ಶೂಟಿಂಗ್‌ ವಿಶ್ವಕಪ್‌: ಮುಂದುವರೆದ ಭಾರತದ ಪ್ರಾಬಲ್ಯ

Published : Mar 28, 2021, 08:41 AM IST
ಶೂಟಿಂಗ್‌ ವಿಶ್ವಕಪ್‌: ಮುಂದುವರೆದ ಭಾರತದ ಪ್ರಾಬಲ್ಯ

ಸಾರಾಂಶ

ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತದ  ಪ್ರಾಬಲ್ಯ ಮುಂದುವರೆದಿದ್ದು, ಕೂಟದಲ್ಲಿ 13 ಚಿನ್ನದೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ನವದೆಹಲಿ(ಮಾ.28): ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತದ ಪಾರಮ್ಯ ಮುಂದುವರೆದಿದ್ದು, ಶನಿವಾರ ಸಹ ಒಂದು ಚಿನ್ನದ ಪದಕವನ್ನು ಬೇಟೆಯಾಡಿದೆ.

ಭಾರತೀಯ ಶೂಟರ್‌ಗಳಾದ ವಿಜಯವೀರ್‌ ಸಿಧು ಮತ್ತು ತೇಜಸ್ವಿನಿ ಐಎಸ್‌ಎಸ್‌ಎಫ್‌ ವಿಶ್ವಕಪ್‌ 25 ಮೀಟರ್‌ ರ‍್ಯಾಪಿಡ್‌ ಪಿಸ್ತೂಲ್‌ ಮಿಶ್ರ ತಂಡ ಸ್ಪರ್ಧೆಯಲ್ಲಿ ಗೆದ್ದು ಸ್ವರ್ಣ ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ ಪದಕ ಪಟ್ಟಿಯಲ್ಲಿ ಭಾರತವನ್ನು ಅಗ್ರಸ್ಥಾನದಲ್ಲಿರುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. 

ಶೂಟಿಂಗ್‌ ವಿಶ್ವಕಪ್‌: ಭಾರತಕ್ಕೆ ಮತ್ತೆ 4 ಪದಕ

ಡಾ.ಕರ್ಣಿ ಸಿಂಗ್‌ ಶೂಟಿಂಗ್‌ ರೇಂಜ್‌ನಲ್ಲಿ ಶನಿವಾರ ನಡೆದ ಸ್ಪರ್ಧೆಯಲ್ಲಿ ಸಿಧು ಮತ್ತು ತೇಜಸ್ವಿನಿ ಅವರು ಭಾರತೀಯರೇ ಆದ ಗುರುಪ್ರೀತ್‌ ಸಿಂಗ್‌ ಮತ್ತು ಅಶೋಕ್‌ ಅಭಿಂದ್ಯಾ ಪಾಟೀಲ್‌ ಅವರನ್ನು 9-1 ಅಂತರದಲ್ಲಿ ಸೋಲಿಸಿದರು. ಶುಕ್ರವಾರ ನಡೆದ 25 ಮೀ. ರ‍್ಯಾಪಿಡ್‌ ಫೈರ್‌ ಪಿಸ್ತೂಲ್‌ ವೈಯಕ್ತಿಕ ಸ್ಪರ್ಧೆಯಲ್ಲಿ ಸಿಧು ಬೆಳ್ಳಿ ಗೆದ್ದುಕೊಂಡಿದ್ದರು. ಇದೀಗ ಇನ್ನೊಂದು ಸ್ವರ್ಣಗೆದ್ದು ಸಂಭ್ರಮಿಸಿದ್ದಾರೆ. ಭಾರತ ಈ ವಿಶ್ವಕಪ್‌ ಪದಕ ಪಟ್ಟಿಯಲ್ಲಿ ಒಟ್ಟು 13 ಸ್ವರ್ಣ ಗೆದ್ದು ಅಗ್ರ ಸ್ಥಾನದಲ್ಲಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

34 ವಾರಗಳ ಗರ್ಭಿಣಿ.. ತುಂಬು ಬಸುರಿಯಾದರೂ 7 ವಿಶ್ವ ಮ್ಯಾರಥಾನ್ ಓಡಿ ಮುಗಿಸಿದ 38ರ ಮಹಿಳೆ!
ವಿಶ್ವಕಪ್ ಇಲ್ಲದೇ ವೃತ್ತಿಜೀವನಕ್ಕೆ ವಿದಾಯ ಹೇಳಿದ ಕ್ರಿಸ್ಟಿಯಾನೋ ರೊನಾಲ್ಡೋ..! ಕಳಚಿತು ಫುಟ್ಬಾಲ್‌ನ ಮತ್ತೊಂದು ಕೊಂಡಿ