Mann Ki Baat: ಪ್ರಧಾನಿ ಭಾಷಣದಿಂದ ಕ್ರೀಡೆಗೆ ದೊರಕಿದ ಪ್ರೋತ್ಸಾಹ, ಸ್ಫೂರ್ತಿ ಬಹಳ ದೊಡ್ಡದು: ಸಾನಿಯಾ ಮಿರ್ಜಾ

By Kannadaprabha News  |  First Published Apr 30, 2023, 8:47 AM IST

ಹಲವಾರು ವರ್ಷಗಳಿಂದ ಈ ವಿಶಿಷ್ಟ ಕಾರ್ಯಕ್ರಮದ ಮೂಲಕ ಮೋದಿಯವರು ಪ್ರತಿದಿನದ ಜನಜೀವನಕ್ಕೆ ಅಗತ್ಯವಿರುವ ಅನೇಕ ಪ್ರಮುಖ ವಿಚಾರಗಳ ಕುರಿತು ಮಾತನಾಡಿದ್ದಾರೆ. ಸಮಾಜದ ಒಳಿತಿಗಾಗಿ ದುಡಿಯುತ್ತಿರುವ, ಸಹಜ ಕೃಷಿಯಲ್ಲಿ ತೊಡಗಿಸಿಕೊಂಡಿರುವ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಮೆಚ್ಚಿಕೊಂಡಿದ್ದಾರೆ.


(ಸಾನಿಯಾ ಮಿರ್ಜಾ, ಖ್ಯಾತ ಟೆನಿಸ್‌ ಆಟಗಾರ್ತಿ)
ಸುಮಾರು ಏಳೂವರೆ ವರ್ಷಗಳ ಹಿಂದೆ ಆರಂಭವಾದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ‘ಮನ್‌ ಕೀ ಬಾತ್‌’ ಕಾರ್ಯಕ್ರಮ 100ನೇ ಸಂಚಿಕೆಯನ್ನು ಪೂರೈಸುತ್ತಿದೆ. ಉತ್ತಮ ಭಾರತದ ಕನಸನ್ನು ಸಾಕಾರಗೊಳಿಸುವ ಉದ್ದೇಶವನ್ನು ಹೊಂದಿರುವ ಈ ಕಾರ್ಯಕ್ರಮ ಆ ನಿಟ್ಟಿನಲ್ಲಿ ಸಾಗಿದ, ಸಾಗುತ್ತಿರುವ ದಾರಿಯ ಪುನರವಲೋಕನ ಮಾಡಿಕೊಳ್ಳಲು ಇದು ಸಕಾಲ.

ರಾಜಕೀಯ ಉದ್ದೇಶವಿಲ್ಲದೇ ಇರುವುದು ಮತ್ತು ರಾಜಕೀಯೇತರವಾಗಿರುವುದು ಈ ಕಾರ್ಯಕ್ರಮದ ತೂಕವನ್ನು ಹೆಚ್ಚಿಸಿದೆ. ಹಲವು ನಿಟ್ಟಿನಲ್ಲಿ ಆಲೋಚಿಸಿದಾಗಲೂ ಪ್ರಧಾನ ಮಂತ್ರಿಯವರ ‘ಮನ್‌ ಕೀ ಬಾತ್‌’ ಕಾರ್ಯಕ್ರಮ ಸಮಾಜವನ್ನು ಮತ್ತು ದೇಶವನ್ನು ಒಗ್ಗಟ್ಟಾಗಿಸಿ ಮುನ್ನಡೆಸುವಲ್ಲಿ ಪಾತ್ರ ವಹಿಸಿದೆ. ಒಗ್ಗೂಡಿಸುವಿಕೆಯೇ ಈ ಕಾರ್ಯಕ್ರಮದ ಬಹುದೊಡ್ಡ ಯಶಸ್ಸು ಎಂದು ನಾನು ಭಾವಿಸಿದ್ದೇನೆ. ನರೇಂದ್ರ ಮೋದಿಯವರ ಆಕರ್ಷಕ ಮಾತಿನ ಶೈಲಿ, ವಿಚಾರದ ಕುರಿತು ಅವರಿಗಿರುವ ಆಳ ಮತ್ತು ಗಾಢವಾದ ಮಾಹಿತಿ, ವಿಷಯಗಳನ್ನು ಸರಳವಾಗಿ ಮತ್ತು ಅನನುಕರಣೀಯವಾಗಿ ಹೇಳುವ ಪರಿ ಎಲ್ಲವೂ ಸೇರಿಕೊಂಡಿದ್ದರಿಂದ ಈ ಕಾರ್ಯಕ್ರಮ ಸುದೀರ್ಘ ಕಾಲ ಜನರ ಕುತೂಹಲವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅದಕ್ಕಿಂತ ಹೆಚ್ಚಾಗಿ ಈ ಕಾರ್ಯಕ್ರಮ ಇನ್ನೂ ಹೆಚ್ಚು ಬೇಕು ಎಂಬ ಭಾವವನ್ನು ಮೂಡಿಸಿದೆ.

