ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತದ ಮೂವರು ಪ್ರತಿಭಾನ್ವಿತ ಶೂಟರ್‌ಗಳು ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ(ಮಾ.20): ಟೋಕಿಯೋ ಒಲಿಂಪಿಕ್‌ಗೆ ಅರ್ಹತೆ ಪಡೆದಿರುವ ದಿವ್ಯಾನ್‌್ಶ ಪನ್ವಾರ್, ಅಂಜುಮ್ ಮೌದ್ಗಿಲ್ ಹಾಗೂ ಯುವ ಶೂಟರ್ ಅರ್ಜುನ್ ಬಬುತಾ, ಇಲ್ಲಿ ಶುಕ್ರವಾರದಿಂದ ಆರಂಭಗೊಂಡ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
ಪುರುಷರ ವಿಭಾಗದ ಅರ್ಹತಾ ಸುತ್ತಿನಲ್ಲಿ 18 ವರ್ಷದ ಪನ್ವಾರ್ 629.1 ಅಂಕ ಗಳಿಸಿ 6ನೇ ಸ್ಥಾನ ಪಡೆದರೆ, ಕಿರಿಯರ ವಿಶ್ವಕಪ್ ಕಂಚು ವಿಜೇತ ಅರ್ಜುನ್, 631.8 ಅಂಕಗಳೊಂದಿಗೆ 3ನೇ ಸ್ಥಾನ ಗಳಿಸಿದರು. ದಿವ್ಯಾನ್ಶ್ ಪನ್ವಾರ್ ಹಾಗೂ ಯುವ ಶೂಟರ್ ಅರ್ಜುನ್ ಬಬುತಾ ಈಗಾಗಲೇ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಯನ್ನು ಗಿಟ್ಟಿಸಿಕೊಂಡಿದ್ದು, ಭರ್ಜರಿ ತಯಾರಿ ನಡೆಸಿದ್ದಾರೆ. ಮಹಿಳೆಯರ ವಿಭಾಗದ ಅರ್ಹತಾ ಸುತ್ತಿನಲ್ಲಿ ಅಂಜುಮ್ 629.6 ಅಂಕಗಳೊಂದಿಗೆ 2ನೇ ಸ್ಥಾನ ಪಡೆದು ಫೈನಲ್‌ಗೇರಿದರು. ಶನಿವಾರ ಫೈನಲ್ ನಡೆಯಲಿದೆ.
ಇಂದಿನಿಂದ ದಿಲ್ಲಿಯಲ್ಲಿ ಶೂಟಿಂಗ್ ವಿಶ್ವಕಪ್ ಆರಂಭ
ಐಎಸ್‌ಎಸ್‌ಎಫ್ ವಿಶ್ವಕಪ್ ಟೂರ್ನಿಯಲ್ಲಿ 53 ದೇಶದ 294 ಅಥ್ಲೀಟ್‌ಗಳು ಪಾಲ್ಗೊಂಡಿದ್ದು, ಕೊರೋನಾ ಹಾಗೂ ಲಾಕ್‌ಡೌನ್ ಬಳಿಕ ಭಾರತದಲ್ಲಿ ನಡೆಯುತ್ತಿರುವ ಅತಿದೊಡ್ಡ ಬಹುರಾಷ್ಟ್ರಗಳ ಕ್ರೀಡಾಕೂಟ ಇದಾಗಿದೆ. ಭಾರತದಿಂದ 57 ಅಥ್ಲೀಟ್‌ಗಳು ಈ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ.