BWF World Championships : ಐತಿಹಾಸಿಕ ಬೆಳ್ಳಿ ಪದಕ ಗೆದ್ದ ಕಿದಂಬಿ ಶ್ರೀಕಾಂತ್

By Suvarna News  |  First Published Dec 19, 2021, 10:45 PM IST

ಫೈನಲ್ ಪಂದ್ಯದಲ್ಲಿ ಸಿಂಗಾಪುರದ ಲೊಹ್ ಕೀನ್ ಯೆವ್ ವಿರುದ್ಧ ಸೋಲು
ಕಳೆದ ಎರಡು ಪಂದ್ಯಗಳಲ್ಲಿ ಸಿಂಗಾಪುರದ ಷಟ್ಲರ್ ವಿರುದ್ಧ ಶ್ರೀಕಾಂತ್ ಗೆ ಮೊದಲ ಸೋಲು
ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಮೊದಲ ಪುರುಷ ಷಟ್ಲರ್ ಕೆ.ಶ್ರೀಕಾಂತ್


ಹುಯೆಲ್ವಾ(ಡಿ.19‌): ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಷಿಪ್ ನಲ್ಲಿ (BWF World Championship) ಭಾರತದ ಕಿದಂಬಿ ಶ್ರೀಕಾಂತ್ ( Kidambi Srikanth)  ಐತಿಹಾಸಿಕ ಬೆಳ್ಳಿ (Silver)ಪದಕ ಸಾಧನೆ ಮಾಡಿದ್ದಾರೆ. ಭಾನುವಾರ ನಡೆದ ಪ್ರಶಸ್ತಿ ಹೋರಾಟದಲ್ಲಿ ಸಿಂಗಾಪುರದ (Singapore) ಲೊಹ್ ಕೀನ್ ಯೆವ್ (Loh Kean Yew) ವಿರುದ್ಧ ಸೋಲು ಕಾಣುವ ಮೂಲಕ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನಲ್ಲಿ ಬೆಳ್ಳಿ ಪದಕ ಸಾಧನೆ ಮಾಡಿದ ಭಾರತದ ಮೊದಲ ಪುರುಷ ಷಟ್ಲರ್ ಎನ್ನುವ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಪ್ರಶಸ್ತಿಗೆ ಫೇವರಿಟ್ ಆಗಿದ್ದ ಕೆ.ಶ್ರೀಕಾಂತ್ 15-21, 20-22 ಅಂತರದಲ್ಲಿ ಸಿಂಗಾಪುರದ ಷಟ್ಲರ್ ಗೆ ಶರಣಾದರು. ಇದು ಕಳೆದ ಎರಡು ಮುಖಾಮುಖಿಗಳಲ್ಲಿ ಕೀನ್ ಯೆವ್ ವಿರುದ್ಧ ಕೆ.ಶ್ರೀಕಾಂತ್ ಎದುರಿಸಿದ ಮೊದಲ ಸೋಲಾಗಿದೆ.

ವಿಶ್ವ ಶ್ರೇಯಾಂಕದಲ್ಲಿ 15ನೇ ಸ್ಥಾನದಲ್ಲಿರುವ ಕೆ.ಶ್ರೀಕಾಂತ್ 22ನೇ ಸ್ಥಾನದಲ್ಲಿರುವ ಲೊಹ್ ಕೀನ್ ಯೆವ್ ವಿರುದ್ಧ ಕೇವಲ 42 ನಿಮಿಷಗಳ ಹೋರಾಟದಲ್ಲಿ ಆಘಾತಕಾರಿ ಸೋಲು ಕಾಣುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟರು. ಈ ಟೂರ್ನಿಯ ಫೈನಲ್ ಪಂದ್ಯಕ್ಕೂ ಮುನ್ನ ಕೆ.ಶ್ರೀಕಾಂತ್, 2018ರ ಕಾಮನ್ವೆಲ್ತ್ ಗೇಮ್ಸ್ ನಲ್ಲಿ  (Commonwealth Games in 2018) ಕೊನೆಯ ಬಾರಿಗೆ ಕೀನ್ ಯೆವ್ ರನ್ನು ಎದುರಿಸಿದ್ದರು. ಆ ಪಂದ್ಯದಲ್ಲಿ ಶ್ರೀಕಾಂತ್ ನೇರ ಗೇಮ್ ಗಳ ಗೆಲುವು ಸಾಧಿಸಿ ಮುನ್ನಡೆ ಕಂಡಿದ್ದರು.

ಒಟ್ಟಾರೆಯಾಗಿ ಪ್ರತಿಷ್ಠಿತ ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಪದಕ ಸಾಧನೆ ಮಾಡಿದ ನಾಲ್ಕನೇ ಭಾರತೀಯ ಷಟ್ಲರ್ ಕೆ.ಶ್ರೀಕಾಂತ್. ಇದಕ್ಕೂ ಮುನ್ನ 1983ರಲ್ಲಿ ಪ್ರಕಾಶ್‌ ಪಡುಕೋಣೆ (Prakash padukone), 2019ರಲ್ಲಿ ಬಿ. ಸಾಯಿ ಪ್ರಣೀತ್ (B Sai Praneeth) ಪದಕ ಸಾಧನೆ ಮಾಡಿದ್ದರೆ, ಇದೇ ಟೂರ್ನಿಯಲ್ಲಿ ಕೆ.ಶ್ರೀಕಾಂತ್ ಅವರೊಂದಿಗೆ ಲಕ್ಷ್ಯ ಸೆನ್ (Lakshya Sen) ಕೂಡ ಪದಕ ಸಾಧನೆ ಮಾಡಿದ್ದಾರೆ. ಸೆಮಿಫೈನಲ್ ನಲ್ಲಿ ಸೋತ ಲಕ್ಷ್ಯ ಕಂಚಿನ ಪದಕ ಜಯಿಸಿದ್ದರು.
 