Tap to resize

Latest Videos

ಇದನ್ನು ಓದಿ: ಮೋದಿ ‘ಮನ್‌ ಕೀ ಬಾತ್‌’ಗೆ ಇಂದು ಶತಕ: ದೇಶದ 4 ಲಕ್ಷ ಕಡೆ ಕೇಳಲು ಬಿಜೆಪಿ ವ್ಯವಸ್ಥೆ

ಕ್ರೀಡಾ ಕ್ಷೇತ್ರಕ್ಕೆ ಮೋದಿ ಕೊಡುಗೆ
ಒಬ್ಬ ವೃತ್ತಿಪರ ಆಟಗಾರ್ತಿಯಾಗಿ ಕಳೆದ ಹಲವು ವರ್ಷಗಳಲ್ಲಿ, ಅನೇಕ ಹಂತಗಳಲ್ಲಿ ಪ್ರಧಾನಮಂತ್ರಿಯವರು ನೀಡಿರುವ ಪ್ರೋತ್ಸಾಹವನ್ನು ಕಂಡು ಖುಷಿಯಾಗಿದ್ದೇನೆ. ಏಷಿಯನ್‌ ಗೇಮ್ಸ್‌ನಲ್ಲಿ ಪದಕ ಗೆದ್ದ ಸಂದರ್ಭದಲ್ಲಿ ಮೋದಿಜಿಯವರ ಬಳಿ ನೇರವಾಗಿ ಮಾತನಾಡುವ ಅವಕಾಶ ಸಿಕ್ಕಿತ್ತು. ಒಲಿಪಿಂಕ್ಸ್‌ಗೆ ಹೊರಡುವ ಮೊದಲು ಅವರೊಂದಿಗೆ ಟೀವಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅದೃಷ್ಟವೂ ನನ್ನದಾಗಿತ್ತು. ಕ್ರೀಡೆ ಮತ್ತು ಕ್ರೀಡಾಪಟುಗಳ ಕುರಿತು ಅವರು ಮನ್‌ ಕೀ ಬಾತ್‌ನಲ್ಲಿ ಮಾತನಾಡಿದಾಗ ಹೆಮ್ಮೆ ಪಟ್ಟಿದ್ದೇನೆ. ಅವರ ಕಾರ್ಯಕ್ರಮದ ಮೂಲಕ ಅಂತಾರಾಷ್ಟೀಯ ಮಟ್ಟದಲ್ಲಿ ದೇಶದ ಕೀರ್ತಿ ಹೆಚ್ಚಿಸಲು ಕ್ರಿಡಾಪಟುಗಳು ಎಷ್ಟು ಶ್ರಮಿಸುತ್ತಾರೆ ಎಂಬುದರ ಕುರಿತು ಅವರು ಜ್ಞಾನವನ್ನು ಹಂಚಿದ್ದಾರೆ. ಇದು ಜ್ಞಾನ ಹಂಚುವ ಕೆಲಸವಷ್ಟೇ ಆಗದೆ, ಇದರಿಂದ ಸಾವಿರಾರು ತರುಣ, ತರುಣಿಯರು ಸ್ಫೂರ್ತಿಗೊಂಡು ಕ್ರೀಡೆಯನ್ನು ಗಂಭೀರವಾಗಿ ತೆಗೆದುಕೊಂಡು ಅಪಾರವಾದ ಕನಸು ಮತ್ತು ದೂರದೃಷ್ಟಿಯ ಜೊತೆಗೆ ಕ್ರೀಡಾ ಕ್ಷೇತ್ರಕ್ಕೆ ಪ್ರವೇಶಿಸುವುದು ಸಾಧ್ಯವಾಗಿದೆ.

