ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಟೂರ್ನಿ: ಸಿಂಧುಗೆ ಸುಲಭ ಸವಾಲು

By Suvarna News  |  First Published Feb 25, 2021, 8:37 AM IST

ಪ್ರತಿಷ್ಠಿತ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದ್ದು, ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧುಗೆ ಕ್ವಾರ್ಟರ್‌ ಫೈನಲ್‌ ಹಂತದವರೆಗೂ ಸುಲಭ ಸವಾಲು ಎದುರಾಗುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ನವದೆಹಲಿ(ಫೆ.25): ಬಹುನಿರೀಕ್ಷಿತ ಮಾರ್ಚ್‌ 17ರಿಂದ ಆರಂಭಗೊಳ್ಳಲಿರುವ ಪ್ರತಿಷ್ಠಿತ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನ ವೇಳಾಪಟ್ಟಿ ಪ್ರಕಟಗೊಂಡಿದ್ದು, ಭಾರತದ ಪಿ.ವಿ.ಸಿಂಧುಗೆ ಕ್ವಾರ್ಟರ್‌ ಫೈನಲ್‌ ವರೆಗೂ ಸುಲಭ ಸವಾಲು ಎದುರಾಗಲಿದೆ. 

ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು ಮೊದಲ ಸುತ್ತಿನಲ್ಲಿ ಮಲೇಷ್ಯಾದ ಸೋನಿಯಾ ಚೇಯಾ ವಿರುದ್ಧ ಸೆಣಸಲಿದ್ದಾರೆ. ಸಿಂಧು ಮುನ್ನಡೆದರೆ ಕ್ವಾರ್ಟರ್‌ನಲ್ಲಿ ಜಪಾನ್‌ನ ಅಕಾನೆ ಯಮಗುಚಿ ಎದುರಾಗಲಿದ್ದಾರೆ. 5ನೇ ಶ್ರೇಯಾಂಕಿತ ಸಿಂಧು ಕ್ವಾರ್ಟರ್‌ ಫೈನಲ್‌ನಲ್ಲಿ ಯಮಗುಚಿಯನ್ನು ಮಣಿಸಿದರೆ, ಸೆಮಿಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಕರೋಲಿನಾ ಮರಿನ್‌ರನ್ನು ಎದುರಿಸಲಿದ್ದಾರೆ. ಇದೇ ವೇಳೆ ಸೈನಾ ನೆಹ್ವಾಲ್‌ಗೆ ಮೊದಲ ಸುತ್ತಿನಲ್ಲೇ ಕಠಿಣ ಸ್ಪರ್ಧೆ ಎದುರಾಗಲಿದೆ. ಮೊದಲ ಪಂದ್ಯದಲ್ಲಿ ಸೈನಾ ಡೆನ್ಮಾರ್ಕ್ನ ಮಿಯಾ ಬ್ಲಿಚ್‌ಫೆಲ್ಟ್‌ ವಿರುದ್ಧ ಆಡಲಿದ್ದಾರೆ.

Tap to resize

Latest Videos

BWF ರ‍್ಯಾಂಕಿಂಗ್‌: ಅಗ್ರ 20ಯೊಳಗೆ ಸಾತ್ವಿಕ್‌, ಅಶ್ವಿನ್‌ ಪೊನ್ನಪ್ಪಗೆ ಸ್ಥಾನ

ಇನ್ನು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕಿದಂಬಿ ಶ್ರೀಕಾಂತ್‌ ಇಂಡೋನೇಷ್ಯಾದ ಟಾಮಿ ಸುಗಿರ್ಟೊ ಎದುರಿಸಿದರೆ, ಪರುಪಳ್ಳಿ ಕಶ್ಯಪ್‌ಗೆ ನಂ.1 ಶ್ರೇಯಾಂಕಿತ ಆಟಗಾರ ಜಪಾನಿನ ಕೆಂಟೊ ಮೊಮಂಟೊ ಮೊದಲ ಸುತ್ತಿನಲ್ಲೇ ಮುಖಾಮುಖಿಯಾಗಲಿದ್ದಾರೆ.

click me!