* ತಮ್ಮದೇ ದಾಖಲೆಯನ್ನು ಮುರಿದ ದೇವೇಂದ್ರ ಝಾಜಾರಿಯಾ
* ಟೋಕಿಯೋ ಪ್ಯಾರಾಲಿಂಪಿಕ್ ಕಡೆ ಸಿದ್ಧತೆ
* ದೆಹಲಿಯ ಪ್ರಾಕ್ಟೀಸ್ ನಲ್ಲಿ ತಮ್ಮದ ದಾಖಲೆ ಮುರಿದಿದ್ದಾರೆ
ನವದೆಹಲಿ(ಜೂ. 30) ಎರಡು ಬಾರಿ ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ದೇವೇಂದ್ರ ಝಾಜಾರಿಯಾ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ. ನವದೆಹಲಿಯ ನೆಹರು ಸ್ಟೆಡಿಯಂನಲ್ಲಿ ನಡೆದ ಪ್ರಾಕ್ಟೀಸ್ ನಲ್ಲಿ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ.
ನಾನು ಟೋಕಿಯೋ ಒಲಿಂಪಿಕ್ಸ್ ಆಧಾರದಲ್ಲಿ ಹೆಚ್ಚಿನ ತರಬೇತಿ ಮಾಡಿಕೊಂಡು ಬಂದಿದ್ದೇನೆ. ಸಾಯಿ ಗಾಂಧಿನಗರ ಸಿಬ್ಬಂದಿ ನನಗೆ ಎಲ್ಲ ರೀತಿಯ ನೆರವು ನೀಡಿದ್ದು ಲಾಕ್ ಡೌನ್ ನಲ್ಲಿ ನಿರಂತರ ಅಭ್ಯಾಸ ಮಾಡಿದ್ದೇನೆ. ನನ್ನ ಕುಟುಂಬವನ್ನು ನೋಡದೇ ತಿಂಗಳುಗಳೆ ಆಗಿದೆ. ನನಗೆ ಈ ತ್ಯಾಗ ಮುಂದಿನ ಪ್ಯಾರಾಲಿಂಪಿಕ್ಸ್ ನಲ್ಲಿ ಇನ್ನೊಂದು ಚಿನ್ನ ತಂದುಕೊಡಲಿದೆ ಎಂದು ಏಷಿಯಾನೆಟ್ ನೊಂದಿಗೆ ಮಾತನಾಡುತ್ತ ತಿಳಿಸಿದರು.
ಟೋಕಿಯೋ ಸ್ಥಾನ ಭದ್ರ ಮಾಡಿಕೊಂಡ ದ್ಯುತಿ ಚಾಂದ್
ತಮ್ಮ ಹಿಂದಿನ ದಾಖಲೆ 63.97 ಮೀಟರ್ ಮುರಿದ ಜಾವೆಲಿನ್ ಎಸೆತಗಾರ ಈ ಬಾರಿ 65.71 ಮೀಟರ್ ದಾಖಲೆ ಮಾಡಿದರು. ಪದ್ಮಶ್ರೀ, ಖೇಲ್ ರತ್ನ, ಅರ್ಜುನ ಪ್ರಶಸ್ತಿಗೆ ದೇವೇಂದ್ರ ಪಾತ್ರವಾಗಿದ್ದಾರೆ. ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ ಕಡೆ ಹೆಜ್ಜೆ ಇಟ್ಟಿದ್ದು ಭಾರತದ ಪಾಲಿಗೆ ದೇವೇಂದ್ರ ಕಪ್ ತರುವ ಫೆವರೇಟ್.