ಈ ವರ್ಷವೂ ಫ್ರೆಂಚ್‌ ಓಪನ್ ಟೆನಿಸ್ ಟೂರ್ನಿ‌ ಮುಂದೂಡಿಕೆ?

By Suvarna NewsFirst Published Apr 6, 2021, 12:05 PM IST
Highlights

2021ನೇ ಸಾಲಿನ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿ ಮುಂದೂಡುವ ಸಾಧ್ಯತೆ ಬಹುತೇಕ ದಟ್ಟವಾಗತೊಡಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಪ್ಯಾರಿಸ್(ಏ.06)‌: ಕೊರೋನಾ ಹೆಮ್ಮಾರಿಯ ಅಟ್ಟಹಾಸದಿಂದಾಗಿ 2021ನೇ ಸಾಲಿನ ವರ್ಷದ 2ನೇ ಗ್ರ್ಯಾನ್‌ ಸ್ಲಾಂ ಟೆನಿಸ್‌ ಟೂರ್ನಿ ಫ್ರೆಂಚ್‌ ಓಪನ್‌ ಮುಂದೂಡಿಕೆಯಾಗುವ ಸಾಧ್ಯತೆ ಇದೆ. 

‘ದೇಶದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ಟೂರ್ನಿ ಮುಂದೂಡುವ ಬಗ್ಗೆ ಯೋಚಿಸುವಂತೆ ಆಯೋಜಕರೊಂದಿಗೆ ಚರ್ಚೆ ನಡೆಸುತ್ತಿದ್ದೇವೆ’ ಎಂದು ಫ್ರಾನ್ಸ್‌ನ ಕ್ರೀಡಾ ಸಚಿವ ತಿಳಿಸಿದ್ದಾರೆ. ಟೂರ್ನಿಯ ದಿನಾಂಕ ಬದಲಿಸುವ ಕುರಿತಂತೆ ನಾವು ಫ್ರೆಂಚ್‌ ಟೆನಿಸ್‌ ಫೆಡರೇಷನ್‌ ಜತೆ ಚರ್ಚೆ ನಡೆಸುತ್ತಿದ್ದೇವೆ ಎಂದು ಕ್ರೀಡಾ ಸಚಿವ ರೋಕ್ಸನಾ ಮಾರ್ಚಿನ್ಯೂ ಫ್ರಾನ್ಸ್‌ ಇನ್ಫೋ ರೇಡಿಯೋ ಸ್ಟೇಷನ್‌ಗೆ ತಿಳಿಸಿದ್ದಾರೆ.

ಮುಂಬೈನಿಂದ ಐಪಿಎಲ್‌ ಪಂದ್ಯಗಳು ಸ್ಥಳಾಂತರವಿಲ್ಲ

ಫ್ರಾನ್ಸ್‌ನಲ್ಲಿ 3ನೇ ಹಂತದ ಲಾಕ್‌ಡೌನ್‌ ಕಳೆದ ಶನಿವಾರದಿಂದ ಆರಂಭಗೊಂಡಿದ್ದು ಮೇ ತಿಂಗಳ 2ನೇ ಇಲ್ಲವೇ 3ನೇ ವಾರದ ವರೆಗೂ ಮುಂದುವರಿಯುವ ಸಾಧ್ಯತೆ ಇದೆ. ಮೇ 23ರಿಂದ ಜೂನ್ 6ರ ವರೆಗೂ ಫ್ರೆಂಚ್‌ ಓಪನ್‌ ನಡೆಯಬೇಕಿದೆ. ಕಳೆದ ವರ್ಷ ಟೂರ್ನಿ 4 ತಿಂಗಳು ತಡವಾಗಿ ನಡೆದಿತ್ತು.
 

click me!