ಎಂದು ಎಪ್-1 ತಂಡ ಹೇಳಿದೆ.