ರಾಷ್ಟ್ರೀಯ ಕ್ರೀಡಾಕೂಟ: ಹಿಮಾ ದಾಸ್ ಹಿಂದಿಕ್ಕಿ ಪಿಟಿ ಉಶಾ ದಾಖಲೆ ಮುರಿದ ಧನಲಕ್ಷ್ಮಿ!

By Suvarna NewsFirst Published Mar 19, 2021, 8:17 PM IST
Highlights

ರಾಷ್ಟ್ರೀಯ ಹಿರಿಯರ ಅಥ್ಲೇಟಿಕ್ಸ್ ಕೂಟದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ತಮಿಳುನಾಡಿನ ಧನಲಕ್ಷ್ಮಿ ಓಟಕ್ಕೆ ಹಿಮಾದಾಸ್ ಹಿನ್ನಡೆ ಅನುಭವಿಸಿದ್ದರೆ, ಪಿಟಿ ಉಶಾ ದಾಖಲೆ ಮುರಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿವೆ.

ಪಂಜಾಬ್(ಮಾ.19):  ತಮಿಳುನಾಡಿನ ಧನಲಕ್ಷ್ಮಿ ಭಾರತದ ಅಥ್ಲೆಟಿಕ್ಸ್ ಕೂಟದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಫೆಡರೇಶನ್ ಕಪ್ ರಾಷ್ಟ್ರೀಯ ಹಿರಿಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ 200 ಮೀಟರ್ ಓಟದ ಸೆಮಿಫೈನಲ್‌ನಲ್ಲಿ ಧನಲಕ್ಷ್ಮಿ 23.26 ಸೆಕೆಂಡ್‌ನಲ್ಲಿ ಪೂರೈಸಿದ್ದಾರೆ. ಈ ಮೂಲಕ ಹಿಮಾದಾಸ್ ಹಿಂದಿಕ್ಕಿ ಮೊದಲ ಸ್ಥಾನ ಪಡೆದಿದ್ದಾರೆ.

ಒಲಿಂಪಿಕ್ಸ್‌ಗೆ ತಯಾರಾಗಲು ಆಥ್ಲೀಟ್‌ಗೆ ಶೂ ಕೊಡಿಸಿದ ಸೋನು ಸೂದ್

ಧನಲಕ್ಷ್ಮಿ ಹಿಮಾದಾಸ್ ಹಿಂದಿಕ್ಕಿ ಮೊದಲ ಸ್ಥಾನ ಪಡೆದಿರುವುದು ಮಾತ್ರವಲ್ಲ, 1998ರಲ್ಲಿ 22.80 ಸೆಕೆಂಡ್‌ನಲ್ಲಿ 200 ಮೀಟರ್ ಪೂರೈಸಿದ್ದರು. ಇದೀಗ ಈ ದಾಖಲೆಯನ್ನು ಧನಲಕ್ಷ್ಮಿ ಹಿಂದಿಕ್ಕಿದ್ದಾರೆ. 100 ಮೀಟರ್ ಓಟದ ಫೈನಲ್ ಪಂದ್ಯದಲ್ಲಿ ದ್ಯುತಿ ಚಾಂದ್ ಮಣಿಸಿದ್ದ ಧನಲಕ್ಷ್ಮಿ ಇದೀಗ ರಾಷ್ಟ್ರೀಯ ಹಿರಿಯ ಕ್ರೀಡಾಕೂಟದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ದೇಶದ ಹೆಮ್ಮೆ ಹಿಮಾ ದಾಸ್‌ ಡಿಎಸ್‌ಪಿಯಾಗಿ ಅಧಿಕಾರ ಸ್ವೀಕಾರ..!.

ಎರಡು ವರ್ಷಗಳ ಹಿಂದೆ ನಡೆದ ಫೆಡರೇಶನ್ ಕಪ್‌ನಲ್ಲಿ ಮೂರನೇ ಸ್ಥಾನ ಗಳಿಸಿದಾಗ 24.05 ಸೆಕೆಂಡುಗಳಲ್ಲಿ ಗುರಿ ತಲುಪಿದ್ದ ಧನಲಕ್ಷ್ಮಿ ಜನವರಿ 24 ರಂದು ಶಿವಕಾಸಿಯಲ್ಲಿ ನಡೆದ ತಮಿಳುನಾಡು ರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ 23.47 ಸೆಕೆಂಡ್‌ನಲ್ಲಿ ಪೂರೈಸಿ ದಾಖಲೆ ಬರೆದಿದ್ದರು.

click me!