IOC Session ಅಂತಾರಾಷ್ಟ್ರೀಯ ಓಲಿಂಪಿಕ್ ಸಮಿತಿ ಸೆಷನ್‌ 2023 ಆತಿಥ್ಯದ ಹಕ್ಕು ಪಡೆದ ಭಾರತ..!

By Suvarna News  |  First Published Feb 19, 2022, 4:28 PM IST

* 2023ರ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಸೆಷನ್‌ಗೆ ಮುಂಬೈ ಆತಿಥ್ಯ

* 139ನೇ ಐಒಸಿ ಸಭೆಯಲ್ಲಿ ಅವಿರೋಧವಾಗಿ ಭಾರತಕ್ಕೆ ಆತಿಥ್ಯದ ಹಕ್ಕನ್ನು ನೀಡಲಾಗಿದೆ

* ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ನಡೆದ ನಡೆದ ಐಒಸಿ ಸಭೆ


ಬೀಜಿಂಗ್(ಫೆ.19): ಟೋಕಿಯೋ ಒಲಿಂಪಿಕ್ಸ್‌ (Tokyo Olympics) ಕ್ರೀಡಾಕೂಟದಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ತೋರಿತ್ತು. ಇದೀಗ 2023ರ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) (International Olympic Committee) ಸೆಷನ್‌ನ ಆತಿಥ್ಯದ ಹಕ್ಕನ್ನು ಪಡೆಯುವಲ್ಲಿ ಭಾರತ ಯಶಸ್ವಿಯಾಗಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ 2023ರ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸೆಷನ್‌ ನಡೆಯಲಿದೆ. ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ನಡೆದ 139ನೇ ಐಒಸಿ ಸಭೆಯಲ್ಲಿ ಅವಿರೋಧವಾಗಿ ಭಾರತಕ್ಕೆ ಆತಿಥ್ಯದ ಹಕ್ಕನ್ನು ನೀಡಲಾಗಿದೆ.

ಒಂದು ಕಡೆ ಬೀಜಿಂಗ್‌ನಲ್ಲಿ ಚಳಿಗಾಲದ ಒಲಿಂಪಿಕ್ಸ್‌ ನಡೆಯುತ್ತಿದ್ದರೆ, ಮತ್ತೊಂದೆಡೆ ಬೀಜಿಂಗ್‌ನಲ್ಲಿಯೇ 139ನೇ ಐಒಸಿ ಸಭೆ ನಡೆದಿದ್ದು, ಈ ವೇಳೆ ಭಾರತಕ್ಕೆ ವೈಯುಕ್ತಿಕ ವಿಭಾಗದಲ್ಲಿ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ ಅಭಿನವ್ ಬಿಂದ್ರಾ(ಬೀಜಿಂಗ್ ಒಲಿಂಪಿಕ್ಸ್ 2008, ಶೂಟಿಂಗ್), ಐಒಸಿ ಸದಸ್ಯೆ ನೀತಾ ಅಂಬಾನಿ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ ನರೀಂದರ್ ಬಾತ್ರಾ ಹಾಗೂ ಕ್ರೀಡಾ ಮತ್ತು ಯುವಜನ ಖಾತೆ ಸಚಿವ ಅನುರಾಗ್ ಠಾಕೂರ್ ಅವರನ್ನೊಳಗೊಂಡ ನಿಯೋಗವು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಸೆಷನ್‌ ಕುರಿತಂತೆ ಯೋಜನೆಯನ್ನು ಪ್ರಸ್ತುತಿಪಡಿಸಿತು.

Tap to resize

Latest Videos

ಈ ಕುರಿತಂತೆ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿರುವ ಅಭಿನವ್ ಬಿಂದ್ರಾ, 2020ರ ಒಲಿಂಪಿಕ್ಸ್‌ ಭಾರತದ ಪಾಲಿಗೆ ಐತಿಹಾಸಿಕವಾಗಿತ್ತು. ಇಂದು ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದ್ದು, 2023ರ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧಿವೇಷನಕ್ಕೆ ಮುಂಬೈ ಸಾಕ್ಷಿಯಾಗಲಿದೆ. ಶ್ರೀಮತಿ ನೀತಾ ಅಂಬಾನಿ (Nita Ambani) ಹಾಗೂ ಡಾ. ನರೀಂದರ್ ಭಾತ್ರಾ(Narinder Batra) ಅವರನ್ನೊಳಗೊಂಡ ನಿಯೋಗದ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆ ಎನಿಸುತ್ತಿದೆ ಎಂದು ಅಭಿನವ್ ಬಿಂದ್ರಾ (Abhinav Bindra) ಟ್ವೀಟ್ ಮಾಡಿದ್ದಾರೆ.

The 2020 Olympics was historic for India. Today, we make more history as Mumbai is announced as host of the 2023 IOC Session. Proud to have been part of the delegation led by Mrs. Nita Ambani, and Dr. Narinder Batra!