Moment to savour! ❤️ became 1st 🇮🇳 Male shuttler to win 🥈at while became 3rd 🇮🇳 Male shuttler to grab 🥉medal. This took India's medal tally at to 1️⃣2️⃣ medals 🔥👏
📸 Badminton Photo pic.twitter.com/NdP98aY8Hi

— BAI Media (@BAI_Media)


ಶನಿವಾರ ನಡೆದ ಪಂದ್ಯದಲ್ಲಿ ದೇಶಬಾಂಧವ ಲಕ್ಷ್ಯ ಸೆನ್ ರನ್ನು ಮ್ಯಾರಥಾನ್ ಪಂದ್ಯದಲ್ಲಿ 17-21, 21-14, 21-17 ರಿಂದ ಸೋಲಿಸಿದ್ದ ಶ್ರೀಕಾಂತ್, ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಫೈನಲ್ ಸಾಧನೆ ಮಾಡಿದ ಭಾರತದ ಮೊದಲ ಪುರುಷರ ಷಟ್ಲರ್ ಎನಿಸಿದ್ದರು.

Badminton World Championship: ಸೆಮೀಸ್‌ಗೇರಿ ಪದಕ ಖಚಿತಪಡಿಸಿಕೊಂಡ ಶ್ರೀಕಾಂತ್, ಲಕ್ಷ್ಯ ಸೆನ್‌..!
ಮಾಜಿ ವಿಶ್ವ ನಂ.1 ಆಟಗಾರ ಕೆ.ಶ್ರೀಕಾಂತ್, 2017ರಲ್ಲಿ ನಾಲ್ಕು ಸೂಪರ್ ಸಿರೀಸ್ ಪ್ರಶಸ್ತಿಗಳನ್ನು ಗೆದ್ದ ಬಳಿಕ ಬಿಡಬ್ಲ್ಯುಎಫ್ ಟೂರ್ ನಲ್ಲಿ ಯಾವುದೇ ಪ್ರಶಸ್ತಿಗಳನ್ನು ಗೆದ್ದಿರಲಿಲ್ಲ. ಫಾರ್ಮ್ ಗೆ ಬರಲು ಒದ್ದಾಡುತ್ತಿದ್ದ ಶ್ರೀಕಾಂತ್, ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಬೆಳ್ಳಿ ಪದಕ ಸಾಧನೆ ಮಾಡುವ ಅದ್ಭುತವಾಗಿ ಫಾರ್ಮ್ ಗೆ ಮರಳಿದಂತಾಗಿದೆ. ಇನ್ನೊಂದೆಡೆ, 24 ವರ್ಷದ ಲೊಹ್ ಕೀನ್ ಯೆವ್, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸಿಂಗಾಪುರದ ಮೊಟ್ಟಮೊದಲ ವಿಶ್ವ ಚಾಂಪಿಯನ್ ಷಿಪ್ ಸ್ವರ್ಣ ಪದಕದ ಸಾಧನೆ ಮಾಡಿದ್ದಾರೆ. ಬ್ಯಾಡ್ಮಿಂಟನ್ ನ ಅದ್ಭುತ ಇತಿಹಾಸ ಹೊಂದಿರುವ ಮಲೇಷ್ಯಾ ಕೂಡ ಈವರೆಗೂ ವಿಶ್ವ ಬ್ಯಾಡ್ಮಿಂಟನ್ ನಲ್ಲಿ ಚಿನ್ನದ ಪದಕ ಗೆಲ್ಲದೇ ಇರುವ ಸಮಯದಲ್ಲಿ ಸಿಂಗಾಪುರದ ಈ ಸಾಧನೆ ವಿಶೇಷವಾಗಿ ಪರಿಣಮಿಸಿದೆ.

Badminton World Championship: ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಸಿಂಧು, ಶ್ರೀಕಾಂತ್‌
ಒಟ್ಟಾರೆಯಾಗಿ ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ ಷಿಪ್ ಟೂರ್ನಿಯಲ್ಲಿ ಬೆಳ್ಳಿ ಪದಕ ಸಾಧನೆ ಮಾಡಿದ ಭಾರತದ ಮೂರನೇ ಷಟ್ಲರ್ ಕೆ.ಶ್ರೀಕಾಂತ್. ಇದಕ್ಕೂ ಮುನ್ನ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪಿವಿ ಸಿಂಧು (PV Sindhu)ಹಾಗೂ ಸೈನಾ ನೆಹ್ವಾಲ್ (Saina Nehwal ) ಕೂಡ ಬೆಳ್ಳಿ ಪದಕ ಸಾಧನೆ ಮಾಡಿದ್ದರು. ಇನ್ನು ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಸ್ವರ್ಣ ಪದಕ ಗೆದ್ದ ಭಾರತದ ಏಕೈಕ ಷಟ್ಲರ್ ಪಿವಿ ಸಿಂಧು. 2019ರ ಟೂರ್ನಿಯಲ್ಲಿ ಜಪಾನ್ ನ ನಜೋಮಿ ಒಕುಹರಾ (Nozomi Okuhara) ಅವರನ್ನು ಫೈನಲ್‌ ಪಂದ್ಯದಲ್ಲಿ ಸೋಲಿಸುವ ಮೂಲಕ ಈ ಸಾಧನೆ ಮಾಡಿದ್ದರು.

Tap to resize

Latest Videos

 

click me!