ಪ್ರತಿಭಾನ್ವಿತ ಬಡ ಸೈಕ್ಲಿಸ್ಟ್‌ಗೆ ಕರ್ನಾಟಕ ಸರ್ಕಾರದಿಂದ 5 ಲಕ್ಷ ರೂ ಮೌಲ್ಯದ ಸೈಕಲ್

By Kannadaprabha News  |  First Published Sep 25, 2021, 9:17 AM IST

* ಬಡಪ್ರತಿಭಾನ್ವಿತ ಸೈಕ್ಲಿಸ್ಟ್‌ಗೆ ನೆರವಾದ ಕರ್ನಾಟಕ ರಾಜ್ಯ ಸರ್ಕಾರ

* ಕೆಲವೇ ದಿನಗಳಲ್ಲಿ 5 ಲಕ್ಷ ರೂ ಮೌಲ್ಯದ ಸೈಕಲ್ ವಿತರಿಸಿದ ಸಿಎಂ ಬೊಮ್ಮಾಯಿ

* ರಾಜ್ಯ ಮತ್ತು ರಾಷ್ಟ್ರಮಟ್ಟದ ಸೈಕ್ಲಿಂಗ್‌ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಿದ ಪವಿತ್ರಾ


ಬೆಂಗಳೂರು(ಸೆ.25): ಗದಗ ಜಿಲ್ಲೆಯ ರಾಷ್ಟ್ರಮಟ್ಟದ ಸೈಕ್ಲಿಂಗ್‌(Cycling) ಕ್ರೀಡಾಪಟು ಪವಿತ್ರಾ ಕುರ್ತಕೋಟಿ ಅವರಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಐದು ಲಕ್ಷ ರುಪಾಯಿ ಮೌಲ್ಯದ ಸೈಕಲ್‌ ವಿತರಿಸಿದರು.

ವಿಧಾನಸೌಧ(VidhanaSoudha)ದ ಮುಂದೆ ಶುಕ್ರವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದೇಶದಿಂದ ತರಿಸಿದ ಸೈಕಲ್‌ (ಎರ್‌ಗೊನ್‌-18E119) ನೀಡಿದ ಅವರು, ಪವಿತ್ರಾ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ಚಿನ್ನದ ಪದಕ ಗೆಲ್ಲಲಿ ಎಂದು ಮುಖ್ಯಮಂತ್ರಿ ಬಸವಾರಾಜ ಬೊಮ್ಮಾಯಿ(Basavaraj Bommai) ಶುಭ ಕೋರಿದರು.

ಖೇಲೋ ಇಂಡಿಯಾ ಟೀಮ್‌ನ ಸೈಕ್ಲಿಸ್ಟ್, ರಾಜ್ಯದ ಪವಿತ್ರಾ ಕುರ್ತಕೋಟಿಗೆ ಸಿಎಂ ಅತ್ಯಾಧುನಿಕ ಸೈಕಲ್ ಹಸ್ತಾಂತರಿಸಿದರು. ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಲು ಅಗತ್ಯವಿದ್ದ ಈ ಸೈಕಲನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನೀಡಲಾಗಿದೆ.
1/2 pic.twitter.com/3Pze153Q3C

— Dr.Narayana Gowda / ಡಾ.ನಾರಾಯಣ ಗೌಡ (@narayanagowdakc)

ಸಚಿವರಾದ , , , , ಬಿ.ಡಿ.ಎ.ಅಧ್ಯಕ್ಷ , ಯೋಜನಾ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಮೊದಲಾದವರು ಉಪಸ್ಥಿತರಿದ್ದರು. (2/2)

— Dr.Narayana Gowda / ಡಾ.ನಾರಾಯಣ ಗೌಡ (@narayanagowdakc)

