64th National Rifle Shooting Championship ಕ್ರೀಡಾಕೂಟಕ್ಕೆ ಮಧ್ಯಪ್ರದೇಶ ಶೂಟಿಂಗ್ ಅಕಾಡಮಿ ಆತಿಥ್ಯ

By Suvarna News  |  First Published Nov 22, 2021, 4:28 PM IST

*  64ನೇ ರಾಷ್ಟ್ರೀಯ ರೈಫಲ್ ಶೂಟಿಂಗ್‌ ಚಾಂಪಿಯನ್‌ ಕೂಟಕ್ಕೆ ಮಧ್ಯಪ್ರದೇಶ ಆತಿಥ್ಯ

* ನವೆಂಬರ್ 25ರಿಂದ ಆರಂಭವಾಗಲಿರುವ ರಾಷ್ಟ್ರೀಯ ಶೂಟಿಂಗ್ ಕ್ರೀಡಾಕೂಟ

* ಅಧಿಕಾರಿಗಳು, ಕ್ರೀಡಾಪಟುಗಳು ಸೇರಿ 4,000 ಮಂದಿ ಬಾಗಿ


ಭೂಪಾಲ್(ನ.22): ಇಲ್ಲಿನ ಬಿಷನ್‌ಖೇಡಿಯ ಮಧ್ಯಪ್ರದೇಶ ಶೂಟಿಂಗ್ ಅಕಾಡಮಿಯಲ್ಲಿ (Madhya Pradesh Shooting Academy) ಇದೇ ನವೆಂಬರ್ 25ರಿಂದ ಆರಂಭವಾಗಲಿರುವ 64ನೇ ರಾಷ್ಟ್ರೀಯ ರೈಫಲ್ ಶೂಟಿಂಗ್‌ ಚಾಂಪಿಯನ್‌ನಲ್ಲಿ (64th National Rifle Shooting Championship) ಭಾರತದ ಹೊಸ ಶೂಟರ್‌ಗಳು ಬೆಳಕಿಗೆ ಬರುವ ಸಾಧ್ಯತೆಯಿದೆ. ಶೂಟರ್‌ಗಳು ಈಗಾಗಲೇ ಅಭ್ಯಾಸ ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಮಧ್ಯಪ್ರದೇಶದ ಕ್ರೀಡಾ ಸಚಿವರಾದ ಯಶೋದರ ರಾಜೆ ಸಿಂದಿಯಾ ಭೇಟಿ ನೀಡಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಟೂರ್ನಿಯ ಕುರಿತಂತೆ ಪರಿಚಯ: 
ರಾಷ್ಟ್ರೀಯ ರೈಫಲ್ ಶೂಟಿಂಗ್‌ ಚಾಂಪಿಯನ್‌ ಕ್ರೀಡಾಕೂಟವು ಕ್ರೀಡಾಸಚಿವಾಲಯ ಹಾಗೂ ನಾಷನಲ್ ರೈಫಲ್ ಅಸೋಸಿಯೇಷನ್ ಆಫ್‌ ಇಂಡಿಯಾ(NRAI) (National Rifle Association of India) ಸಹಭಾಗಿತ್ವದಲ್ಲಿ ಆಯೋಜನೆಗೊಂಡಿದೆ. ಈ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ಹಾಗೂ ಅಧಿಕಾರಿಗಳು ಸೇರಿ ದೇಶದ ಸುಮಾರು 4,000 ಮಂದಿ ಪಾಲ್ಗೊಳ್ಳುತ್ತಿದ್ದಾರೆ. ಶೂಟರ್‌ಗಳು ಮಧ್ಯಪ್ರದೇಶ ಶೂಟಿಂಗ್ ಅಕಾಡಮಿಯಲ್ಲಿ ಶೂಟಿಂಗ್‌ನಲ್ಲಿ ನಿರಂತರ ಗುರಿಯಿಡುವಲ್ಲಿ ತಲ್ಲೀನರಾಗಿದ್ದಾರೆ. ಈಗಾಗಲೇ ಹಲವು ಶೂಟರ್‌ಗಳು ಮಧ್ಯಪ್ರದೇಶ ಶೂಟಿಂಗ್ ಅಕಾಡಮಿಯಲ್ಲಿ ಅಭ್ಯಾಸ ನಡೆಸುತ್ತಿದ್ದರೆ, ಮತ್ತೆ ಕೆಲವು ಶೂಟರ್‌ಗಳು ಇನ್ನಷ್ಟೇ ಆಗಮಿಸಬೇಕಿದೆ.  