— Abhinav A. Bindra OLY (@Abhinav_Bindra)

ಭಾರತವು ಬರೋಬ್ಬರಿ 40 ವರ್ಷಗಳ ಬಳಿಕ ಎರಡನೇ ಬಾರಿಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಸೆಷನ್‌ಗೆ ಆತಿಥ್ಯವನ್ನು ವಹಿಸುತ್ತಿದೆ. ಈ ಮೊದಲು 1983ರಲ್ಲಿ ನವದೆಹಲಿಯಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸೆಷನ್‌ ನಡೆದಿತ್ತು. ಇದೀಗ ಮತ್ತೊಮ್ಮೆ ಭಾರತ ಎರಡನೇ ಬಾರಿಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧಿವೇಷನ ನಡೆಯಲಿದೆ.

ಇನ್ನು 40 ವರ್ಷಗಳ ಕಾಯುವಿಕೆಯ ಬಳಿಕ ಭಾರತಕ್ಕೆ ಒಲಿಂಪಿಕ್ಸ್‌ನ ಆಂದೋಲನ ಮರಳಿದೆ. ಭಾರತದಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧಿವೇಷನ ನಡೆಸಲು ಭಾರತಕ್ಕೆ ಆತಿಥ್ಯ ನೀಡಿರುವುದಕ್ಕೆ ಸಂತೋಷವಾಗುತ್ತವೆ. 2023ರ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ ಮುಂಬೈ ಆತಿಥ್ಯ ವಹಿಸುತ್ತಿರುವುದು ಗೌರವದ ವಿಚಾರವಾಗಿದೆ ಎಂದು ನೀತಾ ಅಂಬಾನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

A truly momentous occasion for the Olympic Movement in India!

Mumbai, India will host the 2023 IOC Session.

"It is our dream to host the Olympic Games in India in the years to come!”
- Smt. Nita Ambani, IOC Member and Founder-Chairperson, Reliance Foundation pic.twitter.com/34dneOIhYF

— Reliance Foundation (@ril_foundation)

Novak Djokovic ಕೋವಿಡ್‌ ಲಸಿಕೆ ಪಡೆಯಲು ಆಸಕ್ತಿ ತೋರಿದ ಟೆನಿಸ್ ದಿಗ್ಗಜ ನೊವಾಕ್ ಜೋಕೋವಿಚ್

ಐಒಸಿ ಸೆಷನ್ ಎನ್ನುವುದು ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ ಸದಸ್ಯ ರಾಷ್ಟ್ರಗಳ ಒಂದು ಸಾಮಾನ್ಯ ಸಭೆಯಾಗಿದೆ. ಇದು ಐಒಸಿಯ ಸರ್ವೊಚ್ಚ ಅಂಗವಾಗಿದ್ದು, ಈ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಅಂತಿಮವಾಗಿರುತ್ತವೆ. ಸಾಮಾನ್ಯವಾಗಿ ವರ್ಷಕ್ಕೊಮ್ಮೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸೆಷನ್ ನಡೆಯತ್ತದೆ. ಕೆಲವೊಮ್ಮೆ ಮಾತ್ರ ವಿಶೇಷ ಸಂದರ್ಭಗಳಲ್ಲಿ, ಐಒಸಿ ಸದಸ್ಯರ ಪೈಕಿ ಮೂರನೇ ಒಂದರಷ್ಟು ರಾಷ್ಟ್ರಗಳ ಸದಸ್ಯರು ಲಿಖಿತವಾಗಿ ಸಭೆ ನಡೆಸಲು ಮನವಿ ಸಲ್ಲಿಸಿದರೆ, ಅಧ್ಯಕ್ಷರ ಸಮ್ಮತಿಯ ಮೇರೆಗೆ ಕೆಲವೊಮ್ಮೆ ವರ್ಷದಲ್ಲಿ ಎರಡು ಬಾರಿ ಸೆಷನ್‌ ನಡೆಯುತ್ತದೆ.

ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯು ಒಟ್ಟು 101 ಮತದಾನದ ಹಕ್ಕು ಹೊಂದಿರುವ ಸದಸ್ಯರನ್ನು ಒಳಗೊಂಡಿದೆ. ಇದರ ಜತೆಗೆ 45 ಗೌರವಾನ್ವಿತ ಸದಸ್ಯರನ್ನು ಹಾಗೂ ಓರ್ವ ಮತದಾನದ ಹಕ್ಕು ಹೊಂದಿಲ್ಲ ಸದಸ್ಯರನ್ನು ಒಳಗೊಂಡಿದೆ. ಇದರ ಜತೆಗೆ ಸುಮಾರು 50ಕ್ಕೂ ಹೆಚ್ಚು ಇಂಟರ್‌ನ್ಯಾಷನಲ್ ಸ್ಪೋರ್ಟ್ಸ್‌ ಫೆಡರೇಷನ್‌ನ ಸದಸ್ಯರು, ಹಿರಿಯ ಪ್ರತಿನಿಧಿಗಳು, ಈ ಐಒಸಿ ಸೆಷನ್‌ನಲ್ಲಿ ಪಾಲ್ಗೊಳ್ಳುತ್ತಾರೆ.

click me!