ನಾನು ವೃತ್ತಿಪರ ಟೆನ್ನಿಸ್‌ಗೆ ನಿವೃತ್ತಿ ಘೋಷಿಸಿದ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಖುದ್ದು ತಾವೇ ಪತ್ರ ಬರೆದಿದ್ದರು. ಆ ಮೂಲಕ ನನ್ನ ಕ್ರೀಡಾ ವೃತ್ತಿ ಜೀವನಕ್ಕೆ ಅಭಿನಂದನೆ ಸಲ್ಲಿಸಿದ್ದರು. ನನಗೆ ಅದೊಂದು ಹೃದಯ ತಾಕಿದ ಕ್ಷಣ. ನಾನು ಯಾವಾಗಲೂ ಟೆನ್ನಿಸ್‌ ಆಟದ ಮೂಲಕ ನಮ್ಮ ದೇಶವನ್ನು ಹೆಮ್ಮೆಯಿಂದ ಪ್ರತಿನಿಧಿಸಿದ್ದೇನೆ. ಆದರೆ ನಮ್ಮ ಶ್ರಮ, ಶ್ರದ್ಧೆಯನ್ನು ಸ್ವತಃ ಪ್ರಧಾನ ಮಂತ್ರಿಯವರೇ ಅಂಗೀಕರಿಸಿ ಮೆಚ್ಚಿಕೊಂಡಾಗ ದೇಶಕ್ಕಾಗಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ಸ್ಫೂರ್ತಿ ದೊರೆಯುತ್ತದೆ. ಪ್ರಧಾನ ಮಂತ್ರಿಯವರ ಆ ಪ್ರೋತ್ಸಾಹದಾಯಕ ಪತ್ರಗಳು ನಮ್ಮ ದೇಶ ಕ್ರೀಡಾ ಕ್ಷೇತ್ರವನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಂಡಿದೆ ಎಂಬುದನ್ನು ಸಾರಿವೆ. ಕೇಂದ್ರ ಸರ್ಕಾರ ಕ್ರೀಡಾಪಟುಗಳ ಸ್ಥೈರ್ಯವನ್ನು ಹೆಚ್ಚಿಸಲು ಬೇಕಾದ ಎಲ್ಲಾ ಕೆಲಸಗಳನ್ನು ಮಾಡುತ್ತಿದೆ ಎಂಬ ಪುರಾವೆ ಒದಗಿಸಿವೆ.

ಇದನ್ನೂ ಓದಿ: 'ಮನ್‌ ಕೀ ಬಾತ್‌' ಮೋದಿ ಮತ್ತು ದೇಶದ ನಾಗರಿಕರ ನಡುವೆ ಸಂಪರ್ಕ ಬೆಸೆಯುವ ಮುಖ್ಯ ಸಾಧನ: ಆಮೀರ್‌ ಖಾನ್‌ ಪ್ರಶಂಸೆಯ ಮಳೆ

ವೈವಿಧ್ಯಮಯ ವಿಷಯಗಳು
ಹಲವಾರು ವರ್ಷಗಳಿಂದ ಈ ವಿಶಿಷ್ಟ ಕಾರ್ಯಕ್ರಮದ ಮೂಲಕ ನರೇಂದ್ರ ಮೋದಿಯವರು ಪ್ರತಿದಿನದ ಜನಜೀವನಕ್ಕೆ ಅಗತ್ಯವಿರುವ ಅನೇಕ ಪ್ರಮುಖ ವಿಚಾರಗಳ ಕುರಿತು ಮಾತನಾಡಿದ್ದಾರೆ. ಪರೀಕ್ಷೆಯನ್ನು ಗೆಲ್ಲುವ ಕ್ರಮ, ಕಲೆ ಮತ್ತು ಸಂಸ್ಕೃತಿ, ನೀರು ಮತ್ತು ಅರಣ್ಯ ರಕ್ಷಣೆ, ಶುದ್ಧತೆಯ ಮಹತ್ವ, ಆರೋಗ್ಯ ಮತ್ತು ದೇಶ ರಕ್ಷಣೆ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿ, ಬೇಟಿ ಬಚಾವೋ ಬೇಟಿ ಪಢಾವೋ ಅಭಿಯಾನ ಹೀಗೆ ಅನೇಕ ಮಹತ್ವದ ವಿಚಾರಗಳನ್ನು ಚರ್ಚಿಸಿದ್ದಾರೆ. ಅಷ್ಟಲ್ಲದೇ ಸಮಾಜದ ಒಳಿತಿಗಾಗಿ ದುಡಿಯುತ್ತಿರುವ, ಸಹಜ ಕೃಷಿಯಲ್ಲಿ ತೊಡಗಿಸಿಕೊಂಡಿರುವ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಕುರಿತು ಮಾತನಾಡಿದ್ದಾರೆ. ಸಂಶೋಧನೆಯಲ್ಲಿ ನಿರತ ಯುವಜನತೆಯನ್ನು ಕೊಂಡಾಡಿದ್ದಾರೆ. ಆ ಮೂಲಕ ದೇಶದ ಜನಜೀವನ ಉತ್ತಮಗೊಳಿಸುವ ಉದ್ದೇಶ ಸಾಧನೆಗೆ ಸದಾ ತುಡಿದಿದ್ದಾರೆ.

