* ಮುಂಬರುವ ಒಲಿಂಪಿಕ್ಸ್‌ನಲ್ಲಿ ಥ್ರೋ ಬಾಲ್ ಕ್ರೀಡೆ ಸೇರಿಸಲು ಪ್ರಯತ್ನ
* ಅಂತಾರಾಷ್ಟ್ರೀಯ ಥ್ರೋಬಾಲ್ ಒಕ್ಕೂಟದಿಂದ ಪ್ರಯತ್ನ
* ಬೆಂಗಳೂರಿನಲ್ಲಿ ಆರಂಭಿಸಲಾದ ಐಟಿಎಫ್ ಈಗಾಗಲೇ 44 ರಾಷ್ಟ್ರಗಳಲ್ಲಿ ಗುರುತಿಸಿಕೊಂಡಿದೆ.
ನವದೆಹಲಿ(ಸೆ.22): ಮುಂಬರುವ ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್(Paralympics)ನಲ್ಲಿ ಥ್ರೋಬಾಲ್ ಸ್ಪರ್ಧೆಯನ್ನು ಸೇರಿಸಲು ಅಂತಾರಾಷ್ಟ್ರೀಯ ಥ್ರೋಬಾಲ್ ಒಕ್ಕೂಟ(ಐಟಿಎಫ್) ಪ್ರಯತ್ನಿಸುತ್ತಿದ್ದು, ಈ ಬಗ್ಗೆ 20ಕ್ಕೂ ಹೆಚ್ಚು ರಾಷ್ಟ್ರಗಳ ಜೊತೆ ಸಭೆ ನಡೆಸಿ ಚರ್ಚಿಸಿದೆ.
ಸೆಪ್ಟೆಂಬರ್ 19ರಂದು ವರ್ಚುವಲ್ ಆಗಿ ನಡೆದ ವಾರ್ಷಿಕ ಸಭೆಯಲ್ಲಿ ಹಲವು ದೇಶಗಳ ಐಟಿಎಫ್ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಥ್ರೋಬಾಲ್(Throw Ball) ಸ್ಪರ್ಧೆಯನ್ನು ಒಲಿಂಪಿಕ್ಸ್‌ಗೆ ಸೇರಿಸಬೇಕೆಂದು ಅವರು ಒಮ್ಮತದ ಮನವಿ ಮಾಡಿದ್ದು, ಈಗಾಗಲೇ ಕ್ರೀಡಾ ಒಕ್ಕೂಟಗಳ ಜಾಗತಿಕ ಸಂಸ್ಥೆ(ಜಿಎಐಎಸ್‌ಎಫ್)ಗೆ ಸದಸ್ಯತ್ವಕ್ಕಾಗಿ ಮನವಿ ಸಲ್ಲಿಸಿದೆ.
ನೀರಜ್ ಚೋಪ್ರಾ ಹೆಸರಲ್ಲಿ ಮಾರುಕಟ್ಟೆಗೆ ಬಂದ ಜೆರ್ಸಿ, ನೀರಿನ ಬಾಟಲಿ!
ವಿಶ್ವದೆಲ್ಲೆಡೆ ಥ್ರೋಬಾಲನ್ನು ಪ್ಯಾರಾ ಸ್ಪರ್ಧಿಗಳೂ ಕೂಡಾ ಆಡಬೇಕೆಂದು ಅವರನ್ನು ಬೆಂಬಲಿಸುತ್ತಿದ್ದು, ಪ್ಯಾರಾಲಿಂಪಿಕ್ಸ್‌ಗೂ ಥ್ರೋಬಾಲ್ ಸೇರ್ಪಡೆಗೆ ಪ್ರಯತ್ನಿಸುತ್ತಿದೆ. ಜೊತೆಗೆ ತೃತೀಯ ಲಿಂಗಿಗಳನ್ನೂ ಕ್ರೀಡೆಯತ್ತ ಉತ್ತೇಜಿಸುತ್ತಿರುವ ಐಟಿಎಫ್ ಅವರಿಗಾಗಿ ಕಳೆದ ತಿಂಗಳು ಪ್ರಪ್ರಥಮ ಬಾರಿ ತಮಿಳುನಾಡಿನಲ್ಲಿ ಥ್ರೋಬಾಲ್ ಟೂರ್ನಿಯನ್ನು ಆಯೋಜಿಸಿದೆ. ಬೆಂಗಳೂರಿ(Bengaluru)ನಲ್ಲಿ ಆರಂಭಿಸಲಾದ ಐಟಿಎಫ್ ಈಗಾಗಲೇ 44 ರಾಷ್ಟ್ರಗಳಲ್ಲಿ ಗುರುತಿಸಿಕೊಂಡಿದೆ.
ಡುರಾಂಡ್ ಕಪ್: ಕ್ವಾರ್ಟರ್‌ಗೆ ಬಿಎಫ್‌ಸಿ
ಕೋಲ್ಕತಾ: ಗುಂಪು ಹಂತದ ತನ್ನ ಕೊನೆಯ ಪಂದ್ಯದಲ್ಲಿ ಭಾರತೀಯ ನೇವಿ(ನೌಕಾಪಡೆ) ತಂಡದ ವಿರುದ್ಧ 5-3 ಗೋಲುಗಳಿಂದ ಗೆಲ್ಲುವ ಮೂಲಕ ಬೆಂಗಳೂರು ಎಫ್‌ಸಿ(ಬಿಎಫ್‌ಸಿ) ಡುರಾಂಡ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದೆ.
Oh, when the Blues go marching in. 🎶 pic.twitter.com/Ctbmj4vFJJ
— Bengaluru FC (@bengalurufc)TOP OF THE TABLE, BFC! 💥🔵 pic.twitter.com/H9WsFftUiA
— Bengaluru FC (@bengalurufc)ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲಾರ್ಧದಲ್ಲಿ ಇಂಡಿಯನ್ ನೇವಿ 2 ಗೋಲು (18 ಮತ್ತು 29ನೇ ನಿಮಿಷ) ಬಾರಿಸುವ ಮೂಲಕ ಮುನ್ನಡೆ ಸಾಧಿಸಿತು. ಆದರೆ ದ್ವಿತೀಯಾರ್ಧದಲ್ಲಿ ಪುಟಿದೆದ್ದ ಬಿಎಫ್‌ಸಿ 4 ಗೋಲು ಗಳಿಸಿತು. ಬಳಿಕ ಹೆಚ್ಚುವರಿ ಸಮಯದಲ್ಲಿ 1 ಗೋಲು ದಾಖಲಿಸಿತು. ಅಗಸ್ಟಿನ್(52ನೇ ನಿಮಿಷ) ಹರ್ಮನ್‌ಪ್ರೀತ್ ಸಿಂಗ್(60 ಮತ್ತು 80ನೇ ನಿ.,) ಸುನಿಲ್ ಚೆಟ್ರಿ(73ನೇ ನಿ.,) ಹಾಗೂ ಬೆಕೆಯ್(91ನೇ ನಿ.,) ಗೋಲು ಬಾರಿಸಿದರು. ಹೆಚ್ಚುವರಿ ಸಮಯದಲ್ಲಿ ನೇವಿ ತಂಡ 1 ಗೋಲು ಬಾರಿಸಿದರೂ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ. ಸೆಪ್ಟೆಂಬರ್ 25ರಂದು ಆರ್ಮಿ ಗ್ರೀನ್ ವಿರುದ್ಧ ಕ್ವಾರ್ಟರ್‌ಫೈನಲ್ ಪಂದ್ಯ ನಡೆಯಲಿದೆ.