Indonesia Masters Badminton: ಆಕ್ಸಿಡೆಂಟ್ ಬಳಿಕ ಮೊದಲ ಪ್ರಶಸ್ತಿ ಗೆದ್ದ ಕೆಂಟೊ ಮೊಮೊಟೊ

By Suvarna NewsFirst Published Nov 22, 2021, 9:51 AM IST
Highlights

* ಇಂಡೋನೇಷ್ಯಾ ಮಾಸ್ಟರ್ಸ್‌ನಲ್ಲಿ ಕೆಂಟೊ ಮೊಮೊಟೊ ಚಾಂಪಿಯನ್‌

* 2020ರಲ್ಲಿ ನಡೆದ ಆಕ್ಸಿಡೆಂಟ್ ಬಳಿಕ ಮೊದಲ ಪ್ರಶಸ್ತಿ ಗೆದ್ದ ಜಪಾನ್ ಶಟ್ಲರ್

* ಮಹಿಳಾ ವಿಭಾಗದಲ್ಲಿ ಕೊರಿಯಾದ ಆ್ಯನ್‌ ಸೆಯಂಗ್‌ ಚಾಂಪಿಯನ್‌

ಬಾಲಿ(ನ.22): 2020ರ ಜನವರಿಯಲ್ಲಿ ಕಾರು ಅಪಘಾತದಲ್ಲಿ (Car Accident) ಪ್ರಾಣಾಪಾಯದಿಂದ ಪಾರಾಗಿದ್ದ ವಿಶ್ವ ನಂ.1 ಬ್ಯಾಡ್ಮಿಂಟನ್‌ ಆಟಗಾರ, ಜಪಾನ್‌ನ ಕೆಂಟೊ ಮೊಮೊಟಾ (Kento Momota) ಅಪಘಾತದಿಂದ ಚೇತರಿಸಿಕೊಂಡ ಬಳಿಕ ಮೊದಲ ಪ್ರಶಸ್ತಿ ಜಯಿಸಿದ್ದಾರೆ. 

ಭಾನುವಾರ ಮುಕ್ತಾಯಗೊಂಡ ಇಂಡೋನೇಷ್ಯಾ ಮಾಸ್ಟ​ರ್ಸ್‌ ಟೂರ್ನಿಯ (Indonesia Masters Badminton Tournament) ಪುರುಷರ ಸಿಂಗಲ್ಸ್‌ ಚಾಂಪಿಯನ್‌ ಆಗಿ ಮೊಮೊಟಾ ಹೊರಹೊಮ್ಮಿದರು. ಫೈನಲ್‌ನಲ್ಲಿ ಡೆನ್ಮಾರ್ಕ್ನ (Denmark) ಆ್ಯಂಡೆ​ರ್ಸ್‌ ಆ್ಯಂಟೋನ್ಸೆನ್‌ (Anders Antonsen) ವಿರುದ್ಧ ಮೊಮಟಾ 21-17, 21-11 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಕಳೆದ ವರ್ಷ ಮಲೇಷಿಯಾ ಮಾಸ್ಟರ್ಸ್‌(Malaysian Masters) ಟ್ರೋಫಿ ಜಯಿಸಿದ ಬಳಿಕ ಕೌಲಲಾಂಪುರ ಏರ್‌ಪೋರ್ಟ್‌ (Kuala Lumpur airport) ನತ್ತ ತೆರಳುತ್ತಿದ್ದಾಗ ಕೆಂಟೊ ಮೊಮೊಟಾ ಅಪಘಾತಕ್ಕೊಳಗಾಗಿದ್ದರು. ಮೊಮೊಟೊ ಪ್ರಯಾಣಿಸುತ್ತಿದ್ದ ವ್ಯಾನ್‌ಗೆ ಹಿಂದಿನಿಂದ ಜೋರಾಗಿ ಬಂದು ಲಾರಿ ಡಿಕ್ಕಿ ಹೊಡೆದಿತ್ತು. ಈ ಸಂದರ್ಭದಲ್ಲಿ ಮೊಮೊಟೊ ಪ್ರಯಾಣಿಸುತ್ತಿದ್ದ ವ್ಯಾನ್ ಡ್ರೈವರ್ ನಿಧನರಾಗಿದ್ದರು. ಅದೃಷ್ಟವಶಾತ್ ಮೊಮೊಟೊ ಪ್ರಾಣಾಪಾಯದಿಂದ ಪಾರಾಗಿದ್ದರು. 

Indonesia Badminton Tournament : ಸಿಂಧು, ಶ್ರೀಕಾಂತ್‌, ಲಕ್ಷ್ಯಾ ಸೇನ್ ಪದಕದ ಭರವಸೆ!

ಮಹಿಳಾ ಸಿಂಗಲ್ಸ್‌ ಫೈನಲ್‌ನಲ್ಲಿ ಜಪಾನ್‌ನ ಅಕನೆ ಯಮಗುಚಿ (Akane Yamaguchi) ವಿರುದ್ಧ 21-17, 21-19 ಗೇಮ್‌ಗಳಲ್ಲಿ ಗೆದ್ದ ಕೊರಿಯಾದ ಆ್ಯನ್‌ ಸೆಯಂಗ್‌ ಚಾಂಪಿಯನ್‌ ಪಟ್ಟ ಅಲಂಕರಿಸಿದರು. ಇನ್ನು ಭಾರತದ ತಾರಾ ಬ್ಯಾಡ್ಮಿಂಟನ್ ಪಟುಗಳಾದ 2 ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ. ಸಿಂಧು (PV Sindhu), ಮಾಜಿ ವಿಶ್ವ ನಂ.1 ಬ್ಯಾಡ್ಮಿಂಟನ್ ಪಟು ಕಿದಂಬಿ ಶ್ರೀಕಾಂತ್ (Kidambi Srikanth) ಹೋರಾಟ ಸೆಮಿಫೈನಲ್‌ನಲ್ಲೇ ಅಂತ್ಯವಾಗಿತ್ತು.

