ಕಬಡ್ಡಿಯಲ್ಲಿ ಭಾರತಕ್ಕೆ ಚಿನ್ನದ ಪದಕ, ರೋಚಕ ಪಂದ್ಯದಲ್ಲಿ ಇರಾನ್ ವಿರುದ್ಧ ಭರ್ಜರಿ ಗೆಲುವು

Published : Sep 26, 2026, 12:02 PM IST
Kabaddi match

ಸಾರಾಂಶ

Asian Games : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಚಿನ್ನದ ಬೇಟಿ ಮುಂದುವರೆದಿದೆ. ಭಾರತ ಪದಕ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದ್ದು, ಮಹಿಳಾ ಕಬಡ್ಡಿಯಲ್ಲಿ ಚಿನ್ನದ ಪದಕ ತನ್ನದಾಗಿಸಿಕೊಂಡಿದೆ.

ಏಷ್ಯನ್ ಗೇಮ್ಸ್ 2026ರಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಸಿಕ್ಕಿದೆ. ಮಹಿಳಾ ಕಬಡ್ಡಿ ಫೈನಲ್ನಲ್ಲಿ ಭಾರತೀಯ ತಂಡ ಇರಾನ್ ತಂಡವನ್ನು 37-34 ಅಂಕಗಳಿಂದ ಸೋಲಿಸಿ ಚಿನ್ನದ ಪದಕ ಗೆದ್ದಿದೆ.

ಕುತೂಹಲಕಾರಿ ಆಟದಲ್ಲಿ ಭಾರತಕ್ಕೆ ಚಿನ್ನ

ಮೊದಲಾರ್ಧದಲ್ಲಿ ಭಾರತ ಉತ್ತಮ ಮುನ್ನಡೆ ಸಾಧಿಸಿತ್ತು. ಹಾಫ್ಟೈಮ್ ವೇಳೆಗೆ ಭಾರತ 22-16 ಅಂಕಗಳಿಂದ ಮುಂದಿತ್ತು. ಆದರೆ ದ್ವಿತೀಯಾರ್ಧದಲ್ಲಿ ಇರಾನ್ ಭರ್ಜರಿ ಕಮ್ಬ್ಯಾಕ್ ಮಾಡಿತ್ತು. ಒಂದು ಹಂತದಲ್ಲಿ ಸ್ಕೋರ್ 27-26ಕ್ಕೆ ತಲುಪಿದ್ದು, ಭಾರತ ತಂಡ ಆಲ್ಔಟ್ ಆಗಿತ್ತು. ಇದರಿಂದ ಪಂದ್ಯ ಸಾಕಷ್ಟು ರೋಚಕ ಹಂತಕ್ಕೆ ತಲುಪಿತ್ತು. ಆದರೆ ಟೈಮ್ಔಟ್ ಬಳಿಕ ಭಾರತೀಯ ತಂಡ ತನ್ನ ಆಟದ ತಂತ್ರವನ್ನು ಬದಲಿಸಿಕೊಂಡು ಭರ್ಜರಿ ಆಟ ಪ್ರದರ್ಶಿಸಿದೆ. ಕೊನೆಯ ಐದು ನಿಮಿಷಗಳಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿ ಮತ್ತೆ ಪಂದ್ಯದಲ್ಲಿ ಹಿಡಿತ ಸಾಧಿಸಿತು. ಒತ್ತಡಕ್ಕೆ ಸಿಲುಕಿದ ಇರಾನ್ ತಂಡದ ಆಟಗಾರರ ವಿರುದ್ಧ ಭಾರತ ನಿರ್ಣಾಯಕ ಅಂಕಗಳನ್ನು ಗಳಿಸಿ ಅಂತಿಮವಾಗಿ 37-34ರ ಗೆಲುವು ದಾಖಲಿಸಿತು.

ನಾಲ್ಕನೇ ಬಾರಿ ಚಿನ್ನ

ಇದರೊಂದಿಗೆ ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಭಾರತದ ಮಹಿಳಾ ಕಬಡ್ಡಿ ತಂಡ ನಾಲ್ಕನೇ ಬಾರಿ ಚಿನ್ನದ ಪದಕ ಗೆದ್ದಂತಾಗಿದೆ. 2018ರ ಜಕಾರ್ತಾ ಏಷ್ಯನ್ ಗೇಮ್ಸ್ನಲ್ಲಿ ಭಾರತ ಬೆಳ್ಳಿ ಪದಕ ಗೆದ್ದಿತ್ತು. ಉಳಿದ ಎಲ್ಲಾ ಏಷ್ಯನ್ ಗೇಮ್ಸ್ಗಳಲ್ಲಿ ಭಾರತೀಯ ಮಹಿಳಾ ಕಬಡ್ಡಿ ತಂಡ ಚಿನ್ನದ ಪದಕ ಗೆದ್ದಿದೆ.

ಇನ್ನು 2026ರ ಏಷ್ಯನ್ ಗೇಮ್ಸ್ನಲ್ಲಿ ಇದು ಭಾರತದ ಮೂರನೇ ಚಿನ್ನದ ಪದಕವಾಗಿದೆ. ಇದಕ್ಕೂ ಮೊದಲು ಭಾರತೀಯ ಮಹಿಳಾ ಕ್ರಿಕೆಟ್ ತಂಡ ಹಾಗೂ ಮಿಶ್ರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಕಮಲಜೀತ್ ಮತ್ತು ಸುರುಚಿ ಸಿಂಗ್ ಚಿನ್ನದ ಪದಕ ಗೆದ್ದಿದ್ದಾರೆ. ಮಹಿಳಾ ಕಬಡ್ಡಿ ತಂಡದ ಈ ಗೆಲುವಿನೊಂದಿಗೆ ಭಾರತ ಒಟ್ಟು 27 ಪದಕಗಳನ್ನು ಗೆದ್ದಿದ್ದು, ಪದಕ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಏಷ್ಯನ್ ಗೇಮ್ಸ್ ಶೂಟಿಂಗ್: ಭಾರತಕ್ಕೆ ಶೂಟಿಂಗ್‌ನಲ್ಲಿ ಕೊನೆಗೂ ಸಿಕ್ತು ಚಿನ್ನ!
Asian Games 2026: 17 ಪದಕ ಗೆದ್ದರೂ 15ನೇ ಸ್ಥಾನಕ್ಕೆ ಕುಸಿದ ಭಾರತ..! ಶೂಟಿಂಗ್‌ನಲ್ಲಿ 5ನೇ ದಿನವೂ ಸಿಗಲಿಲ್ಲ ಬಂಗಾರ!