ಭಾರತೀಯ ಬಾಕ್ಸರ್’ಗಳಾದ ಮೇರಿ ಕೋಮ್-ನಿಖತ್ ಜರೀನ್ ವಿವಾದದಲ್ಲಿ ಮಧ್ಯ ಪ್ರವೇಶಿಸಿದ್ದ ಒಲಿಂಪಿಕ್ ಪದಕ ವಿಜೇತ ಅಭಿನವ್ ಬಿಂದ್ರಾ ವಿರುದ್ಧ ಮೇರಿ ಕಿಡಿಕಾರಿದ್ದಾರೆ. ಈ ವಿವಾದದ ಒಂದು ಪಕ್ಷಿ ನೋಟ ಇಲ್ಲಿದೆ ನೋಡಿ...
ನವದೆಹಲಿ[ಅ.20]: ನಿಖತ್‌ಗೆ ಸಾಮರ್ಥ್ಯ ಸಾಬೀತು ಪಡಿಸಲು ಅವಕಾಶ ನೀಡಬೇಕು ಎಂದಿದ್ದ ಒಲಿಂಪಿಕ್ಸ್ ಚಿನ್ನ ವಿಜೇತ ಶೂಟರ್ ಅಭಿನವ್ ಬಿಂದ್ರಾ ವಿರುದ್ಧ ಮೇರಿ ಕೋಮ್ ಕಿಡಿಕಾರಿದ್ದಾರೆ.
‘ಬಿಂದ್ರಾಗೆ ಬಾಕ್ಸಿಂಗ್ ಬಗ್ಗೆ ಏನು ಗೊತ್ತು. ಬಾಕ್ಸಿಂಗ್‌ನಲ್ಲಿ ಅಂಕ ಹೇಗೆ ಗಳಿಸುತ್ತಾರೆ ಎನ್ನುವುದು ಅವರಿಗೆ ಗೊತ್ತಿಲ್ಲ. ಅನವಶ್ಯಕವಾಗಿ ಅವರು ಮೂಗು ತೂರಿಸಬಾರದು. ನಾನು ಶೂಟಿಂಗ್ ಬಗ್ಗೆ ಮಾತನಾಡಿದ್ದೇನಾ. ಶೂಟಿಂಗ್‌ನಲ್ಲಿ ಪ್ರತಿ ಬಾರಿಯೂ ಆಯ್ಕೆ ಟ್ರಯಲ್ಸ್ ಇರುತ್ತದೆಯೇ’ ಎಂದು ಮೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
undefined
ಪ್ರೊ ಕಬಡ್ಡಿ ಫೈನಲ್: ಬೆಂಗಾಲ್ ವಾರಿಯರ್ಸ್ ಚಾಂಪಿಯನ್
ನಿಖತ್ ಜರೀನ್ ಯಾರೆಂದೇ ಗೊತ್ತಿಲ್ಲ..!
ಭಾರತೀಯ ಬಾಕ್ಸಿಂಗ್‌ನಲ್ಲಿ ಹೊಸ ವಿವಾದ ತಲೆ ಎತ್ತಿದೆ. ದಿಗ್ಗಜ ಬಾಕ್ಸರ್ ಮೇರಿ ಕೋಮ್ ಹಾಗೂ ಯುವ ಬಾಕ್ಸರ್ ನಿಖತ್ ಜರೀನ್ ನಡುವಿನ ಕಿತ್ತಾಟ ತಾರಕಕ್ಕೇರಿದೆ.
ಒಲಿಂಪಿಕ್ಸ್ ಅರ್ಹತಾ ಸುತ್ತಿಗೆ ಆಯ್ಕೆ ಟ್ರಯಲ್ಸ್ ನಡೆಸುವಂತೆ ಜರೀನ್ ಒತ್ತಾಯಿಸುತ್ತಿದ್ದು, 51 ಕೆ.ಜಿ ವಿಭಾಗದಲ್ಲಿ ಮೇರಿಗೆ ನೇರ ಪ್ರವೇಶವನ್ನು ಪ್ರಶ್ನಿಸಿದ್ದಾರೆ. ಇದಕ್ಕಾಗಿಯೇ ನಿಖತ್, ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜುಗೂ ಪತ್ರ ಬರೆದಿದ್ದರು. ಶನಿವಾರ ಮೇರಿ ಈ ವಿವಾದವನ್ನು ಮತ್ತೊಂದು ಹೆಜ್ಜೆ ಮುಂದಕ್ಕೆ ಕೊಂಡೊಯ್ದಿದ್ದಾರೆ.
ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಕಂಚು ಗೆದ್ದ ಮೇರಿ ಕೋಮ್
ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುವ ವೇಳೆ ಮೇರಿ, ‘ಜರೀನ್ ಯಾರೆಂದೇ ನನಗೆ ಗೊತ್ತಿಲ್ಲ. ನಾನು ವಿಶ್ವ ಚಾಂಪಿಯನ್ಶಿಪ್ನಲ್ಲಿ 6 ಚಿನ್ನ ಸೇರಿ 8 ಪದಕ ಗೆದ್ದಿದ್ದೇನೆ. ಯಾರು ಬೇಕು ಎನ್ನುವುದನ್ನು ಬಾಕ್ಸಿಂಗ್ ಫೆಡರೇಷನ್ ನಿರ್ಧರಿಸಲಿ. ಆಕೆಯನ್ನು ಎದುರಿಸಲು ನನಗೇನು ಭಯವಿಲ್ಲ. ಟ್ರಯಲ್ಸ್ ಒಂದು ಔಪಚಾರಿಕ ಪಂದ್ಯವಾಗಲಿದೆ ಅಷ್ಟೆ. ಆಕೆ ಅವಕಾಶಕ್ಕಾಗಿ ಈ ರೀತಿ ಅಳುವುದು ಎಷ್ಟು ಸರಿ. ಆಕೆಯನ್ನು ನಾನು ಹಲವು ಬಾರಿ ಸೋಲಿಸಿದ್ದೇನೆ. ಆದರೂ ಮತ್ತೆ ಮತ್ತೆ ಈ ರೀತಿ ಸವಾಲು ಹಾಕುತ್ತಿದ್ದಾಳೆ’ ಎಂದು ಮೇರಿ ಹೇಳಿದ್ದಾರೆ.
ನಿಖತ್-ಮೇರಿ ವಿವಾದ: ಮಧ್ಯಸ್ಥಿಕೆ ಇಲ್ಲ: ರಿಜಿಜು
ಒಲಿಂಪಿಕ್ ಅರ್ಹತಾ ಸುತ್ತಿಗೆ ತಂಡ ಆಯ್ಕೆ ಮಾಡುವ ಮೊದಲು ಮೇರಿ ಕೋಮ್ ವಿರುದ್ಧ ಟ್ರಯಲ್ಸ್ ಪಂದ್ಯವಾಡಿಬೇಕು ಎಂದು ಯುವ ಬಾಕ್ಸರ್ ನಿಖತ್ ಜರೀನ್ ಬರೆದಿದ್ದ ಪತ್ರಕ್ಕೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಉತ್ತರಿಸಿದ್ದಾರೆ. ಈ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಲು ಸಾಧ್ಯವಿಲ್ಲ ಎಂದು ರಿಜಿಜು ಸ್ಪಷ್ಟಪಡಿಸಿದ್ದಾರೆ.
‘ಒಲಿಂಪಿಕ್ ಸಂಸ್ಥೆ ನಿಯಮದ ಪ್ರಕಾರ ಸ್ವತಂತ್ರ ಸಂಸ್ಥೆಗಳ ಆಯ್ಕೆ ವಿಚಾರದಲ್ಲಿ ಸರ್ಕಾರ ತಲೆ ಹಾಕುವಂತಿಲ್ಲ. ಹೀಗಾಗಿ ಮಧ್ಯಸ್ಥಿಕೆ ವಹಿಸಲು ಸಾಧ್ಯವಿಲ್ಲ. ಆದರೆ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಭಾರತೀಯ ಬಾಕ್ಸಿಂಗ್ ಫೆಡರೇಷನ್ ಬಳಿ ಕೇಳಿಕೊಳ್ಳುತ್ತೇನೆ’ ಎಂದು ರಿಜಿಜು ಹೇಳಿದ್ದಾರೆ.
ಮೇರಿ ಸ್ಪರ್ಧಿಸುವ 51 ಕೆ.ಜಿ ವಿಭಾಗದಲ್ಲೇ ಜರೀನ್ ಸಹ ಸ್ಪರ್ಧಿಸಲಿದ್ದು, ಭಾರತ ತಂಡದಲ್ಲಿ ಸ್ಥಾನಕ್ಕಾಗಿ ಇಬ್ಬರ ನಡುವೆ ಹಲವು ದಿನಗಳಿಂದ ಪೈಪೋಟಿ ಇದೆ. ಮೇರಿ ತಾರಾ ಬಾಕ್ಸರ್ ಆಗಿರುವ ಕಾರಣ, ಅವರಿಗೆ ಅವಕಾಶ ಸಿಗುತ್ತಿದೆ ಎಂದು ಜರೀನ್ ಆರೋಪಿಸಿದ್ದಾರೆ.