ಪ್ಯಾರಾ ಬ್ಯಾಡ್ಮಿಂಟನ್‌: ಚಿನ್ನ ಗೆದ್ದ ಮನೋಜ್‌

ಕಂಪಾಲಾ(ಉಗಾಂಡ): ಟೋಕಿಯೋ ಪ್ಯಾರಾಲಿಂಪಿಕ್ಸ್‌ (Tokyo Paralympics) ಬಳಿಕ ನಡೆದ ಮೊದಲ ಅಂತಾರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ (Para Badminton Tournament) ಭಾರತದ ಶಟ್ಲರ್‌ಗಳು ಉತ್ತಮ ಪ್ರದರ್ಶನ ತೋರಿದ್ದಾರೆ. 

ಮನೋಜ್‌ ಸರ್ಕಾರ್‌, ಸುಕಾಂತ್‌ ಕದಂ ಚಿನ್ನದ ಪದಕ ಜಯಿಸಿದರೆ, ಮೂರು ವಿಭಾಗಗಳಲ್ಲಿ ಫೈನಲ್‌ ಪ್ರವೇಶಿಸಿದ್ದ ಖೇಲ್‌ ರತ್ನ ಪ್ರಶಸ್ತಿ ವಿಜೇತ ಪ್ರಮೋದ್‌ ಭಗತ್‌ ಮೂರರಲ್ಲೂ ಸೋತು ಬೆಳ್ಳಿ ಪದಕಗಳಿಗೆ ತೃಪ್ತಿಪಟ್ಟರು. ಎಲ್‌ಎಲ್‌4 ವಿಭಾಗದ ಫೈನಲ್‌ನಲ್ಲಿ ಕದಂ, ಭಾರತದವರೇ ಆದ ನೀಲೇಶ್‌ ಬಾಲು ವಿರುದ್ಧ ಗೆದ್ದರೆ, ಎಸ್‌ಎಲ್‌3 ವಿಭಾಗದಲ್ಲಿ ಮನೋಜ್‌, ತಮ್ಮ ಡಬಲ್ಸ್‌ ಜೊತೆಗಾರ ಭಗತ್‌ ವಿರುದ್ಧ ಜಯಿಸಿದರು. ಡಬಲ್ಸ್‌ ವಿಭಾಗದಲ್ಲೂ ಭಾರತೀಯರು ಪದಕ ಜಯಿಸಿದರು.

ISL 2021-22 : ಜಮ್ಶೆಡ್‌ಪುರ, ಈಸ್ಟ್‌ಬೆಂಗಾಲ್‌ ಪಂದ್ಯ ಡ್ರಾ

ಮಾರ್ಗೋ: ನೆರಿಜುಸ್‌ ವಾಲ್ಕಿಸ್‌ ಬಾರಿಸಿದ ಸ್ವಂತ ಗೋಲಿನ ಪರಿಣಾಮ ಜಮ್ಶೆಡ್‌ಪುರ ಎಫ್‌ಸಿ ವಿರುದ್ಧದ ಐಎಸ್‌ಎಲ್‌ ಪಂದ್ಯವನ್ನು ಈಸ್ಟ್‌ ಬೆಂಗಾಲ್‌ ಕ್ಲಬ್‌ ತಂಡ 1-1 ಗೋಲಿನಲ್ಲಿ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಪಂದ್ಯದ 18ನೇ ನಿಮಿಷದಲ್ಲೇ ಜಮ್ಶೆಡ್‌ಪುರದ ವಾಲ್ಕಿಸ್‌ ಸ್ವಂತ ಗೋಲು ಬಾರಿಸಿ, ಈಸ್ಟ್‌ ಬೆಂಗಾಲ್‌ 1-0 ಮುನ್ನಡೆ ಪಡೆಯಲು ಕಾರಣರಾದರು.

ISL 2021-22‌: ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ಮಣಿಸಿ ಬೆಂಗಳೂರು ಎಫ್‌ಸಿ ಶುಭಾರಂಭ

ಬಳಿಕ 45(+6)ನೇ ನಿಮಿಷದಲ್ಲಿ ಪೀಟರ್‌ ಹಾಟ್ರ್ಲೆ ಬಾರಿಸಿದ ಗೋಲಿನ ನೆರವಿನಿಂದ ಜಮ್ಶೆಡ್‌ಪುರ ಸಮಬಲ ಸಾಧಿಸಿತು. ದ್ವಿತೀಯಾರ್ಧದಲ್ಲಿ ಎರಡೂ ತಂಡಗಳು ಗೋಲು ಗಳಿಸಲು ವಿಫಲವಾದವು. ಈ ಕಾರಣ ಎರಡೂ ತಂಡಗಳಿಗೆ ತಲಾ 1 ಅಂಕ ಹಂಚಲಾಯಿತು. ಸೋಮವಾರ ಮುಂಬೈ ಸಿಟಿ ಎಫ್‌ಸಿ (Mumbai City FC) ಹಾಗೂ ಎಫ್‌ಸಿ ಗೋವಾ (FC Goa) ತಂಡಗಳು ಸೆಣಸಲಿವೆ.

click me!