
ನವದೆಹಲಿ(ಮಾ.29): ಪೃಥ್ವಿರಾಜ್ ತೊಂಡಿಯಾಮನ್, ಲಕ್ಷಯ್ ಶೆಯೋರಾನ್ ಮತ್ತು ಕಿನಾನ್ ಚೆನೈ ಅವರನ್ನೊಳಗೊಂಡ ಭಾರತ ತಂಡ ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್‌ನ ಪುರುಷರ ಟ್ರ್ಯಾಪ್ ಟೀಮ್ ವಿಭಾಗದಲ್ಲಿ ಸ್ವರ್ಣ ಗೆಲ್ಲುವ ಮೂಲಕ ಭಾರತದ ಅಭಿಯಾನ ಅಂತ್ಯಗೊಳಿಸಿದೆ.
ಇದಕ್ಕೂ ಮೊದಲು ನಡೆದ ಮಹಿಳಾ ಟ್ರ್ಯಾಪ್ ಟೀಮ್ ಸ್ಪರ್ಧೆಯಲ್ಲಿ ಭಾರತೀಯ ವನಿತೆಯರೂ ಚಿನ್ನ ಮುಡಿಗೇರಿಸಿಕೊಂಡಿದ್ದಾರೆ. 15 ಚಿನ್ನ, 9 ಬೆಳ್ಳಿ ಹಾಗೂ 6 ಕಂಚಿ ಸೇರಿದಂತೆ ಒಟ್ಟು 30 ಪದಕಗಳೊಂದಿಗೆ ವಿಶ್ವಕಪ್‌ನಲ್ಲಿ ಭಾರತ ಅಗ್ರಸ್ಥಾನವನ್ನು ತನ್ನದಾಗಿಸಿಕೊಂಡಿತು. ಭಾನುವಾರ ನಡೆದ ಕುತೂಹಲಕಾರಿ ಸ್ಪರ್ಧೆಯಲ್ಲಿ ಭಾರತ ಪುರುಷರ ತಂಡ 6-4 ಅಂತರದಿಂದ ಕಜಕಿಸ್ತಾನದ ವಿರುದ್ಧ ಜಯ ದಾಖಲಿಸಿ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಯಿತು.
ಶೂಟಿಂಗ್ ವಿಶ್ವಕಪ್: ಮುಂದುವರೆದ ಭಾರತದ ಪ್ರಾಬಲ್ಯ
ಮಹಿಳಾ ತಂಡಕ್ಕೂ ಸ್ವರ್ಣ ಪದಕ: ಶ್ರೇಯಸಿ ಸಿಂಗ್, ರಾಜೇಶ್ವರಿ ಕುಮಾರಿ ಮತ್ತು ಮನಿಶಾ ಕೀರ್ ಅವರನ್ನೊಳಗೊಂಡ ಭಾರತ ತಂಡ ಇದಕ್ಕೂ ಮೊದಲು ನಡೆದ ಮಹಿಳಾ ವಿಭಾಗದ ಟ್ರ್ಯಾಪ್ ಫೈನಲ್ ಸ್ಪರ್ಧೆಯಲ್ಲಿ ಕಜಕಿಸ್ತಾನದ ವಿರುದ್ಧ 6-0 ಅಂತರದಿಂದ ಭರ್ಜರಿ ಜಯ ದಾಖಲಿಸಿತು.
ಬೆಳ್ಳಿಗೆ ತೃಪ್ತಿ: ವಿಜಯ್‌ವೀರ್ ಸಿಧು, ಗುರುಪ್ರೀತ್ ಸಿಂಗ್ ಮತ್ತು ಆದರ್ಶ ಸಿಂಗ್ ಅವರನ್ನೊಳಗೊಂಡ ಭಾರತ ತಂಡ 25ಮೀ. ರಾರಯಪಿಡ್ ಫಯರ್ ಪಿಸ್ತೂಲ್ ಟೀಮ್ ಸ್ಪರ್ಧೆಯಲ್ಲಿ ಅಮೆರಿಕ ವಿರುದ್ಧ 2-10 ಅಂತರದಿಂದ ಪರಾಭವಗೊಂಡು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.
ಅಂಕ ಪಟ್ಟಿ
ದೇಶ ಚಿನ್ನ ಬೆಳ್ಳಿ ಕಂಚು ಒಟ್ಟು
ಭಾರತ 15 9 6 30
ಅಮೆರಿಕಾ 4 3 1 8
ಇಟಲಿ 2 0 2 4
ಡೆನ್ಮಾರ್ಕ್ 2 0 1 3
ಪೊಲ್ಯಾಂಡ್ 1 3 3 7
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.