Tap to resize

Latest Videos

ನಂತರ ಮಾತನಾಡಿದ ಅವರು, ರಾಜ್ಯ ಮತ್ತು ರಾಷ್ಟ್ರಮಟ್ಟದ ಸೈಕ್ಲಿಂಗ್‌ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಿದ ಪವಿತ್ರಾ ಪಟಿಯಾಲದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಲು ಪವಿತ್ರಾಳಿಗೆ ಗುಣಮಟ್ಟದ ಸೈಕಲ್‌ ಅವಶ್ಯಕತೆ ಇದ್ದದ್ದು ಅರಿತು ಈ ಬಗ್ಗೆ ಕೂಡಲೇ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೆ. ಕೇವಲ ಎಂಟೇ ದಿನದಲ್ಲಿ ವಿದೇಶದಿಂದ ಸೈಕಲ್‌ ತರಿಸಿ ಕೊಡಲಾಗಿದೆ ಎಂದು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್‌ ಕಾರ್ಯವನ್ನು ಶ್ಲಾಘಿಸಿದರು.

ನಾಯಿ ಮರಿ ಗಿಫ್ಟ್ ಕೊಡೋ ವಸ್ತುವಲ್ಲ, ನೀರಜ್‌ಗೆ ಉಡುಗೊರೆ ನೀಡಿದ ಬಿಂದ್ರಾಗೆ ನೆಟ್ಟಿಗರ ಕ್ಲಾಸ್!

ವಿಜಯಪುರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ವೆಲೋಡ್ರೋಮ್‌ (ಸೈಕಲ್‌ ಟ್ರ್ಯಾಕ್‌) ನಿರ್ಮಿಸಲಾಗಿದೆ. ಅದನ್ನು ಶೀಘ್ರವೇ ವೃತ್ತಿಪರ ಸೈಕ್ಲಿಸ್ಟ್‌ಗಳು ತರಬೇತಿ ನಡೆಸಲು ಮುಕ್ತಗೊಳಿಸಲಾಗುವುದು ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ಸಚಿವರಾದ ಡಾ.ನಾರಾಯಣಗೌಡ, ಸಿ.ಸಿ.ಪಾಟೀಲ್‌, ಸಚಿವ ವಿ.ಸೋಮಣ್ಣ, ಎಸ್‌.ಟಿ.ಸೋಮಶೇಖರ್‌, ಬಿ.ಶ್ರೀರಾಮುಲು, ಬಿಡಿಎ ಅಧ್ಯಕ್ಷ ಎಸ್‌.ಆರ್‌. ವಿಶ್ವನಾಥ, ಶಾಸಕ ರವಿಕುಮಾರ್‌, ಡಾ.ಶಾಲಿನಿ ರಜನೀಶ್‌ ಮತ್ತಿತರರು ಉಪಸ್ಥಿತರಿದ್ದರು.

ಬಡತನದಲ್ಲಿ ಅರಳಿದ ಸಾಧಕಿ ಪವಿತ್ರಾ

ಗದಗ ಜಿಲ್ಲೆ ಶಿರಹಟ್ಟಿತಾಲೂಕಿನ ಕಡಕೋಳ ಗ್ರಾಮದ ಅಶೋಕ್‌ ಮತ್ತು ರೇಣುಕಾ ದಂಪತಿಯ ಪುತ್ರಿ ಪವಿತ್ರಾ. ಬಡಕುಟುಂಬದಲ್ಲಿ ಬೆಳೆದ ಪವಿತ್ರಾ ಅವರು ವಿವಿಧೆಡೆ ನಡೆದ ಸೈಕ್ಲಿಂಗ್‌ ಸ್ಪರ್ಧೆಗಳಲ್ಲಿ 2018ರಲ್ಲಿ 5ನೇ ಸ್ಥಾನ, 2019ರಲ್ಲಿ 9ನೇ ಸ್ಥಾನ, 2021ರಲ್ಲಿ ಎರಡು ಪ್ರತ್ಯೇಕ ಸ್ಪರ್ಧೆಗಳಲ್ಲಿ 3ನೇ ಸ್ಥಾನ ಪಡೆದಿದ್ದಾರೆ. ಈಗ ರಾಷ್ಟ್ರಮಟ್ಟದ ಕ್ರೀಡಾ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ.

click me!