ಕೊರೋನಾ ಲಸಿಕೆ ಮೊದಲ ಡೋಸ್‌ ಪಡೆದ ಮೇರಿ ಕೋಮ್

Published : May 13, 2021, 08:17 AM IST
ಕೊರೋನಾ ಲಸಿಕೆ ಮೊದಲ ಡೋಸ್‌ ಪಡೆದ ಮೇರಿ ಕೋಮ್

ಸಾರಾಂಶ

* ಕೋವಿಡ್‌ ಮೊದಲ ಡೋಸ್‌ ಲಸಿಕೆ ಹಾಕಿಸಿಕೊಂಡ ಮೇರಿ ಕೋಮ್‌ * ಟೋಕಿಯೋ ಒಲಿಂಪಿಕ್ಸ್‌ಗೆ ಸಜ್ಜಾಗುತ್ತಿರುವ ಭಾರತದ ತಾರಾ ಬಾಕ್ಸರ್ ಮೇರಿ *  ಟೋಕಿಯೋಗೆ ಹೊರಡುವ ಮುನ್ನ 2ನೇ ಡೋಸ್‌ ಲಸಿಕೆ ಪಡೆಯಲಿದ್ದಾರೆ.

ಪುಣೆ(ಮೇ.13): ಭಾರತದ ತಾರಾ ಬಾಕ್ಸರ್‌ಗಳಾದ ಮೇರಿ ಕೋಮ್‌ ಹಾಗೂ ಲೊವ್ಲಿನಾ ಬೊರ್ಗೊಹೇನ್‌ ಇಲ್ಲಿ ಬುಧವಾರ(ಮೇ.12) ಕೊರೋನಾ ಲಸಿಕೆ ಮೊದಲ ಡೋಸ್‌ ಹಾಕಿಸಿಕೊಂಡರು. 

ಈ ಇಬ್ಬರು ಇಲ್ಲಿನ ಸೇನಾ ಕ್ರೀಡಾ ಸಂಸ್ಥೆಯಲ್ಲಿ ಟೋಕಿಯೋ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸುತ್ತಿದ್ದಾರೆ. ಜುಲೈವರೆಗೂ ಇಲ್ಲಿಯೇ ಅಭ್ಯಾಸ ಮುಂದುವರಿಸಲಿದ್ದು, ಟೋಕಿಯೋಗೆ ಹೊರಡುವ ಮುನ್ನ 2ನೇ ಡೋಸ್‌ ಲಸಿಕೆಯನ್ನು ಇಲ್ಲಿಯೇ ಹಾಕಿಸಿಕೊಳ್ಳಲಿದ್ದಾರೆ.

ಅರ್ಜುನ ಪ್ರಶಸ್ತಿ ವಿಜೇತ ಟಿಟಿ ಪಟು ಚಂದ್ರ ನಿಧನ

ಚೆನ್ನೈ: ಕೊರೋನಾ ಸೋಂಕಿಗೆ ತುತ್ತಾಗಿದ್ದ ಅರ್ಜುನ ಪ್ರಶಸ್ತಿ ವಿಜೇತ ಭಾರತದ ಮಾಜಿ ಟೇಬಲ್‌ ಟೆನಿಸ್‌ ಆಟಗಾರ, ಮಾಜಿ ಕೋಚ್‌ ವಿ.ಚಂದ್ರಶೇಖರ್‌ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ನಿಧನರಾಗಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು. 3 ಬಾರಿ ರಾಷ್ಟ್ರೀಯ ಚಾಂಪಿಯನ್‌ ಆಗಿದ್ದ ಅವರು, 1982ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಸೆಮಿಫೈನಲ್‌ ತಲುಪಿದ್ದರು. ಟೇಬಲ್‌ ಟೆನಿಸ್‌ ವಲಯದಲ್ಲಿ ಚಂದ್ರ ಎಂದೇ ಖ್ಯಾತಿ ಪಡೆದಿದ್ದ ಅವರು, ಭಾರತದ ಅಗ್ರ ಟಿಟಿ ಆಟಗಾರ ಜಿ. ಸತ್ಯನ್‌ರ ಬಾಲ್ಯದ ಕೋಚ್‌ ಆಗಿದ್ದರು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Asian Games 2026: 17 ಪದಕ ಗೆದ್ದರೂ 15ನೇ ಸ್ಥಾನಕ್ಕೆ ಕುಸಿದ ಭಾರತ..! ಶೂಟಿಂಗ್‌ನಲ್ಲಿ 5ನೇ ದಿನವೂ ಸಿಗಲಿಲ್ಲ ಬಂಗಾರ!
ಪುರುಷ ವೇಷ ತೊಟ್ಟು ತಾಲಿಬಾನಿಗಳಿಗೇ ಚಮಕ್​ ಕೊಟ್ಟ ಧೀರೆ: ಏಷ್ಯನ್​ ಕ್ರೀಡಾಕೂಟದಲ್ಲಿ ಬೆಳ್ಳಿಯ ತಾರೆ