ಭಾರತದ ವಿವಿಧ ರಾಜ್ಯಗಳ, ವಿವಿಧ ಭಾಗಗಳ ಹಬ್ಬಗಳ ಕುರಿತು ಜ್ಞಾನ ಹಂಚುವ, ಭಾರತದ ಸಂಸ್ಕೃತಿಯ ಆಳ ಅಗಲವನ್ನು ಸಾಮಾನ್ಯರಿಗೆ ದಾಟಿಸುವ ಕೆಲಸವನ್ನು ಮೋದಿಯವರು ಮಾಡಿದ್ದಾರೆ ಎಂಬುದು ನಮ್ಮ ದೇಶದ ಜನರಿಗೆ ತಿಳಿದಿದೆ. ಅದರಿಂದಲೇ ದೇಶದ ತುತ್ತತುದಿಯ ಗ್ರಾಮೀಣ ಪ್ರದೇಶಗಳ ಜನಜೀವನವನ್ನೂ ಅರ್ಥೈಸಿಕೊಳ್ಳುವುದು ಸಾಧ್ಯವಾಗಿದೆ ಮತ್ತು ಅದರಿಂದ ದೇಶದ ಐಕ್ಯತೆಗೆ ಕೊಡುಗೆ ನೀಡಿದಂತಾಗಿದೆ.

ಇದನ್ನೂ ಓದಿ: ಅಂಗಾಂಗ ದಾನ ಮಾಡಿ: 99ನೇ ಮನ್‌ ಕೀ ಬಾತ್‌ ಭಾಷಣದಲ್ಲಿ ಜನತೆಗೆ ಮೋದಿ ಕರೆ

ಪರಿಸರದ ಬಗ್ಗೆ ಜಾಗೃತಿ
ಪರಿಸರ ಕುರಿತು ಅಲಕ್ಷ್ಯ ತೋರಿಸಿದಲ್ಲಿ ಜನರು ಎದುರುಗೊಳ್ಳಬಹುದಾದ ಕಷ್ಟಗಳು, ಆತಂಕಗಳ ಕುರಿತು ಅವರು ಪರಿಸರ ಕುರಿತ ವಿಚಾರಪೂರಿತ ಮಾತುಗಳಲ್ಲಿ ಎಚ್ಚರಿಸಿದ್ದಾರೆ. ಹವಾಮಾನ ಬದಲಾವಣೆ ಕುರಿತು ವಿವರವಾಗಿ ಚರ್ಚಿಸಿದ್ದಾರೆ. ಮನ್‌ ಕೀ ಬಾತ್‌ ಕಾರ್ಯಕ್ರಮವನ್ನು ಅವರು ಮಹಿಳಾ ಸಬಲೀಕರಣಕ್ಕೂ ಸಶಕ್ತವಾಗಿ ಬಳಸಿಕೊಂಡಿದ್ದಾರೆ. ಸ್ವತಃ ಪ್ರಧಾನ ಮಂತ್ರಿಯವರ ದೂರದೃಷ್ಟಿತ್ವದಿಂದ ಹುಟ್ಟಿಕೊಂಡ ಹಲವು ಸರ್ಕಾರಿ ಯೋಜನೆಗಳ ನೆರವು ಪಡೆದುಕೊಂಡು ಸ್ವ-ಸಹಾಯ ಸಂಘಗಳನ್ನು ಸ್ಥಾಪಿಸಿ ಹೇಗೆ ಗ್ರಾಮೀಣ ಮಹಿಳೆಯರು ದೇಶದ ಆರ್ಥಿಕತೆಗೆ ಕೊಡುಗೆ ನೀಡುತ್ತಿದ್ದಾರೆ ಎಂಬುದರ ಕುರಿತಾಗಿಯೂ ಮಾತನಾಡಿದ್ದಾರೆ. ಆ ಮಹಿಳೆಯರ ಗೆಲುವನ್ನು ಸಂವಹನ ಮಾಧ್ಯಮದ ಮೂಲಕ ದೇಶದ ಜನರಿಗೆ ಸಾರಿದ್ದಾರೆ.

