ಭಾರತದ ಮಾಜಿ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ ದುರ್ಯೋಧನ್ ಸಿಂಗ್ ನೇಗಿ ಅವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ(ನ.30): ಮಾಜಿ ರಾಷ್ಟ್ರೀಯ ಚಾಂಪಿಯನ್ ಬಾಕ್ಸರ್ ದುರ್ಯೋಧನ್ ಸಿಂಗ್ ನೇಗಿ ಕೊರೋನಾ ಸೋಂಕು ದೃಢಪಟ್ಟಿದೆ. ಮುನ್ನೆಚ್ಚರಿಕಾ ಕ್ರಮವಾಗಿ ದುರ್ಯೋಧನ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಭಾನುವಾರ ಹೇಳಿದೆ.
ಪಟಿಯಾಲದ ಸಾಯ್ ಕೇಂದ್ರದಲ್ಲಿ ರಾಷ್ಟ್ರೀಯ ಶಿಬಿರದಲ್ಲಿ ಭಾಗವಹಿಸಿದ್ದ ದುರ್ಯೋಧನ್, ದೀಪಾವಳಿಗಾಗಿ ಬಿಡುವು ಪಡೆದಿದ್ದರು. ಈ ವೇಳೆ ಕೊರೋನಾ ತಗುಲಿದೆ ಎನ್ನಲಾಗಿದೆ.
ಪ್ರೊ ಕಬಡ್ಡಿ ಮುಂದಿನ ವರ್ಷಕ್ಕೆ ಮುಂದೂಡಿಕೆ..!
Boxer Duryodhan Singh Negi (69 kg) who is presently training at NSNIS Patiala has tested positive for the coronavirus. He is currently asymptomatic and has been shifted to Columbia Asia Hospital as a precautionary measure.
(File Pic) pic.twitter.com/7q7S5f4ASL
ನರಸಿಂಗ್‌ಗೆ ಕೊರೋನಾ ಸೋಂಕು:
ಭಾರತದ ತಾರಾ ಕುಸ್ತಿಪಟು ನರಸಿಂಗ್ ಯಾದವ್ ಹಾಗೂ ಗ್ರೀಕೋ ರೋಮನ್ ವಿಭಾಗದ ಕುಸ್ತಿಪಟು ಗುರುಪ್ರೀತ್ ಸಿಂಗ್‌ಗೆ ಕೊರೋನಾ ಸೋಂಕು ದೃಢಪಟ್ಟಿದೆ. ಕುಸ್ತಿ ತಂಡದ ಫಿಸಿಯೊ ವಿನೋದ್ ರೈಗೆ ಕೂಡಾ ಸೋಂಕಿರುವುದು ಪತ್ತೆಯಾಗಿದೆ. ಮೂವರನ್ನು ಸೋನೆಪತ್‌ನ ಭಾಗವಾನ್ ಮಹಾವೀರ್ ದಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ಸಾಯ್ ಹೇಳಿದೆ.