Tap to resize

Latest Videos

ಕ್ರೀಡಾಕೂಟದಲ್ಲಿ ಪಾಲ್ಗೊಂಡಿರುವ ಎಲ್ಲಾ ಶೂಟರ್‌ಗಳಿಗೆ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಕ್ರೀಡಾ ಸಚಿವೆ ಯಶೋದರ ರಾಜೆ ಸಿಂದಿಯಾ (Yashodhara Raje Scindia) ತಿಳಿಸಿದ್ದಾರೆ. ಇದೇ ವೇಳೆ ಅಭ್ಯಾಸ ನಡೆಸುತ್ತಿರುವ ಶೂಟರ್‌ಗಳಿಗೆ ತಮ್ಮ ಪ್ರದರ್ಶನದ ಪುನರಾವಲೋಕನ ಮಾಡುವುದಕ್ಕೆ ಅವಕಾಶ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ. ನಾಷನಲ್ ರೈಫಲ್ ಅಸೋಸಿಯೇಷನ್ ಆಫ್‌ ಇಂಡಿಯಾ, ಮಧ್ಯಪ್ರದೇಶ ಶೂಟಿಂಗ್ ಅಕಾಡಮಿಯಲ್ಲಿ 64ನೇ  ರಾಷ್ಟ್ರೀಯ ರೈಫಲ್ ಶೂಟಿಂಗ್‌ ಚಾಂಪಿಯನ್‌ ಟೂರ್ನಿ ಆಯೋಜಿಸುತ್ತಿರುವುದು ನಮ್ಮ ಪಾಲಿಗೆ ಒಂದು ರೀತಿಯ ಗೌರವದ ವಿಚಾರ. ಈ ಕ್ರೀಡಾಕೂಟ ಯಶಸ್ವಿಯಾಗಲು ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ. ಶೂಟರ್‌ಗಳಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಸಚಿವೆ ಯಶೋದರ ರಾಜೆ ಸಿಂದಿಯಾ ತಿಳಿಸಿದ್ದಾರೆ.

Indian National Basketball League: ಬಾಸ್ಕೆಟ್‌ಬಾಲ್ ಹಬ್ ಆಗಲಿದೆ ಕರ್ನಾಟಕ..!

ಮಧ್ಯಪ್ರದೇಶ ಶೂಟಿಂಗ್ ಅಕಾಡಮಿ ಕಿರು ಪರಿಚಯ:

ಮಧ್ಯಪ್ರದೇಶ ಶೂಟಿಂಗ್ ಅಕಾಡಮಿಯು ಒಳಾಂಗಣ ಸಂಪೂರ್ಣ ಹವಾನಿಯಂತ್ರಿತ ಸ್ಟೇಡಿಯಂ ಆಗಿದ್ದು (centralised air-conditioning), ಅಂತಾರಾಷ್ಟ್ರೀಯ ಕ್ರೀಡಾಕೂಟ ಆಯೋಜಿಸುವ ಎಲ್ಲಾ ಸಾಮರ್ಥ್ಯವನ್ನು ಹೊಂದಿದೆ. ಈ ಅಕಾಡಮಿಯಲ್ಲಿ ಡೋಪಿಂಗ್ ಟೆಸ್ಟ್ ಕೊಠಡಿ (dope test room), ಮೆಡಿಕಲ್ ರೂಂ (medical room), ಆಟಗಾರರ ಲಾಬಿ, ಪ್ರೆಸ್‌ ಕಾನ್ಫರೆನ್ಸ್‌ ರೂಂ, ಜಿಮ್‌ (Gym hall), ಡೈನಿಂಗ್ ಹಾಗೂ ಕಿಚನ್ ಹಾಲ್ ಹೊಂದಿದೆ. ಈ ಮಧ್ಯಪ್ರದೇಶ ಶೂಟಿಂಗ್ ಅಕಾಡಮಿಯು ಪ್ಲಾನಿಟೇರಿಯಂ, ನೀರು ಮರುಪೂರಣ ಮುಂತಾದ ವ್ಯವಸ್ಥೆಗಳನ್ನು ಹೊಂದಿದೆ.  

Indonesia Masters Badminton: ಆಕ್ಸಿಡೆಂಟ್ ಬಳಿಕ ಮೊದಲ ಪ್ರಶಸ್ತಿ ಗೆದ್ದ ಕೆಂಟೊ ಮೊಮೊಟೊ

2015ರಲ್ಲಿ ಅಕಾಡಮಿಗೆ ಕಾಯಕಲ್ಪ ನೀಡಲಾಗಿದ್ದು, ಶೂಟಿಂಗ್ ಕ್ರೀಡೆಯನ್ನು ಉತ್ತೇಜಿಸಲು ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸಲಾಗಿದೆ. ಮಧ್ಯಪ್ರದೇಶ ಸರ್ಕಾರವು ಭೂಪಲ್‌ನ ಗೋರಾ ಎನ್ನುವ ಗ್ರಾಮದಲ್ಲಿ 37.16 ಎಕರೆ ವಿಸ್ತೀರ್ಣದಲ್ಲಿ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಈ ಅಕಾಡಮಿಯಲ್ಲಿ 50 ಮೀಟರ್ ರೇಂಜ್‌ ಶೂಟಿಂಗ್, ಟ್ರ್ಯಾಕ್ ಮತ್ತು ಸ್ಕೀಟ್ ರೇಂಜ್ ವ್ಯವಸ್ಥೆಯು ಇದೆ. 

ಕಳೆದ ಆವೃತ್ತಿಯಲ್ಲಿ ಅಂದರೆ 2019ರಲ್ಲಿ ನಡೆದ 64ನೇ  ರಾಷ್ಟ್ರೀಯ ರೈಫಲ್ ಶೂಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ 20 ಚಿನ್ನ, 8 ಬೆಳ್ಳಿ ಹಾಗೂ 13 ಕಂಚಿನ ಪದಕ ಸಹಿತ 41 ಪದಕಗಳೊಂದಿಗೆ ಕ್ರೀಡಾಕೂಟದಲ್ಲಿ ಮಧ್ಯಪ್ರದೇಶ 6ನೇ ಸ್ಥಾನ ಪಡೆದಿತ್ತು. 

click me!