ಟೋಕಿಯೋ ಒಲಿಂಪಿಕ್‌ ಅರ್ಹತೆ ನಿರೀಕ್ಷೆಯಲ್ಲಿ ಶ್ರೀಹರಿ

By Kannadaprabha News  |  First Published Apr 10, 2021, 9:19 AM IST

ಕರ್ನಾಟಕದ ಪ್ರತಿಭಾನ್ವಿತ ಈಜುಪಟು ಶ್ರೀಹರಿ ಟೋಕಿಯೋ ಒಲಿಂಪಿಕ್ಸ್‌ ಅರ್ಹತೆ ಪಡೆಯುವತ್ತ ಚಿತ್ತ ನೆಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ಬೆಂಗಳೂರು(ಏ.10): ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ನಿರೀಕ್ಷೆಯಲ್ಲಿರುವ ಭಾರತದ ತಾರಾ ಈಜುಪಟುಗಳಾದ ಶ್ರೀಹರಿ ನಟರಾಜ್‌, ಸಾಜನ್‌ ಪ್ರಕಾಶ್‌ ಸೇರಿ 13 ಸದಸ್ಯರ ಭಾರತ ತಂಡ ಶುಕ್ರವಾರ ತಾಷ್ಕೆಂಟ್‌ಗೆ ಪ್ರಯಾಣಿಸಿತು. 

ಏಪ್ರಿಲ್ 12ರಿಂದ ಇಲ್ಲಿ ನಡೆಯಲಿರುವ ಉಜ್ಬೇಕಿಸ್ತಾನ ಓಪನ್‌ ಈಜುಕೂಟದಲ್ಲಿ ಸ್ಪರ್ಧಿಸಲಿರುವ ಭಾರತೀಯ ಈಜುಗಾರರು, ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ. ಶ್ರೀಹರಿ ಹಾಗೂ ಸಾಜನ್‌ ಈಗಾಗಲೇ ‘ಬಿ’ ದರ್ಜೆ ಅರ್ಹತಾ ಗುರಿಯನ್ನು ತಲುಪಿದ್ದು, ಒಲಿಂಪಿಕ್ಸ್‌ ಕೋಟಾ ಖಚಿತ ಪಡಿಸಿಕೊಳ್ಳಲು ‘ಎ’ ದರ್ಜೆಯ ಅರ್ಹತಾ ಗುರಿಯನ್ನು ತಲುಪಬೇಕಿದೆ. 

Tap to resize

Latest Videos

ಸೇಯ್ಲಿಂಗ್‌: ಒಲಿಂಪಿ​ಕ್ಸ್‌ಗೆ ರಾಜ್ಯದ ಗಣಪತಿಗೆ ಅರ್ಹತೆ

ಈ ಇಬ್ಬರ ಜೊತೆಗೆ ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಂ ಯೋಜನೆ (ಟಾಫ್ಸ್‌) ಪಟ್ಟಿಯಲ್ಲಿರುವ ಮಾನ ಪಟೇಲ್‌, ಶಿವಾನಿ ಕಟಾರಿಯಾ ಮೇಲೂ ನಿರೀಕ್ಷೆ ಇಡಲಾಗಿದೆ. ಅನುಭವಿ ಕೋಚ್‌ಗಳಾದ ನಿಹರ್‌ ಅಮಿನ್‌, ಪ್ರದೀಪ್‌ ಕುಮಾರ್‌ ಹಾಗೂ ಸಂದೀಪ್‌ ಸೆಜ್ವಾಲ್‌ ತಂಡದೊಂದಿಗೆ ಪ್ರಯಾಣಿಸಿದ್ದಾರೆ. ಕಳೆದ ವರ್ಷ ಮಾಚ್‌ರ್‍ ಬಳಿಕ ಭಾರತೀಯ ಈಜುಗಾರರು ಸ್ಪರ್ಧಿಸಲಿರುವ ಮೊದಲ ಅಂತಾರಾಷ್ಟ್ರೀಯ ಟೂರ್ನಿ ಇದಾಗಿದೆ.
 

click me!