ಮನ್‌ ಕೀ ಬಾತ್‌ ಕಾರ್ಯಕ್ರಮದ ಮೂಲಕ ಪ್ರಧಾನ ಮಂತ್ರಿಯವರು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಬಹುತೇಕ ವಿಚಾರಗಳನ್ನು ಚರ್ಚಿಸಿದ್ದಾರೆ. ಆರೋಗ್ಯಕರ ಜೀವನ ವಿಧಾನವನ್ನು ಅಳವಡಿಸಿಕೊಂಡು ಬದುಕು ಸಾಗಿಸಲು ಕರೆ ನೀಡಿದ್ದಾರೆ. ಆರೋಗ್ಯಕರ ದೇಶವೇ ಸಂಪದ್ಭರಿತ ಮತ್ತು ಯಶಸ್ವೀ ದೇಶ. ಆ ನಿಟ್ಟಿನಲ್ಲಿ ಸಾಗುವುದಕ್ಕೆ ಆರೋಗ್ಯಕರ ಜೀವನ ವಿಧಾನ ಅಳವಡಿಸಿಕೊಳ್ಳಲು ಪ್ರೇರೇಪಿಸಲು ನರೇಂದ್ರ ಮೋದಿಯವರು ಎಲ್ಲಾ ಪ್ರಯತ್ನಗಳನ್ನೂ ಮಾಡಿದ್ದಾರೆ.

ಇದನ್ನೂ ಓದಿ: Mann Ki Baat: ಉದಯಿಸುತ್ತಿರುವ ಭಾರತೀಯ ಶಕ್ತಿಯಲ್ಲಿ 'ನಾರಿ ಶಕ್ತಿ' ಮಹತ್ವದ ಪಾತ್ರ ವಹಿಸುತ್ತಿದೆ: ಮೋದಿ ಶ್ಲಾಘನೆ

ಕೋವಿಡ್‌ ಸಂದರ್ಭದಲ್ಲಂತೂ ಮನ್‌ ಕೀ ಬಾತ್‌ ಕಾರ್ಯಕ್ರಮ ಬಹಳ ಮಹತ್ವದ ಪಾತ್ರವನ್ನು ನಿರ್ವಹಿಸಿದೆ. ಜಗತ್ತಿನಲ್ಲಿ ಕೋವಿಡ್‌ ವೈರಸ್‌ ಅನೇಕ ಕಷ್ಟಗಳನ್ನು ಜನತೆಗೆ ನೀಡಿದರೂ ನಮ್ಮ ದೇಶದ ಮೂಲೆ ಮೂಲೆಯಲ್ಲಿರುವ ಜನರ ಸ್ಥೈರ್ಯ ಧೈರ್ಯ ಹೆಚ್ಚಿಸುವಂತೆ ಮಾತನಾಡುತ್ತಾ, ವರ್ತಿಸುತ್ತಾ ದೇಶದ 130 ಕೋಟಿ ಜನರನ್ನು ಒಳಗೂಡಿಸಿಕೊಂಡು ಮುನ್ನಡೆಸಿ ಪ್ರಧಾನಿ ನರೇಂದ್ರ ಮೋದಿಯವರು ಕೋವಿಡ್‌ ವಿರುದ್ಧದ ಹೋರಾಟದಲ್ಲಿಯೂ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ: Mann Ki Baat: ಏಕತಾ ದಿನದ ಸ್ಪರ್ಧೆ ವಿಜೇತ ಚಾಮರಾಜನಗರ ಜಿಲ್ಲೆಯ ಮಂಜುನಾಥ್‌ಗೆ ಪ್ರಧಾನಿ ಮೋದಿ ಶ್ಲಾಘನೆ

click me!